ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
24-12-2025
ನ್ಯೂ ಇಯರ್ ಭದ್ರತೆಗೆ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಕ್ರಮ
ಹೊಸ ವರ್ಷಾಚರಣೆಗೆ ಒಂದು ವಾರ ಇರುವಾಗಲೇ ಸುರಕ್ಷತಾ ಕ್ರಮದ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮತ್ ಕುಮಾರ್ ಸಿಂಗ್ ಬೈಕ್ ಮೂಲಕ ನಗರದ ವಿವಿಧ ಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಮಂಗಳವಾರ ಸಂಜೆ ಸಮಯದಲ್ಲಿ ಇತರೆ ಪೊಲೀಸ್ ಅಧಿಕಾರಿಗಳ ಜೊತೆಗೂಡಿ ಇಂದಿರಾನಗೆ ಸಿಎಮ್ಎಚ್ ರಸ್ತೆಗಳಿಗೆ ತೆರಳಿ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯ ಪ್ರಯುಕ್ತ ಭದ್ರತೆಯ ಕುರಿತು ಪರಿಶೀಲಿಸಿದರು
ಸಂಜೆ ಸಮಯದಲ್ಲಿ ಟ್ರಾಫಿಕ್ ಇರುವುದರಿಂದ ಬೈಕ್ನಲ್ಲಿ ಸಂಚರಿಸಿ ಸುರಕ್ಷತ ಕ್ರಮಗಳ ಕಡೆ ಗಮನ ನೀಡುತ್ತಿದ್ದೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.
