ವರದಿಗಾರರು :
ಸಂಗನಗೌಡ ಎಚ್ ಗಬಸಾವಳಗಿ ||
ಸ್ಥಳ :
ತಾಳಿಕೋಟಿ
ವರದಿ ದಿನಾಂಕ :
24-07-2025
ಸಂಜೀವಕುಮಾರ ಹಜೇರಿ ಕರ್ನಾಟಕ ರಾಜ್ಯ ವೀಲ್ ಚೇರ್ ಬಾಸ್ಕೆಟ್‌ಬಾಲ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿಯಾಗಿ ಆ�
ತಾಳಿಕೋಟಿ: ಕರ್ನಾಟಕ ರಾಜ್ಯ ವೀಲ್ ಚೇರ್ ಬಾಸ್ಕೆಟ್‌ಬಾಲ್ ಅಸೋಸಿಯೇಷನ್‌ನ 2025-27ನೇ ಸಾಲಿನ ಪ್ರಧಾನ ಕಾರ್ಯದರ್ಶಿಯಾಗಿ ಅಂತರಾಷ್ಟ್ರೀಯ ಪ್ಯಾರಾ ಕ್ರೀಡಾಪಟು ಸಂಜೀವಕುಮಾರ ಹಜೇರಿ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯಾದ್ಯಕ್ಷ ಕಾಂಚನ್ ಖೋಟ್ ಅವರು ಸಂಜೀವಕುಮಾರ ಹಜೇರಿ ಅವರಿಗೆ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರವಹಿಸಲು ಆದೇಶ ಪತ್ರ ನೀಡಿದ್ದಾರೆ. ಈ ಹುದ್ದೆಯಲ್ಲಿ, ಅವರು ರಾಜ್ಯದ ವೀಲ್ ಚೇರ್ ಬಾಸ್ಕೆಟ್‌ಬಾಲ್‌ನ ಎಲ್ಲಾ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುವುದು, ಶಿಬಿರಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುವುದು, ಹಾಗೂ ಅಸೋಸಿಯೇಷನ್‌ನ ಸಂವಹನ ವ್ಯವಸ್ಥೆಯನ್ನು ನೋಡಿಕೊಳ್ಳುವುದು ಅವರ ಜವಾಬ್ದಾರಿಯಾಗಿರುತ್ತದೆ. ಸಂಜೀವಕುಮಾರ ಹಜೇರಿಯು ಸಂಸ್ಥೆಯ ಬೆಳವಣಿಗೆಗೆ ಮತ್ತು ಆಟಗಾರರ ಯಶಸ್ಸಿಗೆ ತಮ್ಮ ಪರಿಶ್ರಮದಿಂದ ಕೊಡುಗೆ ನೀಡುತ್ತಾರೆ ಎಂದು ಅಸೋಸಿಯೇಷನ್ ನಂಬಿದೆ. ಅವರ ಕೆಲಸವು ಸಂಸ್ಥೆಯಲ್ಲಿ ಶಿಸ್ತು ಮತ್ತು ಏಕತೆಯನ್ನು ತರಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
