ವರದಿಗಾರರು :
ಶಶಿಧರ್ ||
ಸ್ಥಳ :
ಚಿಂಚೋಳಿ
ವರದಿ ದಿನಾಂಕ :
19-11-2025
ಕಬ್ಬಿನ ಟ್ಯಾಲಿ ಡಿಕ್ಕಿ: 11 ವರ್ಷದ ಬಾಲಕ ದಾರುಣ ಸಾವು
ಚಿಂಚೋಳಿ: ತಾಲ್ಲೂಕಿನ ದಸ್ತಾಪೂರ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದ ದುರಂತದಲ್ಲಿ 11 ವರ್ಷದ ಶಾಲಾ ಬಾಲಕ ಸೈಯದ್ ಜಹೀರಮಿಯಾ ಸೈಯದ್ ಮಿಯಾ ಪಟೇಲ್ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ.
ಸಾಕಾರಿ ಉರ್ದು ಶಾಲೆಯ 4ನೇ ತರಗತಿಯಲ್ಲಿ ಓದುತ್ತಿದ್ದ ಜಹೀರಮಿಯಾ, ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ, ಎಥೆನಾಲ್ ಘಟಕಕ್ಕೆ ಕಬ್ಬು ಸಾಗಿಸುತ್ತಿದ್ದ ಡಬಲ್ ಟ್ಯಾಲಿ ಟ್ರ್ಯಾಕ್ಟರ್ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ, ಬಾಲಕನ ತಲೆ ಹಿಂಬದಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.
ಘಟನೆಯ ನಂತರ ಬಾಲಕನ ತಂದೆ ಸೈಯದ್ ಮಿಯಾ ಪಟೇಲ್ ಸುಲೇಪೇಟ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪಿಎಸ್‌ಐ ಅಮರ ಕುಲಕರ್ಣಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತಕ್ಕೆ ಕಾರಣನಾದ ಟ್ರ್ಯಾಕ್ಟರ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯಿಂದ ದಸ್ತಾಪೂರ ಗ್ರಾಮದಲ್ಲಿ ದುಃಖ ಮತ್ತು ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
