ವರದಿಗಾರರು :
ಎಚ್.ಎಮ್. ಹವಾಲ್ದಾರ, ||
ಸ್ಥಳ :
ಯಾದಗಿರಿ
ವರದಿ ದಿನಾಂಕ :
26-11-2025
ನೂತನ ಕ.ರ.ವೇ ಸ್ವಾಭಿಮಾನ ಬಣ: ಸಚಿನ್ ಕುಮಾರ ನಾಯಕ ಸುರಪುರ ತಾಲ್ಲೂಕು ಅಧ್ಯಕ್ಷ
ನೂತನ ಕ.ರ.ವೇ ಸ್ವಾಭಿಮಾನ ಬಣ ಸುರಪುರ ತಾಲ್ಲೂಕು ಅಧ್ಯಕ್ಷರಾಗಿ ಸಚಿನ್ ಕುಮಾರ ನಾಯಕ ಆಯ್ಕೆಯಾಗಿದ್ದಾರೆ. ರಾಜ್ಯಾಧ್ಯಕ್ಷ ಪಿ. ಕೃಷ್ಣೆಗೌಡ ಅವರ ಆದೇಶದ ಮೇರೆಗೆ ಮತ್ತು ಜಿಲ್ಲಾ ಅಧ್ಯಕ್ಷ ಬಿರೇಶ್ ಚಿರತನೋರ್ ಅವರ ನೇತೃತ್ವದಲ್ಲಿ ಸುರಪುರ ನಗರದ ಟೈಲರ್ ಮಂಜಿಲದಲ್ಲಿ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಚಿನ್ ಕುಮಾರ ನಾಯಕ ಅವರ ಸಾಮಾಜಿಕ ಹೋರಾಟ, ಸಮುದಾಯ ಸೇವೆ ಮತ್ತು ಸಾರ್ವಜನಿಕ ತ್ಯಾಗವನ್ನು ಗಮನಿಸಿ, ಮುಂದಿನ ದಿನಗಳಲ್ಲಿ ಅವರ ಹೋರಾಟಕ್ಕೆ ಕಾನೂನು ಚೌಕಟ್ಟಿನಲ್ಲಿ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಅಧಿಕೃತವಾಗಿ ಘೋಷಿಸಲಾಯಿತು.
ಕಾರ್ಯಕ್ರಮದಲ್ಲಿ ಹಾಜರಾದ ಪ್ರಮುಖರು: ಗುರುನಾಥ ರೆಡ್ಡಿ ವೆಂಕಟೇಶ್ ನಾಯಕ ಗೊಡಿಹಾಳ ದೇವುಗೌಡ ಗೊಡಿಹಾಳ ಭರತರಾಜ ಜಾಗಿರದಾರ ಮೌನೇಶ್ ಪತ್ತಾರ ಮಂಜುನಾಥ ಪ್ಯಾಪ್ಲಿ ಚಂದ್ರು ಪ್ರಧಾನಿ ಬಸವರಾಜ, ರಮೇಶ್, ಭೀಮು ಸಿದ್ದಾಪುರ ನಾಗು, ದೇವು, ಹಣಮಂತ, ದೇವುಪುತ್ರ, ರಾಯಪ್ಪ ಮತ್ತು ಇತರ ಗಣ್ಯರು
