ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
22-12-2025
ಕೈ ಮುಗಿತಿನಿ ಕಿತ್ತಾಡ್ಬೇಡ್ರಪ್ಪೋ....ನಾಯಕದ್ವಯರ ಕುರ್ಚಿ ಕದನ ಹೈರಾಣಾದ ಕಾಂಗ್ರೆಸ್ ಹೈ ಕಮಾಂಡ್
ಕೈ ಮುಗಿತಿನಿ ಕಿತ್ತಾಡ್ಬೇಡ್ರಪ್ಪೋ..
ಅಕ್ಷರಶಃ ಕಾಂಗ್ರೆಸ್ ಹೈ ಕಮಾಂಡ್ ಕರ್ನಾಟಕ ರಾಜ್ಯ ರಾಜಕೀಯದಲ್ಲಿ ನಾಯಕರ ಸಿಎಮ್ ಕುರ್ಚಿ ಕದನ ಬಗೆಹರಿಸಲಾಗದೇ ಹೈರಾಣಾಗಿ ಹೋಗಿದೆ.
ರಾಜ್ಯದಲ್ಲಿ ಸಿಎಮ್ ಕುರ್ಚಿಗಾಗಿ ದಿನೆದಿನೇ ಮಾತಿನ ಚಟುವಟಿಕೆಗಳು ತಾರಕಕ್ಕೇರುತ್ತಿರುವ ಹಿನ್ನಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದು ರಾಜ್ಯರಾಜಕೀಯದ ಆತಂರಿಕ ಕಿತ್ತಾಟ. ನೀವೇ ಇದನ್ನು ಬಗೆಹರಿಸಿಕೊಳ್ಳಿ ಎಂದಿದ್ದಾರೆ. ಸಿಎಮ್ ಕುರ್ಚಿ ವಿಷಯವಾಗಿ ಕಾಂಗ್ರೆಸ್ ಹೈಕಮಾಂಡ್ ಯಾವುದೇ ಗೊಂದಲ ಸೃಷ್ಠಿಸಿಲ್ಲ ,ಪಕ್ಷ ಯಾರೊಬ್ಬರಿಂದಿಲ್ಲ ಕಾರ್ಯಕರ್ತರೇ ಪಕ್ಷದ ನಿಜವಾದ ಜೀವಾಳ ಎಂದು ನಾಯಕತ್ವಗೊಂದಲಕ್ಜೆ ತೆರೆ ಎಳೆಯಲು ಯತ್ನಿಸಿದ್ದಾರೆ.
ಸಿಎಮ್ ನಾಯಕತ್ವ ವಿಚಾರ ಅದು ರಾಜ್ಯದ ಸ್ಥಳೀಯ ವಿಷಯವಾಗಿದ್ದು. ಇಂತಹ ಸಂಗತಿಗಳನ್ನ ತಂದು ಹೈಕಮಾಂಡ್ ಎದುರು ನಿಲ್ಲಬಾರದು ಎಂದು ಖರ್ಗೆ ಖಾರವಾಗಿ ಉತ್ತರಿಸಿದ್ದಾರೆ.
ಇವೆಲ್ಲ ಬೆಳವಣಿಗೆಗಳ ನಡುವೆಯೂ ರಾಜ್ಯ ಕಾಂಗ್ರೆಸ್ನ ಉಭಯ ನಾಯಕರುಗಳು ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುತ್ತೇವೆ. ಪಕ್ಷದ ವರಿಷ್ಠರ ಭೇಟಿಗಾಗಿ ಕಾತುತ್ತಿದ್ದೇವೆ ಎಂದು ಪನರುಚ್ಚರಿಸಿದ್ದಾರೆ. ಇದರಿಂದ ಎಐಸಿಸಿ ಅಧ್ಯಕರ ಹೇಳಿಕೆ ಗೊಂದಲಮಯವಾಗಿ ಕಾಣುತ್ತಿದೆ.
ಬೆಳಗಾವಿ ಅಧಿವೇಶನಲ್ಲಿ ಸಿಎಮ್ ಸಿದ್ಧರಾಮಯ್ಯ ನಾನೇ ಐದು ವರ್ಷ ಮುಖ್ಯಮಂತ್ರಿ ಎಂದು ಗಂಟಾನುಘೋಷವಾಗಿ ಹೇಳಿದ್ದರು. ಈ ಹೇಳಿಕೆಗೆ ಪ್ರತ್ಯುತ್ತರವಾಗಿ ಡಿಸಿಎಮ್ ಡಿಕೆ ಶಿವಕುಮಾರ್ ನನ್ನ ಮತ್ತು ಮುಖ್ಯಮಂತ್ರಿಗಳ ನಡುವೆ ಒಂದು ಒಪ್ಪಂದವಿದೆ. ಅದಕ್ಕೆ ಹೈಮಾಂಡ್ ಸಹ ಒಪ್ಪಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಉಭಯ ನಾಯಕರಲ್ಲಿ ಗೊಂದಲ ಸೃಷ್ಠಿಸಿದೆ...
ನಾಯಕದ್ವಯರ ಕುರ್ಚಿ ಬಿಸಿ ರಾಜ್ಯದ ಅಭಿವೃದ್ಧಿಯ ವಿಷಯದಲ್ಲೂ ತಟ್ಟಿದೆ. ಇವರಿಗೆ ಸಿಎಮ್ ಆಗಬೇಕು ಅಂತಾನೇ ಜನ ಓಟ್ ಹಾಕಿ ಪಕ್ಷವನ್ನ ಆರಿಸಿ ತಂದಿದ್ದಾರಾ? ಎಂಬಂತ ಮಾತುಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿಬರುತ್ತಿವೆ.
