ವರದಿಗಾರರು :
ಸತ್ತಪ್ಪ ||
ಸ್ಥಳ :
ಧಾರವಾಡ
ವರದಿ ದಿನಾಂಕ :
15-09-2025
ಚಿತ್ರದುರ್ಗ ಚಿರತೆ ಕಾಟಕ್ಕೆ ಹೈರಾಣಾದ ಗ್ರಾಮಸ್ಥರು
ಚಿತ್ರದುರ್ಗದ ಹುಣಸೆಕಟ್ಟೆ ಗ್ರಾಮದಲ್ಲಿ ಚಿರತೆಯ ಉಪಟಳ ಹೆಚ್ಚಾಗಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಕಳೆದ ವಾರ ರೈತ ರಂಗೇಗೌಡರ ಜಮೀನಿನಲ್ಲಿ ಚಿರತೆ ಕೊಲಣವೊಂದನ್ನು ಕೊಂದಿದೆ.
ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದು, ಜನ ಹಾಗೂ ಜಾನುವಾರುಗಳ ಜೀವಕ್ಕೆ ಅಪಾಯ ಎದುರಾಗಿದೆ. ಕೂಡಲೇ ಚಿರತೆಯನ್ನು ಸೆರೆಹಿಡಿದು ಗ್ರಾಮಸ್ಥರ ಭಯವನ್ನು ನಿವಾರಿಸುವಂತೆ ಅರಣ್ಯ ಇಲಾಖೆಯನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
