ವರದಿಗಾರರು :
ಡಾ. ಜ್ಯೋತಿ ||
ಸ್ಥಳ :
ತುಮಕೂರು
ವರದಿ ದಿನಾಂಕ :
28-10-2025
ಛಲವಾದಿ ಸಾಧಕರಿಗೆ ನವೆಂಬರ್ 5ರೊಳಗೆ ಅರ್ಜಿ ಆಹ್ವಾನ
ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 11ರಂದು “ಒನಕೆ ಓಬವ್ವ ಜಯಂತಿ” ಉತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಛಲವಾದಿ ಸಮುದಾಯದ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಆಸಕ್ತರು ತಮ್ಮ ಸ್ವ-ಬರಹದ ಅರ್ಜಿಯನ್ನು ನವೆಂಬರ್ 5ರೊಳಗಾಗಿ ಸಲ್ಲಿಸಬೇಕು. ಅರ್ಜಿಗಳನ್ನು ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರ, ಪಠ್ಯ ಬಾಳನಕಟ್ಟೆ, ತುಮಕೂರು ಇವರಿಗೆ ನೀಡಬಹುದು.
