ವರದಿಗಾರರು :
ಸಂಗನಗೌಡ ||
ಸ್ಥಳ :
ತಾಳಿಕೋಟಿ
ವರದಿ ದಿನಾಂಕ :
12-09-2025
ವಿಜಯಪುರ–ತಾಳಿಕೋಟಿ ರಾಜ್ಯ ಹೆದ್ದಾರಿಯ ಡೋಣಿ ನದಿಯ ಸೇತುವೆ ಸಂಪೂರ್ಣ ಜಲಾವೃತ
ಕಳೆದ ಕೆಲ ದಿನಗಳಿಂದ ವಿಜಯಪುರ ಮತ್ತು ಪಕ್ಕದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ, ಡೋಣಿ ನದಿ ಉಕ್ಕಿ ಹರಿಯುತ್ತಿದೆ.ಈ ಪರಿಣಾಮವಾಗಿ ವಿಜಯಪುರ–ತಾಳಿಕೋಟಿ ರಾಜ್ಯ ಹೆದ್ದಾರಿಯ ಡೋಣಿ ನದಿಯ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.
ತಾಳಿಕೋಟೆಯ ಸೇತುವೆಯ ಮೇಲೆ ನೀರು ಉಕ್ಕಿ ಹರಿಯುತ್ತಿರುವುದರಿಂದ ವಾಹನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ .ಸೇತುವೆಯ ಎರಡೂ ಬದಿಯಲ್ಲಿ ಬಸ್ಗಳು, ಕಾರುಗಳು, ಟ್ರಕ್ಗಳು ಸೇರಿ ಅನೇಕ ವಾಹನಗಳು ಸಿಲುಕಿಕೊಂಡಿವೆ. ಕೆಲವರು ಬೈಕ್ ಮತ್ತು ಟ್ರಾಕ್ಟರ್ ಮೂಲಕ ಸೇತುವೆ ದಾಟಲು ಯತ್ನಿಸಿದ್ದು, ಇದು ಅಪಾಯಕಾರಿ ಪರಿಸ್ಥಿತಿಗೆ ಕಾರಣವಾಗಿದೆ. ಸ್ಥಳಕ್ಕೆ ಪೊಲೀಸರು ಬಂದು ಬಂದೋಬಸ್ತ್ ಏರ್ಪಡಿಸಿದ್ದು, ವಾಹನ ಚಾಲಕರು ಹಾಗೂ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
