
ಲೈವ್ ಟಿವಿ ನ್ಯೂಸ್

ದಿನಾಂಕ : 07-09-2025
ಮದ್ದೂರು ನಗರಸಭೆ ನಾಮಫಲಕ ಅನಾವರಣ.
ವರದಿಗಾರರು : ಶಿವು ಗೌಡ
ವರದಿ ಸ್ಥಳ :ಮದ್ದೂರ್
ಒಟ್ಟು ಓದುಗರ ಸಂಖ್ಯೆ : 33+
ಮದ್ದೂರು ಪಟ್ಟಣದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟು, ಮದ್ದೂರು ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆರಿಸಿ ಹೊಸ ನಾಮಫಲಕವನ್ನು ಅನಾವರಣ ಮಾಡಲಾಯಿತು.ಅಭಿವೃದ್ಧಿ ಕಾರ್ಯಗಳಿಗೆ ಯಾರೇ ವಿರೋಧಿಸಿದರೂ ನಾನು ಹಿಂದೆ ಸರಿಯುವುದಿಲ್ಲ. ಜನರ ಹಿತ ಹಾಗೂ ಕ್ಷೇತ್ರದ ಪ್ರಗತಿಯನ್ನು ಮಾತ್ರ ಆದ್ಯತೆಯಾಗಿ ಪರಿಗಣಿಸುತ್ತೇನೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ವಿಶೇಷ ಅನುದಾನವನ್ನು ತರಿಸಿ, ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ಮುನ್ನಡೆಯುತ್ತಿದ್ದೇನೆ.
ನಗರಸಭೆ ಸ್ಥಾಪನೆಯ ಹಿನ್ನೆಲೆ ಗೆಜ್ಜಲಗೆರೆ, ಸೋಮನಹಳ್ಳಿ, ಚಾಮನಹಳ್ಳಿ ಹಾಗೂ ಗೊರವನಹಳ್ಳಿ ಪಂಚಾಯಿತಿಗಳ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅನುಮೋದನೆ ಬಳಿಕ ಸಂಬಂಧಿಸಿದ ಕಡತಗಳನ್ನು ಇಲಾಖೆಗೆ ಕಳುಹಿಸಲಾಗಿತ್ತು. ನಂತರ ರಾಜ್ಯಪಾಲರ ಅಧಿಸೂಚನೆಯ ಮೂಲಕ ಮದ್ದೂರು ಪುರಸಭೆ ನಗರಸಭೆಯಾಗಿ ಪರಿವರ್ತನೆಗೊಂಡಿದೆ. ಇದು ಸ್ವಹಿತಕ್ಕಾಗಿ ಅಲ್ಲ, ಪಟ್ಟಣದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕೈಗೊಂಡಿರುವ ನಿರ್ಧಾರ.ನಗರಸಭೆ ಸ್ಥಾಪನೆಗೆ ಕೆಲ ರೈತ ಮುಖಂಡರು ಹಾಗೂ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರೂ, ಮಾತುಕತೆಗಾಗಿ ಹಲವು ಬಾರಿ ಆಹ್ವಾನಿಸಿದರೂ ಯಾರೂ ಮುಂದಾಗಲಿಲ್ಲ. ಬಳಿಕ ಮುಷ್ಕರ ಹಾಗೂ ಪ್ರತಿಭಟನೆ ನಡೆದಿದ್ದರೂ, “ಪ್ರಜಾಪ್ರಭುತ್ವದಲ್ಲಿ ಯಾರಿಗಾದರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕಿದೆ. ನ್ಯಾಯಾಲಯದ ಮೆಟ್ಟಿಲು ಹತ್ತುವುದು ಅವರ ಸ್ವಾತಂತ್ರ್ಯ..
ಅಭಿವೃದ್ಧಿಯ ಅವಶ್ಯಕತೆಗೆ ಮದ್ದೂರು ಪಟ್ಟಣ ದಶಕಗಳಿಂದ ರಸ್ತೆ, ಒಳಚರಂಡಿ, ಪುಟ್ಪಾತ್, ನಾಲೆಗಳ ನಿರ್ವಹಣೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಈಗ ನಗರಸಭೆಯಾಗಿ ಮೇಲ್ದರ್ಜೆಗೇರಿದ ಹಿನ್ನೆಲೆ, ಸರ್ಕಾರದಿಂದ ಹೆಚ್ಚಿನ ಅನುದಾನ ದೊರೆತು ಸಮಗ್ರ ಅಭಿವೃದ್ಧಿಗೆ ಅವಕಾಶ ಸಿಗಲಿದೆ.ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷೆ ಶ್ರೀಮತಿ ಕೋಕಿಲ ಅರುಣ್, ಉಪಾಧ್ಯಕ್ಷ ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಸದಸ್ಯರಾದ ಸಿದ್ದರಾಜು, ಪ್ರಮೀಳಾ, ಎಂ.ಬಿ.ಸಚಿನ್, ಸುರೇಶ್ ಕುಮಾರ್, ಮಹೇಶ್, ಸರ್ವಮಂಗಳ, ಲತಾ ರಾಮು, ರತ್ನಮ್ಮ, ಸುಮಿತ್ರಾ, ಆಯಿಷಾ ಜುನೇದ್, ನಾಮ ನಿರ್ದೇಶನ ಸದಸ್ಯರಾದ ಮೋಹನ್, ಕೃಷ್ಣಪ್ಪ, ಪ್ರಭಾರ ಮುಖ್ಯಾಧಿಕಾರಿ ಶ್ರೀಧರ್, ಪುರಸಭಾ ಸಿಬ್ಬಂದಿಗಳು ಸೇರಿದಂತೆ ಅನೇಕರು ಹಾಜರಿದ್ದರು.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















