
ಲೈವ್ ಟಿವಿ ನ್ಯೂಸ್

ದಿನಾಂಕ : 18-09-2025
ತಾಳಿಕೋಟಿ ಪಟ್ಟಣದಲ್ಲಿ ಬುಧವಾರ ವಿಶ್ವಕರ್ಮ ಜಯಂತಿ ಆಚರಣೆ
ವರದಿಗಾರರು : ಸಂಗನಗೌಡ ಗಬಸಾವಳಗಿ,
ವರದಿ ಸ್ಥಳ :ತಾಳಿಕೋಟಿ
ಒಟ್ಟು ಓದುಗರ ಸಂಖ್ಯೆ : 8+
ತಾಳಿಕೋಟಿ ಪಟ್ಟಣದಲ್ಲಿ ಬುಧವಾರ ವಿಶ್ವಕರ್ಮ ಸಮಾಜದ ವತಿಯಿಂದ ವಿಶ್ವಕರ್ಮ ಜಯಂತಿ ಆಚರಣೆ ಯನ್ನು ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಪಟ್ಟಣದ ದೇವರ ಹಿಪ್ಪರಗಿ ರಸ್ತೆಯ ಜಾನಕಿ ಹಳ್ಳದ ಹತ್ತಿರ ಅಮರಶಿಲ್ಪಿ ಜಕಣಾಚಾರಿ ಅವರ ವೃತಕ್ಕೆ ತಹಸೀಲ್ದಾರ್ ಡಾ. ವಿನಯಾ ಹೂಗಾರ ಅವರು ಭೂಮಿ ಪೂಜೆ ನೆರವೇರಿಸಿದರು. ನಂತರ ವಿಶ್ವಕರ್ಮ ಸಮಾಜದ ಆರಾಧ್ಯ ದೇವಿ ಶ್ರೀ ಕಾಳಿಕಾ ದೇವಿಯ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ವಿಜಯಕುಮಾರ್ ಕಾರ್ಚಿ ಅವರು, ಸಮಾಜದಲ್ಲಿರುವ ಬಡ, ದುರ್ಬಲ ಹಾಗೂ ಅಶಕ್ತ ಬಾಂಧವರನ್ನು ಆರ್ಥಿಕವಾಗಿ ಬೆಳೆಸುವ ಜವಾಬ್ದಾರಿ ಸಮಾಜದವರ ಮೇಲಿದೆ ಎಂದು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಶ್ರೀಮತಿ ಜುಬೇದಾ ಹುಸೇನಬಾಷಾ ಜಮಾದಾರ, ಪಿಎಸ್ಐ ಶ್ರೀಮತಿ ಜ್ಯೋತಿ ಖೋತ್, ಪಟ್ಟಣದ ಸರ್ವ ಸಮಾಜದ ಗಣ್ಯರು, ಪುರಸಭೆ ಸದಸ್ಯರು ಹಾಗೂ ವಿಶ್ವಕರ್ಮ ಸಮಾಜದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ಶ್ರೀನಿವಾಸ ಸೋನಾರ ಸೇರಿದಂತೆ ಅನೇಕ ಸಮಾಜ ಬಾಂಧವರು ಭಾಗವಹಿಸಿದರು.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















