ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
17-12-2025
ದೈವದ ಕುರಿತು ಮಿಮಿಕ್ರಿ :- ಡಿವೈನ್ ಸ್ಟಾರ್ ಅಸಮಧಾನ
ಕಾಂತಾರ ಚಾಪ್ಟರ್ ಒಂದರ ದೈವದ ಕಥೆಗೆ ಅದರದೇ ಆದ ಕಥನಗಳಿವೆ. ಕೆಲವೇ ದೃಶ್ಯಗಳಲ್ಲಿ ಬರುವ ದೈವದ ಅಂಶಗಳಿಗೂ ಕೆಲವೊಂದು ಸೂಕ್ಷ್ಮತೆಗಳಿದ್ದು ಯಾರೂ ದೈವದ ಪಾತ್ರಗಳ ಕುರಿತು ಮಿಮಿಕ್ರಿ ಮಾಡಬೇಡಿ ಎಂದು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ವಿನಂತಿಸಿದರು.
ಇತ್ತೀಚೆಗೆ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಕಾಂತಾರ ಚಾಪ್ಟರ್ ಒಂದರಲ್ಲಿ ಬರುವ ದೈವದ ಸನ್ನಿವೇಶದ ರಿಷಬ್ ಶೆಟ್ಟಿ ಪಾತ್ರವನ್ನು ಮಿಮಿಕ್ರಿ ಮಾಡಿದ್ದರು.
ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರಿಷಬ್, ದೈವದ ಕುರಿತಾದ ಭಕ್ತಿ ನಮ್ಮೊಳಗೆ ಆಳವಾಗಿ ಕುಳಿತಿವೆ. ಈ ರೀತಿಯ ಅನುಕರಣೆ ನಮ್ಮ ಭಾವನೆಗಳಿಗೆ ನೋವಾಗುತ್ತದೆ ಎಂದಿದ್ದಾರೆ
