ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
24-12-2025
ಉದ್ಯಾನ ನಗರಿಯಲ್ಲಿ ಕ್ರಿಸ್ಮಸ್ ಸಂಭ್ರಮ.
ಬೆಂಗಳೂರಿನ ಎಲ್ಲ ಮಾರುಕಟ್ಟೆಗಳಲ್ಲೂ ಜಗಮಗಿಸುವ ವರ್ಣರಂಜಿತ ನಕ್ಷತ್ರಗಳು, ಬೆಳಕಿನ ಸಂಯೋಜನೆಗಳಿಂದ ಅಲಂಕೃತಗೊಂಡ ಕ್ರಿಸ್ಮಸ್ ಟ್ರೀಗಳು ಚಿತ್ತಾರಗಳು. ಸಾಂತಾ ವೇಷಧಾರಿಗಳು..ಮಕ್ಕಳ ಮೊಗದಲ್ಲಿ ನಗುವಿನ ಅಲೆಗಳು.. ಇದು ಶಾಂತಿಧೂತ ಏಸುವಿನ ಆಗಮನಕ್ಕೆ ಸಜ್ಜುಗೊಳ್ಳುತ್ತಿರುವ ಕ್ರಿಸ್ಮಸ್ ಹಬ್ಬದ ಸಂಭ್ರಮದ ಘಳಿಗೆ.
ಕ್ರೈಸ್ತರ ಪವಿತ್ರ ಹಬ್ಬ ಕ್ರಿಸ್ಮಸ್ ..
ಕ್ರಿಸ್ಮಸ್ ಬಂತೆಂದರೆ ಎಲಿಲ್ಲದ ಉತ್ಸಾಹ. ಸಾಂತಾ ಕ್ಲಾಸ್ ಬರ್ತಾನೆ ನಮಗೆ ಗಿಪ್ಟ್ ಕೊಡ್ತಾನೆ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿರುತ್ತವೆ
ಇವೆಲ್ಲವೂ ನಾವು ಹಬ್ಬವನ್ನ ಸಂಭ್ರಮಿಸಲು ಮತ್ತು ಆಚರಿಸಲು ಮಾಡಿಕೊಂಡಿರುವ ಕ್ರಮಗಳು. ಆದರೆ ಕ್ರಿಸ್ಮಸ್ ಹಬ್ಬದ ವಿಶೇಷತೆಯನ್ನು ಆಧ್ಯಾತ್ಮಿಕ ನೆಲೆಯಲ್ಲಿ ಕಂಡಾಗ ಸಿಗುವ ಮಾನಸಿಕ ನೆಮ್ಮದಿ ಸಹಬಾಳ್ವೆ ಜೀವನದ ಮೌಲ್ಯಗಳೇ ಬೇರೆ.
ತನ್ನದಲ್ಲದ ತಪ್ಪಿಗೆ ಏಸು ಶಿಲುಬೆ ಏರಿದರು. ಎಲ್ಲರನ್ನೂ ಕ್ಷಮಿಸಿ ,ದುಷ್ಟರನ್ನ ಸನ್ಮಾರ್ಗದಲ್ಲಿ ನಡೆಸುವ ಬೋಧನೆ ಮಾಡಿದರು. ಎಲ್ಕರನ್ನೂ ಪ್ರೀತಿಸಿ ಎಂದು ತಮ್ಮ ಜೀವನವನ್ನೆ ಮುಡುಪಾಗಿಟ್ಟರು ಮನುಕುಲದ ಉದ್ದಾರಕ್ಕಾಗಿ , ಮುಕ್ತಿಗಾಗಿ ಶ್ರಮವಹಿಸಿದ ಏಸುವಿನ ಸಂದೇಶವನ್ನ ಸಾರಲು ಮತ್ತು ಅದನ್ನ ಜೀವನ ಮಾರ್ಗದಲ್ಲಿ ಶಾಂತಿ ಪ್ರೀತಿ ಮತ್ತು ಸಮಾನತೆಯ ಮೂಲಕ ಆಚರಿಸವೇಕೆಂದು ಸಾರುವ ಹಬ್ಬವೇ ಕ್ರಿಸ್ಮಸ್ ..
ಉದ್ಯಾನ ನಗರಿಯಲ್ಲಿರುವ ವಿವೇಕನಗರದ ಇನ್ವೆಂಟ್ ಜೀಸಸ್ ಚರ್ಚ್ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ನಗರದ ವಿವಿಧ ಚರ್ಚ್ಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಬೆಂಗಳೂರಿನ ಹೃದಯ ಭಾಗದಲ್ಲಿರುವ ಎಮ್ಜಿ ರಸ್ತೆ , ಶಾಂತಿನಗರ ಶಿವಾಜಿನಗರ ಬ್ರಿಗೇಡ್ ರಸ್ತೆಗಳಲ್ಲಿ ಜಗಮಗಿಸುವ ಲೈಟಿಂಗಳು. ಆಕರ್ಷಕ ಆಕಾಶಬುಟ್ಟಿ. ಅಲಂಕೃತಗೊಂಡ ಬಣ್ಣ ಬಣ್ಣದ ನಕ್ಷತ್ರಗಳಿಂದ ನಲಿಯುತ್ತಿವೆ. ಶಾಂತಿ ಧೂತ ಏಸುವಿನ ಆಗಮನಕ್ಕಾಗಿ ಭಕ್ತಿ ತುಂಬಿದ ಮನಗಳಿಂದ ಪ್ರಾರ್ಥಿಸುತ್ತಿದ್ದಾರೆ...
