ವರದಿಗಾರರು :
ಶಾಹಿದ್ ಶೇಖ್ ||
ಸ್ಥಳ :
ಹಗರಿಬೊಮ್ಮನಹಳ್ಳಿ
ವರದಿ ದಿನಾಂಕ :
31-05-2025
ಅನ್ನದಾತರ ಬದುಕಿಗೆ ನೆಮ್ಮದಿಯ ಗ್ಯಾರಂಟಿ
ನಮ್ಮ ಸರ್ಕಾರವು ರೈತರ ಪರವಾಗಿದ್ದು, ಅವರ ಕಾಳಜಿಯನ್ನು ವಹಿಸುತ್ತಿದೆ. ಇದನ್ನು ಭಾಷಣಕ್ಕೆ ಸೀಮಿತವಾಗಿಸದೆ, ಕಾರ್ಯರೂಪಕ್ಕೆ ತಂದು ಅವರಿಗಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ನೆಮ್ಮದಿಯ ಬದುಕನ್ನು ಕಲ್ಪಿಸಿದ್ದೇವೆ.
ರಾಜ್ಯಾದ್ಯಂತ ಬೀಜ, ಗೊಬ್ಬರ, ರಾಸಾಯನಿಕಗಳ ಲಭ್ಯತೆಯನ್ನು ಖಾತ್ರಿಪಡಿಸಲಾಗಿದೆ. ನೀರಾವರಿ ಯೋಜನೆಗಳು ಹಾಗೂ ಕೃಷಿ ಭಾಗ್ಯದಂತಹ ಕಾರ್ಯಕ್ರಮಗಳ ಮೂಲಕ ನೀರಿನ ಪೂರೈಕೆ ಮಾಡಲಾಗಿದೆ, ಕೃಷಿ ಸಾಲ ಯೋಜನೆ, ಬೆಳೆನಷ್ಟ ಪರಿಹಾರ ವಿತರಣೆ ಮಾಡಿ ರೈತರಲ್ಲಿ ಆರ್ಥಿಕ ಬಲ ತುಂಬಲಾಗಿದೆ.
ಹಾರ್ವೆಸ್ಟರ್ ಹಬ್‌ಗಳ ಸ್ಥಾಪನೆ ಮೂಲಕ ಆಧುನಿಕ ಯಂತ್ರೋಪಕರಣಗಳ ಬಳಕೆಗೆ ಉತ್ತೇಜನ ನೀಡಲಾಗಿದೆ.
ಕೃಷಿ ಸಂಸ್ಕರಣೆ, ರಿಯಾಯಿತಿ ದರದಲ್ಲಿ ಜೈವಿಕ ಕೀಟ ನಾಶಕ ವಿತರಣೆ, ಹಸಿರೆಲೆ ಗೊಬ್ಬರ, ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹ ಮತ್ತು ಸಕಾಲದಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರಗಳ ಸ್ಥಾಪನೆಯಂತಹ ಅನೇಕ ಕಾರ್ಯಕ್ರಮಗಳು ರೈತರ ಮನೋಬಲ ಹೆಚ್ಚಿಸಿದೆ.
ರೈತರನ್ನು ನಷ್ಟದ ಸುಳಿಯಿಂದ ಮೇಲೆತ್ತುವ ನಮ್ಮ ಎಲ್ಲಾ ಪ್ರಯತ್ನಗಳ ಫಲವಾಗಿ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಗಣನೀಯ ಇಳಿಕೆಯಾಗಿದೆ.
ಈ ಮೂಲಕ ಅನ್ನದಾತರ ಬದುಕಿಗೆ ನೆಮ್ಮದಿಯ ಗ್ಯಾರಂಟಿ ನೀಡಿದ್ದೇವೆ. - ಮುಖ್ಯಮಂತ್ರಿ ಸಿದ್ದರಾಮಯ್ಯ
