ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
23-12-2025
2025 ವರ್ಷಕ್ಕೆ ಗುಡ್ ಬೈ ಹೇಳಲು ದಿನಗಣನೆ ಸಂಭ್ರಮ ಮತ್ತು ಸುರಕ್ಷತಾ ಕ್ರಮ
2025 ವರ್ಷಾಂತ್ಯಕ್ಕೆ ಬೆಂಗಳೂರು ಜಗಮಗಿಸುವ ಬೆಳಕಿನಿಂದ ಕಂಗೊಳಿಸಲಿದ್ದು., ರಂಗೇರುವ ಕಾರ್ಯಕ್ರಮಗಳಿಗೆ ಕಠಿಣ ನಿಯಮಗಳನ್ನ ರೂಪಿಸಲಾಗಿದೆ.
ವರ್ಷಾಂತ್ಯದ ಸಂಭ್ರಮದ ಕಾರ್ಯಕ್ರಮಗಳಲ್ಲಿ ರೇವ್ ಪಾರ್ಟಿ ಸೇರಿ ಕಾನೂನು ಬಾಹಿರ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದು ಬೆಂಗಳೂರು ಪೋಲೀಸ್ ಆಯುಕ್ತ ಸೀಮಂತ್ ಸಿಂಗ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ವರ್ಷಾಚರಣೆ ಸುಸೂತ್ರವಾಗಿ ನೆರವೇರಲು ಮುನ್ನಚ್ಚರಿಕೆ ವಹಿಸಲಾಗಿದ್ದು, ಅನಧಿಕೃತ ಪಾರ್ಟಿಗಳಿಗೆ ಆಸ್ಪದ ನೀಡುವುದಿಲ್ಲ ಎಂದರು.
ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಸಹಾಯವಾಣಿ ಹಾಗೂ ಕೆ.ಎಸ್ ಪಿ ಆಪ್ ಮೂಲಕ ಪೊಲೀಸರ ನೆರವು ಪಡೆಯಬಹುದು ಎಂದರು. ಪೊಲೀಸ್ ನಿಯಂತ್ರಣ ಕೊಠಡಿ 112 ನಂಬರ್ಗೆ ಕರೆ ಮಾಡಿದರೆ ಕೆಲವೇ ಸಕೆಂಡುಗಳಲ್ಲಿ ಸಹಾಯಕ್ಕೆ ಸಿಬ್ಬಂದಿಗಳು ಬರಲಿದ್ದಾರೆ ಎಂದು ಮಾಹಿತಿ ನೀಡಿದರು.
