ವರದಿಗಾರರು :
ಅಜಯ್ ಚೌಧರಿ, ||
ಸ್ಥಳ :
ರಾಯಚೂರು
ವರದಿ ದಿನಾಂಕ :
28-11-2025
ರಾಯಚೂರಿನ ಹೆಚ್. ಸುಖದೇವ್ ರಾಷ್ಟ್ರಮಟ್ಟದ ಪ್ರಶಸ್ತಿ ಜಯ”
ರಾಯಚೂರು: ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಜ್ಞಾನಸೇತು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ ಕಾರಣಕ್ಕೆ, ರಾಯಚೂರು ಜಿಲ್ಲೆಯ ಶಿಕ್ಷಣ ಇಲಾಖೆಯ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿ ಹೆಚ್. ಸುಖದೇವ್ ಅವರನ್ನು ರಾಷ್ಟ್ರಮಟ್ಟದ ಪ್ರಶಸ್ತಿಯಿಂದ ಸನ್ಮಾನಿಸಲಾಗಿದೆ. ಜ್ಞಾನಸೇತು ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಇದರಲ್ಲಿ 55,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಹೆಚ್. ಸುಖದೇವ್ ನೋಡಲ್ ಅಧಿಕಾರಿಯಾಗಿ ಶಾಲೆಗಳಲ್ಲಿ ಡಿಜಿಟಲ್ ಕಲಿಕೆ ಮತ್ತು Khanamigo AI ತಂತ್ರಜ್ಞಾನ ಬಳಸಿ, ವಿದ್ಯಾರ್ಥಿಗಳಿಗೆ ವೈಯಕ್ತಿಕ ಕಲಿಕಾ ಅನುಭವವನ್ನು ಕಲ್ಪಿಸಿದ್ದಾರೆ.
ಡಿಜಿಟಲ್ ಶಿಕ್ಷಣದ ಅನುಷ್ಠಾನ: 6ರಿಂದ 10ನೇ ತರಗತಿ వరకు ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಲ್ಲಿ ಮತ್ತು ವಿಶೇಷ ಶಾಲೆಗಳಲ್ಲಿ. ಪ್ರತಿ ಶನಿವಾರ ಗಣಿತ, ವಿಜ್ಞಾನ, ಇಂಗ್ಲಿಷ್ ವಿಷಯಗಳಲ್ಲಿ ಡಿಜಿಟಲ್ ಕಲಿಕೆಯ ಸೆಷನ್ ಕಡ್ಡಾಯ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಸಮಾನ ಡಿಜಿಟಲ್ ಶಿಕ್ಷಣ ಅವಕಾಶ. ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಶಾಲೆಗಳು: ಆದರ್ಶ ಶಾಲೆ, ಲಿಂಗಸುಗೂರು ಕಸ್ತೂರ ಭಾ ಶಾಲೆ, ಮಲ್ಲಟ್ ಕಸ್ತೂರ್ಬಾ ಶಾಲೆ, ವೆಲ್ಕೋದಿನ್ನಿ ಕರ್ನಾಟಕ ಪಬ್ಲಿಕ್ ಸ್ಕೂಲ್, ಮುನೂರವಾಡಿ ಸರ್ಕಾರಿ ಪ್ರೌಢಶಾಲೆಗಳು: ಚಿಂಚೋಡಿ ದೇವದುರ್ಗ, ಖೈರಾರ್ವಾಡಗಿ ಲಿಂಗಸುಗೂರು, ಜಾಲಿಹಾಳ್, ಚಿಕ್ಕ ಹೇಸರೂರು ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ರಾಜ್ಯ ಕಾರ್ಯಕ್ರಮ ಅಧಿಕಾರಿ ಆರ್.ಕೆ. ವಾಣಿ, ನವದೆಹಲಿಯ ಖಾನ್ ಅಕಾಡೆಮಿಯ ಪ್ರಧಾನ ನಿರ್ದೇಶಕಿ ಸ್ವಾತಿ ವಾಸುದೇವನ್ ಮತ್ತು ರಾಜ್ಯ ಸಂಯೋಜಕಿ ಸಿಂಧು ಉಪಸ್ಥಿತರಿದ್ದರು.
