ವರದಿಗಾರರು :
ಬಲರಾಮ್ ವಿ ||
ಸ್ಥಳ :
ಕೆ ಆರ್ ಪುರ
ವರದಿ ದಿನಾಂಕ :
01-12-2025
ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಮಂಜುಳಾ ಲಿಂಬಾವಳಿ ಭೂಮಿ ಪೂಜೆ.
ಮಹದೇವಪುರ: ರಸ್ತೆ, ನೀರು, ಒಳಚರಂಡಿ ಮುಂತಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವುದಾಗಿ ಶಾಸಕಿ ಮಂಜುಳಾ ಲಿಂಬಾವಳಿ ತಿಳಿಸಿದರು. ಕ್ಷೇತ್ರದ ನಲ್ಲೂರಹಳ್ಳಿ, ಅಂಬೇಡ್ಕರ್ ಗುಟ್ಟ, ವರ್ತೂರು, ಗುಂಜೂರು, ಚಿಕ್ಕಬೆಳ್ಳಂದೂರು, ಮುನ್ನೆ ಕೊಲ್ಲ ಮುಂತಾದ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ರಸ್ತೆಗಳು, ಕುಡಿಯುವ ನೀರು ಮತ್ತು ಕಾಲುವೆಗಳಂತಹ ಮೂಲಭೂತ ಸೌಲಭ್ಯಗಳು ಅತ್ಯಗತ್ಯ. ಈ ಸೌಲಭ್ಯಗಳನ್ನು ಒದಗಿಸಲು ನಾನು ಪ್ರಮಾಣಿಕ ರೀತಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದರು. ಈ ಹಿಂದೆ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿರವರು 15 ವರ್ಷಗಳ ಕಾಲ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಮಹದೇವಪುರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಿರುವುದಾಗಿ ಹೇಳಿದರು.
ಜನರಿಗೆ ಯಾವುದೇ ಸಮಸ್ಯೆ ಇದ್ದರೆ, ಅವರು ತಮ್ಮನ್ನು ನೇರವಾಗಿ ಸಂಪರ್ಕಿಸಿ ಎಂದರು. ಪ್ರತಿಯೊಂದು ವಾರ್ಡ್‌ನ ಮುಖಂಡರು ಒಟ್ಟಾಗಿ ಜನರ ಸಮಸ್ಯೆಗಳನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದಾರೆ. ಸಮಸ್ಯೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಪರಿಹಾರಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ನಗರ ಮಂಡಲ ಅಧ್ಯಕ್ಷ ಶ್ರೀಧರ್ ರೆಡ್ಡಿ, ವೈಟ್ ಫೀಲ್ಡ್ ವಾಡ್೯ ಕಾಮಗಾರಿ ಉಸ್ತುವಾರಿ ನಲ್ಲೂರಹಳ್ಳಿ ಚಂದ್ರಶೇಖರ ರೆಡ್ಡಿ, ಹರೀಶ್ ರೆಡ್ಡಿ, ಗುಟ್ಟ ಮಾರಪ್ಪ, ಹನುಮಂತಗೌಡ, ಆಟೋ ಶ್ರೀನಿವಾಸ್ ಭಾಗವಹಿಸಿದ್ದರು.
