ವರದಿಗಾರರು :
ಬಲರಾಮ್ ವಿ. ||
ಸ್ಥಳ :
ಕೆ ಆರ್ ಪುರ
ವರದಿ ದಿನಾಂಕ :
01-12-2025
ಕಾವೇರಿನಗರದಲ್ಲಿ ವಿಜೃಂಭಣೆಯಿಂದ ಜರುಗಿದ ಕನ್ನಡ ರಾಜ್ಯೋತ್ಸವ.
ಮಹದೇವಪುರ: ಯುವಕರು ಒಗ್ಗೂಡಿ “ಕನ್ನಡವೇ ಸತ್ಯ, ಕನ್ನಡವೇ ನಿತ್ಯ” ಎಂಬ ಘೋಷಣೆಗಳೊಂದಿಗೆ ರಾಜ್ಯೋತ್ಸವವನ್ನು ಆಚರಿಸುತ್ತಿರುವುದು ನಾಡಿನ ಏಕತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕ್ಷೇತ್ರದ ಕಾವೇರಿ ನಗರದ ಡಾ. ರಾಜ್‌ಕುಮಾರ್ ಆಟದ ಮೈದಾನದಲ್ಲಿ ಉತ್ತರ ಕರ್ನಾಟಕ ಯುವಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದವರೆಗೆ ಎಲ್ಲೆಡೆ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಮತ್ತು ಏಕತೆಯ ಹರ್ಷೋದ್ಗಾರಗಳೊಂದಿಗೆ ಆಚರಿಸುತ್ತಿರುವುದನ್ನು ನೋಡುವುದು ಹೆಮ್ಮೆಯ ವಿಷಯ ಎಂದು ಅವರು ಹೇಳಿದರು. ಕಾರ್ಯಕ್ರಮದ ಅಂಗವಾಗಿ ಕಾವೇರಿ ನಗರದಿಂದ ವೈಟ್ಫೀಲ್ಡ್ ಮುಖ್ಯರಸ್ತೆ ಮೂಲಕ ತಾಯಿ ಭುವನೇಶ್ವರಿ ರಥವನ್ನು ಯುವಕರು ಘೋಷಣೆಗಳನ್ನು ಕೂಗುತ್ತಾ ವಿಜೃಂಭಣೆಯಿಂದ ಸಾಗಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಗ್ರಾಮಾಂತರ ಮಂಡಲ ಅಧ್ಯಕ್ಷ ಹೂಡಿ ಪಿಳ್ಳಪ್ಪ, ಉತ್ತರ ಕರ್ನಾಟಕ ಯುವಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅನಿಲ್, ಮುಖಂಡರಾದ ಪಂಚಾಕ್ಷರಿ, ಪವನ್ ಶೆಟ್ಟಿ, ಅಭಿಷೇಕ್, ಕಾವೇರಿ ನಗರ ರವಿ, ಅಂಬರೀಶ್, ವೆಂಕಟೇಶ್ ಸೇರಿದಂತೆ ಹಲವಾರು ಭಾಗವಹಿಸಿದ್ದರು.
