ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
25-12-2025
ಮಾರ್ಕ್ - 45 ??? ಅಸಲಿ ಕಹಾನಿ
ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಚಿತ್ರ ಹಾಗೂ ಶಿವಣ್ಣ ಉಪ್ಪಿ ಮತ್ತು ರಾಜ್ ಬಿ ಶೆಟ್ಟಿ ಅಭಿನಯದ 45 ಚಿತ್ರ ವಿಭಿನ್ನವಾಗಿ ಪ್ರದರ್ಶನವಾಗುತ್ತಿವೆ.
ಮಾರ್ಕ್ ಇದು ಬಹುದಿನಗಳ ನಂತರ ಕಿಚ್ಚ ಸುದೀಪ್ ನಟಿಸಿರುವ ಚಿತ್ರ ತೆರೆಗೆ ಬರುತ್ತಿದೆ .ನಿರ್ದೇಶಕ ವಿಜಯ್ ಕಾರ್ತೀಕೇಯ ಅವರ ಅದ್ಭುತ ಸ್ಟೋರಿ ಲೈನ್ ಕಥಾ ಹಂದರವಿರುವ ಚಿತ್ರದಲ್ಲಿ ಕಿಚ್ಚ ಸುದೀಪ್ ಮಗಳು ಸಾನ್ವಿ ಮಾರ್ಕ್ ಚಿತ್ರದಲ್ಲಿ ಹಾಡಿರುವುದು ವಿಶೇಷ.
ಅಂದ ಹಾಗೆ ಮಾರ್ಕ್ ಚಿತ್ರದ ಬಜೆಟ್ ಕೂಡ ಮಾರ್ಕೇಬಲ್ ಆಗಿದೆ. ಇದರ ಕುರಿತು ಮಾತನಾಡಿದ ಕಿಚ್ಚ ಸುದೀಪ್ ಮಾರ್ಕ್ ಚಿತ್ರದ ಒನ್ ಲೈನ್ ಸ್ಟೋರಿ ಕೇಳಿ ನಾನು ಫಿಧಾ ಆದೆ. ಇದು ಮ್ಯಾಕ್ಸ ಚಿತ್ರ ನಿರ್ಮಾಣಕ್ಕಿಂತಲೂ ಮೂರು ಪಟ್ಟು ಬಜೆಟ್ ಹೆಚ್ಚಿದೆ. ಕಥೆಗೆ ಪೂರಕವಾಗಿ ಚಿತ್ರ ಮೂಡಿಬಂದಿದೆ. ನನ್ನ ಸಂಭಾವನೆ ಪಾಲು ಕಡಿಮೆ. ಉಳಿದ ಹಣವನ್ನು ಚಿತ್ರ ನಿರ್ಮಾಣಕ್ಕೆ ಬಳಸಿದ್ದೇವೆ ಎಂದರು.
ನನ್ನ ಸಂಭಾವನೆಗಿಂತ ಕನ್ನಡ ಚಿತ್ರ ಅದ್ಧೂರಿಯಾಗಿ ಮೂಡಿಬರಬೇಕು. ಎಂದ ಅವರು ವಿಜಯ್ ಕಾರ್ತಿಕೇಯ ಒಬ್ಬ ಕ್ರೀಯಾಶೀಲ ನಿರ್ದೇಶಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನನ್ನ ಸಂಭಾವನೆಗಿಂತ ಕನ್ನಡ ಚಿತ್ರ ಅದ್ಧೂರಿಯಾಗಿ ಮೂಡಿಬರಬೇಕು. ಎಂದ ಅವರು ವಿಜಯ್ ಕಾರ್ತಿಕೇಯ ಒಬ್ಬ ಕ್ರಿಯಾಶೀಲ ನಿರ್ದೇಶಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾರ್ಕ್ ಸಿನೆಮಾ ಲೆಕ್ಕಾಚಾರದ ವಿಷಯಕ್ಕೆ ಬಂದರೆ ಪ್ರಿಯಾ ತುಂಬ ಜಾಣ್ಮೆಯಿಂದ ಹೂಡಿಕೆ ಮಾಡಿದ್ದಾರೆ. ಇದರಲ್ಲಿ ನಾನು ಯಾವುದೇ ಮಧ್ಯಸ್ಥಿಕೆ ವಹಿಸಿಲ್ಲ ಸಿನೆಮಾದ ನಟನೆ ಮಾತ್ರ ನನ್ನದು ಎಂದ ಸುದೀಪ್ ಪತ್ನಿ ಪ್ರಿಯಾರನ್ನು ಹೊಗಳಿದರು. ..
ನನ್ನ ಮಗಳು ಮಾರ್ಕ್ ಸಿನೆಮಾದಲ್ಲಿ ಅದ್ಭುತವಾಗಿ ಹಾಡಿದ್ದಾಳೆ ಅವಳ ಹಾಡನ್ನ ಕೇಳಿ ಒಮ್ಮೆ ನಾನೇ ಮೂಕವಿಸ್ಮಿತನಾದೆ ಎಂದು ತಮ್ಮ ಮಗಳು ಸಾನ್ವಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಗೀತ ನಿರ್ದೇಶಕ ಅಜನೀಶ್ ಇಂಪಾಗಿ ಸಂಗೀತ ಸಂಯೋಜನೆ ಮಾಡಿದ್ದಾರೆ.
ಪ್ರಥಮ ಬಾರಿಗೆ ಸುದೀಪ್ ಪತ್ನಿ ಪ್ರಿಯಾ ಮಾರ್ಕ್ ಚಿತ್ರದ ವಿತರಣೆಯಲ್ಲಿ ಕೈ ಜೋಡಿಸಿದ್ದಾರೆ. ವಿವ ನ್ಯೂಸ್ ಬಳಗದಿಂದ ಮಾರ್ಕ್ ಸಿನೆಮಾಗೆ ಬೆಸ್ಟ್ ಆಪ್ ಲಕ್....
45
ಶಿವಣ್ಣ ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಅಭಿನಯದ ಚಿತ್ರ 45 ಬೆಳ್ಳಿತೆರೆಗೆ ಲಗ್ಗೆ ಇಟ್ಟಿದೆ. ಅರ್ಜುನ ಜನ್ಯ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ವಿಭಿನ್ನ ಕಥಾಹಂದರವನ್ನ ಹೊಂದಿವೆ. ಈ ಚಿತ್ರದ ಪ್ರಿಮಿಯರ್ ಶೋ ಈಗಾಗಲೇ ಹೊಸ ಹವಾ ಸೃಷ್ಠಿಸಿದ್ದು, ಬೆಂಗಳೂರಿನಲ್ಲೇ 50 ಕ್ಕೂ ಹೆಚ್ಚು ಪ್ರದರ್ಶನ ಕಾಣುತ್ತಿವೆ.
45 ಸಿನೆಮಾದ ಕುರಿತು ಮಾತನಾಡಿದ ರಾಜ್ ಬಿ ಶೆಟ್ಟಿ ಅರ್ಜುನ್ ಜನ್ಯ ಈ ಚಿತ್ರಕ್ಕಾಗಿ ಸಾಕಷ್ಟು ಹೋಮ್ ವರ್ಕ್ ಮಾಡಿದ್ದಾರೆ. ನಿರ್ದೇಶಕ ಅರ್ಜುನ್ ಜನ್ಯರಿಂದ ಸಾಕಷ್ಟು ವಿಷಯ ತಿಳಿದುಕೊಂಡೆ ಎಂದರು .
45 ಸಿನೆಮಾದಲ್ಲಿ ಶಿವಣ್ಣ ಅವರ ವಿಭಿನ್ನ ಪಾತ್ರ ಜನಮನ ಗೆದ್ದಿವೆ.
ಉಪೇಂದ್ರ ಅವರ ಸ್ಪೇಷಲ್ ಡೈಲಾಗ್ ಧಮಾಕಾ ಕೂಡ ಪ್ರೇಕ್ಷಕರನ್ನ ರಂಜಿಸಲಿವೆ.
45 ದಿನಗಳಲ್ಲಿ ನಡೆಯುವ ಕಥಾ ಹಂದರವಿರುವ ಚಿತ್ರ ಇದಾಗಿದ್ದು ಇದರ ಶೀರ್ಷಿಕೆಯೇ ಸಿನಿರಸಿಕರಲ್ಲಿ ಕುತೂಹಲ ಮೂಡಿಸಿವೆ.
ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ 45 ಚಿತ್ರಕ್ಕೆ ಶುಭವಾಗಲಿ ಎಂದು ವಿವ ನ್ಯೂಸ್ ಬಳಗ ಹಾರೈಸುತ್ತಿದೆ.
