ವರದಿಗಾರರು :
ಫಯಾಜ್ ತೇಲಿ, ||
ಸ್ಥಳ :
ಕೊಪ್ಪಳ
ವರದಿ ದಿನಾಂಕ :
07-09-2025
ಹೆಸರು ಕಾಳಿನ ಬೆಂಬಲ ಬೆಳೆಗೆ ರೈತರ ಆಗ್ರಹ
ಅಳಿದುಳಿದ ಹೆಸರು ಕಾಳಿಗೆ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ರೈತರು ಆಗ್ರಹಿಸಿದರು. ಕೊಪ್ಪಳ ಜಿಲ್ಲಾಧ್ಯಂತ. 25850 ಹೆಕ್ಟರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಿದ್ದಾರೆ ನಿರಂತರ ಮಳೆಗೆ ಹೆಸರು ಬೆಳೆ ಹೊಲದಲ್ಲಿ ನಾಶವಾದರೆ ಕೆಲವು ರೈತರು ಅಳಿದುಳಿದಿರುವ ಹೆಸರು ಕಾಳನ್ನು ಕಟಾವು ಮಾಡಿ ಒಣಗಲು ಹಾಕಿದ ಹೆಸರು ಕಾಳು ಮಳೆಗೆ ಸಿಕ್ಕು ಸಂಪೂರ್ಣ ಬೆಳೆ ನಾಶವಾಗಿದೆ, ಅಲ್ಲದೇ ಮೊಡಕವಿದ ವಾತಾವರಣದಿಂದ ಹೆಸರು ಕಾಳಿನ ಬಣ್ಣ ಬದಲಾಗಿದ್ದು ಮಾರುಕಟ್ಟೆಯಲ್ಲಿ ಹೆಸರುಕಾಳಿಗೆ ಬೆಲೆ ಇಲ್ಲದಂತಾಗಿದೆ.
ಕೊಪ್ಪಳ ಜಿಲ್ಲೆ ಕೂಕನೂರು ತಾಲ್ಲೂಕಿನ ಯರೇಹಂಚಿನಾಳ ಗ್ರಾಮ ಸೇರಿದಂತೆ ಬಹುತೇಕ ಭಾಗಗಳಲ್ಲಿ ಈ ವರ್ಷದ ಮುಂಗಾರು ಬೆಳೆಗಳು ಮಣ್ಣು ಪಾಲಾಗಿದ್ದು, ಅಳಿದುಳಿದಿರುವ ಹೆಸರು ಕಟಾವಿಗಾಗಿ 350.ರಿಂದ. 400.ರೂಪಾಯಿ ಕೂಲಿ ಕಾರ್ಮಿಕರಿಗೆ ಕೊಡಲು ಪುಡಿಗಾಸಿನ ಹಣವು ಸಹ ರೈತರ ಕಡೆ ಇಲ್ಲದಂತಾಗಿದೆ. ಹೀಗಾಗಿ ರೈತರು ಸಧ್ಯ ಭಾರೀ ಆರ್ಥಿಕ ಸಂಕಷ್ಟಕ್ಕೀಡಾಗಿದ್ದು ಬೆಳೆ ನಷ್ಟದ ಪರಿಹಾರವನ್ನು ಸರ್ಕಾರ ನೀಡಬೇಕು .ರೈತರಿಗೆ ಕೂಲಿ ಕಾರ್ಮಿಕರ ಖರ್ಚು ಹೆಚ್ಚಾಗುತ್ತದೆ ಎಂದು ಹೆಸರು ಬೆಳೆಯನ್ನು ಕಟಾವು ಮಿಷನ್ ಮೂಲಕ ಕಟಾವು ಮಾಡಿಸಿದರೂ ಕೂಡ 6ಎಕರೆ 12000ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ ,6ಎಕರೆಗೆ ಒಂದೇ ಒಂದು ಚೀಲ ಹೆಸರು ಕಾಳು ಮಾತ್ರ ಸಿಕ್ಕಿದೆ .
ಗದಗ ಎಪಿಎಂಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಮೂರು ಸಾವಿರ ರೂಪಾಯಿಗೆ ಮಾರಾಟವಾಗಿದೆ.ಇದರಿಂದ ರೈತರು ಬೇಸತ್ತು ಸಂಕಷ್ಟಕ್ಕೆ ಇದಾಗಿದ್ದಾರೆ ಅಳಿದುಳಿದ ಹೆಸರು ಕಾಳಿಗೆ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ರೈತರು ಆಗ್ರಹಿಸಿದರು. ಜಿಲ್ಲೆಯಲ್ಲಿ ಅಳಿದುಳಿದಿರುವ ಹೆಸರು ಕಾಳಿಗಾದರೂ ಬೆಂಬಲ ಬೆಲೆಯ ಅವಶ್ಯಕತೆ ಇದೆ, ಕಡಿಮೆ ಇರುವ ಹೆಸರು ಕಾಳನ್ನು ದಲ್ಲಾಳಿಗಳ ಪಾಲು ಮಾಡಬೇಕಾ, ಅದಕ್ಕಾದರೂ ಜಿಲ್ಲೆಯ ರೈತರಿಗೆ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭ ಮಾಡಬೇಕೆಂದು ರೈತ ಶರಣಪ್ಪ ಕಮತರ ಹಾಗೂ ಜಂಬಯ್ಯ ಮುಗಂಡಮಠ ಇವರು ತಮ್ಮಅಳಲನ್ನು ತೋಡಿಕೊಂಡರು.
