ಲೈವ್ ಟಿವಿ ನ್ಯೂಸ್

ದಿನಾಂಕ : 11-09-2025

ಯುವಕನ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ

ವರದಿಗಾರರು : ಶಿವಲಿಂಗ ಕುಂಬಾರ್
ವರದಿ ಸ್ಥಳ :ಜಮಖಂಡಿ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 23+

ಹುಡುಗಿಯನ್ನು ಚುಡಾಯಿಸುತಿ ಎಂದು ಆರೋಪಿಸಿ ಯುವಕನ ಮೇಲೆ ಹಿಗ್ಗಾ ಮುಗ್ಗಾ ಕಬ್ಬಿನ ರಾಡಿನಿಂದ ಹಲ್ಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದಲ್ಲಿ ನಡೆದಿದೆ. ಕಳೆದ ರವಿವಾರ ಸಪ್ಟೆಂಬರ್ 7ರಂದು ಮಧ್ಯಾಹ್ನ 3 ಗಂಟೆಗೆ ನಮ್ಮ ಮನೆಯ ಹುಡುಗಿಗೆ ನೀನು ಚುಡಾಯಿಸುತಿದ್ದಿ ಎಂದು ದೂರವಾಣಿ ಕರೆ ಮಾಡಿ ನಗರದ B L D E ಕಾಲೇಜಿನ ಹಿಂಬದಿ ಕರೆಸಿ ಮನಸ್ಸು ಇಚ್ಛೆ ಹಿಗ್ಗಾಮುಗ್ಗ ಥಳಸಿದ್ದಾರೆ ಎಂದು ಆರೋಪ ಮಾಡಿದ್ದಾನೆ. ಥಳಿಸಿಕೊಂಡ ವ್ಯಕ್ತಿ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದ ಶಂಭು ಪುಂಡಲಿಕ್ ಕೋರಿ ಎಂದು ತಿಳಿದು ಬಂದಿದೆ.

ವ್ಯಕ್ತಿಯ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಹೊಡೆಯುವಾಗ ವ್ಯಕ್ತಿಯು ನನ್ನ ತಪ್ಪಿಲ್ಲ ನಾನು ಅಂತ ಕೆಲಸ ಮಾಡಿಲ್ಲ ಎಂದು ಪರಿಪರಿಯಾಗಿ ಬೇಡಿಕೊಂಡರು ಕಬ್ಬಿಣದ ರಾಡಿನಿಂದ ಹೊಡೆದಿದ್ದಾರೆ ಎಂದು ತಿಳಿದು ಬಂದಿದೆ.

ನನ್ನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳು ಕಂಕನವಾಡಿ ಗ್ರಾಮದ ನರಸಿಂಹ ಅತ್ಯಪ್ಪನವರ್, ಈಶ್ವರ್ ಅತ್ಯಪ್ಪನವರ್, ಅಲ್ಲಪ್ಪ ಅತ್ಯಪ್ಪನವರ್, ಬಸು ಅತ್ಯಪ್ಪನವರ್ ಹಾಗೂ ಶ್ರೀಶೈಲ್ ಅತ್ಯಪ್ಪನವರ್ ಎಂದು ಹಲ್ಲೆಗೊಳಗಾದ ವ್ಯಕ್ತಿ ಆರೋಪಿಸಿದ್ದಾನೆ. ಹಲ್ಲೆಗೋಳಗಾದ ವ್ಯಕ್ತಿ ಜಮಖಂಡಿ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾನೆ.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand