ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
ಬೀದರ
ವರದಿ ದಿನಾಂಕ :
02-12-2025
ಡಾ. ಅಂಬೇಡ್ಕರ್ ಪರಿನಿಬ್ಬಾಣ ದಿನದ ಸಮಾವೇಶದ ಕರಪತ್ರ ಬಿಡುಗಡೆ
ಬೀದರ: ಡಾ. ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ 69ನೇ ಪರಿನಿಬ್ಬಾಣ ದಿನದ ಅಂಗವಾಗಿ ಡಿಸೆಂಬರ್ 6ರಂದು ನಡೆಯಲಿರುವ ಬುದ್ಧ ಭಾರತ ನಿರ್ಮಾಣ ಸಂಕಲ್ಪ ಸಮಾವೇಶದ ಕರಪತ್ರವನ್ನು ಇಂದು ಬೆಳಿಗ್ಗೆ 11 ಗಂಟೆಗೆ ಬೀದರದ ಅಂಬೇಡ್ಕರ್ ವೃತ್ತದಲ್ಲಿ ಬಿಡುಗಡೆ ಮಾಡಲಾಯಿತು. ಕರಪತ್ರ ಬಿಡುಗಡೆ ಸಮಾರಂಭದಲ್ಲಿ ಸಮಿತಿ ಅಧ್ಯಕ್ಷ ರಮೇಶ ಡಾಕುಳಗಿ, ಕಾರ್ಯಾಧ್ಯಕ್ಷ ಮಹೇಶ್ ಗೋರನಾಳಕರ್, ಗೌರವಾಧ್ಯಕ್ಷ ಪ್ರಕಾಶ ಮಾಳಗೆ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಿಲಿಕಟ್ಟಿ, ಕಾರ್ಯದರ್ಶಿ ಅರುಣ ಪಟೇಲ್ ಹಾಗೂ ಸಲಹೆಗಾರರಾದ ಅನೀಲಕುಮಾರ ಬೆಲ್ದಾರ, ಡಾ. ಕಾಶಿನಾಥ ಚೆಲ್ವಾ, ಬಾಬುರಾವ ಪಾಸ್ವಾನ, ಕಲ್ಯಾಣರಾವ ಭೋಸ್ಲೆ, ಶ್ರೀಪತಿರಾವ ದಿನೆ, ದಶರಥ ಗುರು, ಬಕ್ಕಪ್ಪಾ ದಂಡಿನ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷರಾದ ರಂಜಿತಾ ಜೈನೊರ್, ಸುಧಾಮಣಿ ಗುಪ್ತಾ, ಲುಂಬಿಣಿ ಪರಾಂಜಪೆ, ಸಂಗೀತಾ ಕಾಂಬಳೆ, ರಾಜಕುಮಾರ ಬನ್ನೆರ್, ಶಾಲಿವಾನ ಬಡಿಗೆರ್, ಬಾಬುರಾವ ಮಿಠಾರೆ, ಸುನೀಲ್ ಸಂಗಮ್, ಸಂಜುಕುಮಾರ ಮೇತ್ರೆ, ನರಸಿಂಗ ಸಾಮ್ರಾಟ, ಸಂದೀಪ ಕಾಂಟೆ, ಗೌತಮ ಭೋಸ್ಲೆ, ಗೌತಮ ಪ್ರಸಾದ, ಪ್ರಕಾಶ ರಾವಣ, ಪುಟುರಾಜ ದಿನೆ, ಸತೀಶ್ ಲಕ್ಕಿ, ತುಕಾರಾಮ ಲಾಡಕರ್, ಸುರೇಶ್ ಜೊಜನಾಕರ್, ಅಂಬೇಡ್ಕರ್ ಸಾಗರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು. ಡಿಸೆಂಬರ್ 6ರಂದು ನಡೆಯಲಿರುವ “ಬುದ್ಧ ಭಾರತ ನಿರ್ಮಾಣ ಸಂಕಲ್ಪ ಸಮಾವೇಶ”ವು ಸಂವಿಧಾನಾತ್ಮಕ ಮೌಲ್ಯಗಳು, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಅರಿವು ಮೂಡಿಸುವ ಉದ್ದೇಶ ಹೊಂದಿದೆ ಎಂದು ಆಯೋಜಕರು ತಿಳಿಸಿದರು.
