ಲೈವ್ ಟಿವಿ ನ್ಯೂಸ್

ದಿನಾಂಕ : 17-09-2025

ನಗರ ಸ್ವಚ್ಛತೆ ನಮ್ಮೆಲ್ಲರ ಜವಾಬ್ದಾರಿ

ವರದಿಗಾರರು : ದರ್ಶನ್ ಎಂ ಎನ್
ವರದಿ ಸ್ಥಳ :ದಾವಣಗೆರೆ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 13+

ನಮ್ಮ ನಗರವನ್ನು ಸ್ವಚ್ಛವಾಗಿರಿಸಲು ಪೌರಕಾರ್ಮಿಕರು ಶ್ರಮಿಸುತ್ತಿದ್ದಾರೆ. ಮೊದಲೆಲ್ಲಾ ಚೇಂಬರ್ಗಳಲ್ಲಿ ಇಳಿದು ಪೌರ ಕಾರ್ಮಿಕರು ಸ್ವಚ್ಛತೆ ನಡೆಸುತ್ತಿದ್ದರು. ಈಗ ಯಂತ್ರಗಳ ಬಳಕೆ ಆರಂಭವಾದರೂ, ಅವರ ಪರಿಶ್ರಮದ ಮಹತ್ವ ಕಡಿಮೆಯಾಗಿಲ್ಲ. ನಿಜಕ್ಕೂ ಪೌರಕಾರ್ಮಿಕರ ಸೇವೆ ಶ್ಲಾಘನೀಯ.

ಆದರೆ, ಕೇವಲ ಅವರ ಶ್ರಮ ಸಾಕಾಗುವುದಿಲ್ಲ. ನಾಗರಿಕರ ಸಹಕಾರವೂ ಅವಶ್ಯಕ. ನಾವು ಹಸಿಕಸ, ಒಣಕಸವನ್ನು ಸರಿಯಾಗಿ ವಿಂಗಡಿಸಿ ನೀಡಿದರೆ ಅವರ ಕೆಲಸ ಇನ್ನಷ್ಟು ಸುಲಭವಾಗುತ್ತದೆ. ಪ್ರತಿಯೊಬ್ಬರಿಗೂ ತಮ್ಮ ಕೆಲಸದ ಮೇಲೆ ಗೌರವವಿರುವಂತೆ, ಪೌರಕಾರ್ಮಿಕರೂ ತಮ್ಮ ಕರ್ತವ್ಯವನ್ನು ಹೆಮ್ಮೆ, ಸ್ವಾಭಿಮಾನದಿಂದ ನಿರ್ವಹಿಸುತ್ತಿದ್ದಾರೆ.

ಅದಕ್ಕಾಗಿ “ನಗರ ಸ್ವಚ್ಛತೆ ನಮ್ಮೆಲ್ಲರ ಜವಾಬ್ದಾರಿ” ಎಂಬ ಮನೋಭಾವದಿಂದ ಪ್ರತಿಯೊಬ್ಬರೂ ತಮ್ಮ ಕರ್ತವ್ಯ ಪಾಲಿಸಿ, ಪೌರಕಾರ್ಮಿಕರ ಕೈಜೋಡಿಸಿ ಸ್ವಚ್ಛ, ಸುಂದರ ದಾವಣಗೆರೆ ನಿರ್ಮಾಣ ಮಾಡೋಣ. ಎಂದು ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ Dr. ಪ್ರಭಾ ಮಲ್ಲಿಕಾರ್ಜುನ್ ರವರು ತಿಳಿಸಿದರು.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand