ವರದಿಗಾರರು :
ತೌಕೀರ್ ಖತೀಬ್ ||
ಸ್ಥಳ :
ಬೆಳಗಾವಿ
ವರದಿ ದಿನಾಂಕ :
01-12-2025
ಘಟಪ್ರಭಾ: ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರು ಮತ್ತು ವಿದ್ವಾಂಸರು
ಬೆಳಗಾವಿ: ಶ್ರೀ ಜಗದ್ಗುರು ಗುರುಸಿದ್ದೇಶ್ವರ ಸಹಕಾರಿ ಆಸ್ಪತ್ರೆ ಸೊಸೈಟಿ ವತಿಯಿಂದ ನಡೆದ ಘಟಪ್ರಭಾ ಆಯುರ್ವೇದ ಮಹಾವಿದ್ಯಾಲಯದ ರಜತ ಮಹೋತ್ಸವ, ವಾರ್ಷಿಕೋತ್ಸವ ‘ಸ್ಟೆಲಾರ್-2025’ ಹಾಗೂ ವಿದ್ಯಾರ್ಥಿನಿಯರ ವಸತಿಗೃಹ ಅಡಿಗಲ್ಲು ಸಮಾರಂಭ ಸೋಮವಾರ ಮಹಾವಿದ್ಯಾಲಯದ ಹೊರ ಸಭಾಂಗಣದಲ್ಲಿ ಉತ್ಸವದ ಆಭಿವೃದ್ಧಿಯಲ್ಲಿ ಆಯೋಜಿತವಾಯಿತು. ಘಟಪ್ರಭಾದ ಕೆಂಪಯ್ಯಾಸ್ವಾಮಿ ಮಠದ ಶ್ರೀ ಮ.ನಿ.ಪ್ರ.ಸ್ವ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಕಾರ್ಯಕ್ರಮಕ್ಕೆ ದಿವ್ಯಸಾನಿಧ್ಯ ವಹಿಸಿದರು.
ಕಾರ್ಯಕ್ರಮ ಉದ್ಘಾಟಕರಾದ ಕೇಂದ್ರ ಸಚಿವ ಶ್ರೀ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಸಂಸದ ಶ್ರೀ ಜಗದೀಶ್ ಶೆಟ್ಟರ್, ಶಾಸಕರು ಶ್ರೀ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಂಸದ ಶ್ರೀ ರಮೇಶ ವಿ. ಕತ್ತಿ, ಮಾಜಿ ಸಚಿವ ಶ್ರೀ ಎ.ಬಿ. ಪಾಟೀಲ, ಗಣ್ಯರು ಶ್ರೀ ಅರವಿಂದರಾವ ದೇಶಪಾಂಡೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಡಾ. ಬಿ.ಕೆ.ಎಚ್ ಪಾಟೀಲ, ಚೇರಮನ್ನರಾದ ಶ್ರೀ ಎ.ಎಸ್. ಬಡಕುಂದ್ರಿ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉತ್ಸಾಹವನ್ನು ಹೆಚ್ಚಿಸಿದರು.
