ವರದಿಗಾರರು :
ಕೆ ಶರಣಬಸಪ್ಪ ||
ಸ್ಥಳ :
ಗಂಗಾವತಿ
ವರದಿ ದಿನಾಂಕ :
26-11-2025
ಗಂಗಾವತಿ: ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪ, ಸಾರ್ವಜನಿಕರ ಆಕ್ರೋಶ
ಗಂಗಾವತಿ: ತಾಲ್ಲೂಕಿನ ಹಲವು ಶಾಲೆಗಳಲ್ಲಿ ರಾತ್ರಿ ಶಿಕ್ಷಕರ ಕಲಿಕೆ ಕೇಂದ್ರಗಳು ಹಾಗೂ ಅಕ್ಷರ ಅಭ್ಯಾಸ ಕಾರ್ಯಕ್ರಮಗಳಿಗೆ ಸರ್ಕಾರ ನೀಡಿದ ಪುಸ್ತಕಗಳು ಮತ್ತು ಅನುದಾನವು ಮಕ್ಕಳಿಗೆ ತಲುಪದೆ ದುರ್ಬಳಕೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವರದಿ ಪ್ರಕಾರ, ರಾಜ್ಯ ಸರ್ಕಾರದಿಂದ ಪ್ರತಿ ವರ್ಷ ನೀಡಲಾಗುವ ಕೋಟಿಗಟ್ಟಲೆ ಅನುದಾನ ಮತ್ತು ಸಂಪನ್ಮೂಲಗಳನ್ನು ಕೆಲವು ಅಧಿಕಾರಿಗಳು ಗುಂಪಾಗಿ ದುರ್ಬಳಕೆ ಮಾಡುತ್ತಿದ್ದಾರೆ. ಕೇಂದ್ರಗಳ ಶಾಲಾ ಪುಸ್ತಕಗಳು ವಿದ್ಯಾರ್ಥಿಗಳಿಗೆ ತಲುಪದೇ ಅಧಿಕಾರಿ ಮತ್ತು ಅಧಿಕಾರಿಗಳ ತಮ್ಮ ಹಿತಕ್ಕೆ ಬಳಸಲಾಗುತ್ತಿರುವುದು ಸಾರ್ವಜನಿಕರ ಕಣ್ಣಿಗೆ ಬಂದಿದ್ದು, ಈ ಕುರಿತು ಆಕ್ರೋಶ ವ್ಯಕ್ತವಾಗಿದೆ.
ಸ್ಥಳೀಯರು ಹೇಳುವಂತೆ, “ಶಿಕ್ಷಣ ಇಲಾಖೆಯ ಕೆಲ ಅಧಿಕಾರಿಗಳು ನೈಜವಾಗಿ ಜವಾಬ್ದಾರಿ ವಹಿಸುವ ಬದಲು ಬಿಸಾಡಿ ನಿದ್ದೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಮತ್ತು ಪಾಲಕರು ಬಾಧಿತರಾಗಿದ್ದಾರೆ.”
