ಸಿಎಂ - ಡಿಸಿಎಂ ಕಿತ್ತಾಟದಿಂದ ಅಭಿವೃದ್ಧಿ ಹಿನ್ನಡೆ: ಸಂಸದ ಶೆಟ್ಟರ್

ವರದಿಗಾರರು : ಬೆಳಗಾವಿ || ಸ್ಥಳ : ಬಸವರಾಜ್
ವರದಿ ದಿನಾಂಕ : 01-12-2025

ಸಿಎಂ - ಡಿಸಿಎಂ ಕಿತ್ತಾಟದಿಂದ ಅಭಿವೃದ್ಧಿ ಹಿನ್ನಡೆ: ಸಂಸದ ಶೆಟ್ಟರ್

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ನಡುವೆ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಕಿತ್ತಾಟದಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಶೀಘ್ರವೇ ಕಾಂಗ್ರೆಸ್ ಸರ್ಕಾರ ಪತನವಾಗಲಿದ್ದು, ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರಲಿದೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಕ್ಕೆಜೋಳ, ಹೆಸರು, ಉದ್ದು ಬೆಳೆ ಖರೀದಿ ಕೇಂದ್ರ ಆರಂಭ ಆಗಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ. ಭ್ರಷ್ಟಾಚಾರ ‌ಮೀತಿ ಮೀರಿದೆ. ಸಿದ್ದರಾಮಯ್ಯ ತಮ್ಮ ಆಡಳಿತದ ಬಿಗಿ ಕಳೆದುಕೊಂಡಿದ್ದಾರೆ. ರಾಜ್ಯದ ಖಜಾನೆಯಲ್ಲಿ ಹಣ ಇಲ್ಲ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾಮಗಾರಿ ಕುಂಠಿತವಾಗಿವೆ. ಸರ್ಕಾರ ಜೀವಂತ ವ್ಯವಸ್ಥೆಯಲ್ಲಿ ಇಲ್ಲ. ಸರ್ಕಾರ ಆವೃತ್ತ ನಿಧಿಯಲ್ಲಿ ಹಣವನ್ನು ಇಡಬೇಕಾಗುತ್ತದೆ. ಆದರೆ, ಸದ್ಯದ ಸ್ಥಿತಿ ನೋಡಿದರೆ ಆವೃತ್ತ ನಿಧಿಯಲ್ಲಿ ಹಣ ಇಲ್ಲವೇ? ಮೆಕ್ಕೆಜೋಳ, ಉದ್ದು ಹೆಸರು ಬೆಳೆಗೆ ಬೆಂಬಲ ಬೆಲೆ ನೀಡದಿರುವುದರಿಂದ ರೈತರು ಬೀದಿಗೆ ಬಿದ್ದಿದ್ದಾರೆ. ಇದು ಸರ್ಕಾರದ ಬೇಜವಾಬ್ದಾರಿಯ ಪರಮಾವಧಿ ಆಗಿದೆ. ಕಬ್ಬಿನ ಬೆಲೆ ನಿಗದಿ ವಿಚಾರದಲ್ಲಿ ಕೇಂದ್ರದ ಮೇಲೆ ಬೊಟ್ಟು ಮಾಡಿ ತೋರಿಸುವ ರಾಜ್ಯ ಸರ್ಕಾರಕ್ಕೆ ಬೆಲೆ ನಿಗದಿ ಅಧಿಕಾರ ಇಲ್ಲ ಎನ್ನುವ ಸಕ್ಕರೆ ಸಚಿವರು, ಎಸ್‌ಎಪಿ ಕಾನೂನನ್ನು ಅರಿಯಬೇಕಿದೆ. ಎಫ್‌ಆರ್‌ಪಿ ನಿಗದಿಯನ್ನು ಕೇಂದ್ರ ಸರ್ಕಾರ ಮಾಡುತ್ತದೆ ನಿಜ. ಆದರೆ, ಎಸ್‌ಎಪಿಯನ್ನು ರಾಜ್ಯ ಸರ್ಕಾರ ಮಾಡಬೇಕು. ಈ ಕಾನೂನು ರಾಜ್ಯ ಸರ್ಕಾರಕ್ಕೆ ಗೊತ್ತಿಲ್ಲವೇ? ಸರ್ಕಾರ ಅಂಧಾದುಂದಿ ಆಡಳಿತ ನಡೆಸುತ್ತಿದೆ ಎಂದು ಟೀಕಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅ‍ವರು ಹೈಕಮಾಂಡ್‌ ತೀರ್ಮಾನ ಕೈಗೊಳ್ಳುತ್ತದೆ ಎಂದು ಅಸಹಾಯಕತೆಯ ಹೇಳಿಕೆ ಕೊಟ್ಟಿದ್ದಾರೆ. ಅಂದರೆ ಕಾಂಗ್ರೆಸ್‌ನಲ್ಲಿ ಹೈಕಮಾಂಡ್‌ ಯಾರು? ಕೂಡಲೇ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಕೇಂದ್ರ ಯೋಜನೆಗಳ ಕಾಮಗಾರಿ ವಿಳಂಬ ಬೆಳಗಾವಿ- ಧಾರವಾಡ ಹೊಸ ರೈಲು ಯೋಜನೆಗೆ ದಿ.ಸುರೇಶ ಅಂಗಡಿ ₹927 ಕೋಟಿ ಅನುದಾನ ಮಂಜೂರು ಮಾಡಿಸಿದ್ದರು. ಭೂಸ್ಥಾದೀನ ಪ್ರಕ್ರಿಯೆ ಮುಗಿದಿದೆ. 406 ಎಕರೆ ಭೂಮಿ ಸ್ವಾಧೀನಕ್ಕಾಗಿ ₹129 ಕೋಟಿ ಪರಿಹಾರ ಹಣ ಬಿಡುಗಡೆ ಮಾಡಬೇಕು. ಆದರೆ, ಈವರೆಗೆ ಒಂದು ರುಪಾಯಿ ಹಣ ಬಿಡುಗಡೆ ‌ಆಗಿಲ್ಲ. ಭೂಸ್ವಾಧೀನದ ಹಣ ಏರಿಕೆಯಾಗಲಿದೆ. ಮುಖ್ಯಮಂತ್ರಿ ಸಹಾಯಕತೆ ತೋರಿಸಿದ ಮೇಲೆ ಬಹಿರಂಗ ಪತ್ರ ಬರೆಯುತ್ತೇನೆ. ಈ ವಿಚಾರದಲ್ಲಿ ಸರ್ಕಾರ ಮೌನ ವಹಿಸಿದೆ. ಸ್ಮಾರ್ಟ್‌ಸಿಟಿ-2 ಗೆ ₹130 ಕೋಟಿ ಮಂಜೂರು ಆಗಿದೆ ಎಂದರು.

ಘನತ್ಯಾಜ್ಯ ವಿಲೇವಾರಿಗೆ ಕೇಂದ್ರದಿಂದ ಹಣ ಬಿಡುಗಡೆ. ಹಣ ಉಪಯೋಗ ಮಾಡಿಲ್ಲ, ವಾಪಸ್ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಅಮೃತ-2 ಯೋಜನೆಯಲ್ಲಿ 7 ಕೆರೆ, 7 ಉದ್ಯಾನ ಅಭಿವೃದ್ಧಿಗೆ ₹ 40 ಕೋಟಿ ಬಿಡುಗಡೆ ಆಗಿದೆ. ಈ ಹಣವನ್ನು ಉಪಯೋಗ ಮಾಡುತ್ತಿಲ್ಲ. ಅಧಿಕಾರಿಗಳು ಈ ಬಗ್ಗೆ ಗಮನವೇ ಹರಿಸುತ್ತಿಲ್ಲ ಎಂದು ಹೇಳಿದರು. ಸವದತ್ತಿ ಯಲ್ಲಮ್ಮ ದೇವಾಲಯ ಅಭಿವೃದ್ಧಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ₹ 118ಕೋಟಿ ಕೇಂದ್ರ ಸರ್ಕಾರದಿಂದ ಬಂದಿದೆ. ₹ 300ಕೋಟಿ ರಾಜ್ಯ ಸರ್ಕಾರ ಹಣ ಘೋಷಣೆ ಮಾಡಿದೆ. ಈವರೆಗೆ ಒಂದು ರುಪಾಯಿಯನ್ನು ಬಿಡುಗಡೆ ಮಾಡಿಲ್ಲ. ಈ ಎಲ್ಲಾ ವಿಚಾರ ಮುಂದಿಟ್ಟು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯುವೆ. ಪ್ರವಾಸೋದ್ಯಮ, ಮುಜರಾಯಿ ಇಲಾಖೆ ಫೈಟ್ ನಡೆಯುತ್ತಿದೆ. ಸಿಎಂ, ಡಿಸಿಎಂ ಅಷ್ಟೇ ಇಲಾಖೆಯಲ್ಲಿಯೂ ಫೈಟ್ ನಡೆಯುತ್ತಿದೆ. ಒಂದು ಪೈಸಾದಷ್ಟು ಟೆಂಡರ್ ಕೆಲಸ ಆಗಿಲ್ಲ. ಸರ್ಕಾರ ಜೀವಂತ ಹೆಣವಾಗಿರುವುದರಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಆರೋಪಿಸಿದರು.

ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಖಂಡ ಕರ್ನಾಟಕ ಏಕೀಕರಣದ ಕುರಿತು ಬಹಿರಂಗ ಚರ್ಚೆಯಾಗಬೇಕಿದೆ. ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಬೇಕು. ಆಡಳಿತ ಜನತೆಯ ಬಳಿ ಹೋಗಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಂ.ಬಿ.ಜಿರಲಿ, ಸಂಜಯ ಪಾಟೀಲ, ಅನಿಲ ಬೆನಕೆ, ಹಣಮಂತ ಕೊಂಗಾಲಿ, ರಮೇಶ ದೇಶಪಾಂಡೆ ಇತರರು ಹಾಜರಿದ್ದರು.

ವಿವ ಟೆಕ್ ಕಚೇರಿಯಲ್ಲಿ ಕ್ರಿಸ್ಮಸ್ ಸಡಗರ

ಒಟ್ಟು ಓದುಗರ ಸಂಖ್ಯೆ : 1233+

ಬೀದರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ವೀರ ಬಾಲ ದಿವಸ ಆಚರಣೆ

ಒಟ್ಟು ಓದುಗರ ಸಂಖ್ಯೆ : 1317+

ಕಾಲುನಡಿಯಲ್ಲಿ ಮಾಗಡಿಯಿಂದ ಮಂತ್ರಾಲಯಕ್ಕೆ ಪಾದಯಾತ್ರೆ.

ಒಟ್ಟು ಓದುಗರ ಸಂಖ್ಯೆ : 1776+

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಎರಕಟ್ಟೆ ಬಳಿ ಗಂಡಾನೆ ಸಾವು

ಒಟ್ಟು ಓದುಗರ ಸಂಖ್ಯೆ : 1787+

ನ್ಯಾಯಾಲಯಗಳಲ್ಲಿ 2026 ರ ಜನವರಿ 2 ರಿಂದ 90 ದಿನಗಳ ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ 2.0″ ಅಭಿಯಾನ..

ಒಟ್ಟು ಓದುಗರ ಸಂಖ್ಯೆ : 1875+

ಇಂದು ಸಿಎಂ ಸಿದ್ದರಾಮಯ್ಯ ದಾವಣಗೆರೆಗೆ

ಒಟ್ಟು ಓದುಗರ ಸಂಖ್ಯೆ : 1903+

ವಿವಿಧ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಕೆ.ಹೆಚ್ ಮುನಿಯಪ್ಪ

ಒಟ್ಟು ಓದುಗರ ಸಂಖ್ಯೆ : 2002+

ವಿದ್ಯಾನಗರ ಪೊಲೀಸರ ಕಾರ್ಯಾಚರಣೆ: ಅಕ್ರಮ ಮಾದಕ ವಸ್ತು ಮಾರಾಟ-ಸೇವನೆ; ನಾಲ್ವರು ಬಂಧನ

ಒಟ್ಟು ಓದುಗರ ಸಂಖ್ಯೆ : 1909+

ಶಾಮನೂರು ಶಿವಶಂಕರಪ್ಪ ಸ್ಮೃತಿ ಸ್ಥಳಕ್ಕೆ ಎಚ್.ಡಿ. ಕುಮಾರಸ್ವಾಮಿ ನಮನ

ಒಟ್ಟು ಓದುಗರ ಸಂಖ್ಯೆ : 1921+

ಅದ್ದೂರಿಯಾಗಿ ನಡೆದ ಘಾಟಿ ಸುಬ್ರಮಣ್ಯ ಬ್ರಹ್ಮರಥೋತ್ಸವ

ಒಟ್ಟು ಓದುಗರ ಸಂಖ್ಯೆ : 1966+

ಮನುಸ್ಮೃತಿ ದಹನ ದಿನ

ಒಟ್ಟು ಓದುಗರ ಸಂಖ್ಯೆ : 1931+

ಹಿಟ್ ಅಂಡ್ ರನ್ ಅಪಘಾತದಲ್ಲಿ ಮರಣ ಹೊಂದಿದ ರಾಜನಾಯಕನ ಕುಟುಂಬಕ್ಕೆ ಸರ್ಕಾರದ ವತಿಯಿಂದ 2 ಲಕ್ಷ ಪರಿಹಾರ

ಒಟ್ಟು ಓದುಗರ ಸಂಖ್ಯೆ : 4599+

ಚಿಕ್ಕತುಷ್ಟೂರಿನಲ್ಲಿ 13.5 ಎಕರೆ ವ್ಯಾಪ್ತಿಯಲ್ಲಿ ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ ನಿರ್ಮಾಣ

ಒಟ್ಟು ಓದುಗರ ಸಂಖ್ಯೆ : 4582+

ಯೇಸು ಕ್ರಿಸ್ತನ ಹುಟ್ಟುಹಬ್ಬ (ಕ್ರಿಸ್‌ಮಸ್) ಕುರಿತು ಲೇಖನ

ಒಟ್ಟು ಓದುಗರ ಸಂಖ್ಯೆ : 4796+

ಅಟಲ್ ಎಂಬ ಅಜಾತಶತ್ರು.

ಒಟ್ಟು ಓದುಗರ ಸಂಖ್ಯೆ : 4806+

ಶಾಂತಿದೂತ ಏಸುಕ್ರಿಸ್ತನ ಜನುಮದಿನ

ಒಟ್ಟು ಓದುಗರ ಸಂಖ್ಯೆ : 5000+

ಮಾರ್ಕ್ - 45 ??? ಅಸಲಿ ಕಹಾನಿ

ಒಟ್ಟು ಓದುಗರ ಸಂಖ್ಯೆ : 5045+

ಕಾಂಗ್ರೆಸ್ ಸರ್ಕಾರದ ದ್ವೇಷಭಾಷಣ ಅಪರಾಧಗಳ ಮಸೂದೆ ಕೂಡಲೇ ವಾಪಸ್ ಪಡೆಯುಂತೆ  ಬಿಜೆಪಿ ಪ್ರತಿಭಟನೆ

ಒಟ್ಟು ಓದುಗರ ಸಂಖ್ಯೆ : 7301+

ದಾವಣಗೆರೆ ಜಿಲ್ಲೆಯ 240 ಕಾರ್ಖಾನೆಗಳಲ್ಲಿ ಸುರಕ್ಷತಾ ಕ್ರಮಗಳಿದೆಯೇ? ಅವಘಡ ತಪ್ಪಿಸಲು ತಕ್ಷಣ ಪರಿಶೀಲನೆ ಅಗತ್ಯ

ಒಟ್ಟು ಓದುಗರ ಸಂಖ್ಯೆ : 7394+

ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಶಾಶ್ವತ ಯೌಗಿಕ ಹಾಗೂ ನೈಸರ್ಗಿಕ ಕೃಷಿ ಕುರಿತು ಕಾರ್ಯಗಾರ

ಒಟ್ಟು ಓದುಗರ ಸಂಖ್ಯೆ : 7419+

ಪುನೀತ್ ರಾಜ್‍ಕುಮಾರ್ ಕಪ್’ ಸೀಸನ್ 4 ಚಾಂಪಿಯನ್

ಒಟ್ಟು ಓದುಗರ ಸಂಖ್ಯೆ : 7421+

ದಾವಣಗೆರೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣ

ಒಟ್ಟು ಓದುಗರ ಸಂಖ್ಯೆ : 7430+

ದಾವಣಗೆರೆ ಆನಗೋಡು ಗ್ರಾಮದಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ

ಒಟ್ಟು ಓದುಗರ ಸಂಖ್ಯೆ : 7440+

ನ್ಯೂ ಇಯರ್ ಭದ್ರತೆಗೆ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಕ್ರಮ

ಒಟ್ಟು ಓದುಗರ ಸಂಖ್ಯೆ : 7715+

ಉದ್ಯಾನ ನಗರಿಯಲ್ಲಿ ಕ್ರಿಸ್ಮಸ್ ಸಂಭ್ರಮ.

ಒಟ್ಟು ಓದುಗರ ಸಂಖ್ಯೆ : 7724+

ಡ್ರಗ್ಸ್ ಕೇಸಲ್ಲಿ ಭಾಗಿಯಾದವರ ಮೇಲೆ ಮುಲಾಜಿಲ್ಲದೇ ಕ್ರಮವೆಂದ್ರು ಎಸ್ಪಿ ಉಮಾ ಪ್ರಶಾಂತ್..

ಒಟ್ಟು ಓದುಗರ ಸಂಖ್ಯೆ : 10083+

ಚಿರತೆಗಿಟ್ಟಿದ್ದ ಬೋನಿನಲ್ಲಿ ಸಿಲುಕಿದ ವ್ಯಕ್ತಿ, 3 ತಾಸು ಬೋನಿನಲ್ಲೇ ಚೀರಾಟ !

ಒಟ್ಟು ಓದುಗರ ಸಂಖ್ಯೆ : 10255+

ಡಿಸೆಂಬರ್ 29 ರಂದು ಬೊಮ್ಮಗೊಂಡೇಶ್ವರ ದೇವಸ್ಥಾನ ಭೂಮಿ ಪೂಜೆ

ಒಟ್ಟು ಓದುಗರ ಸಂಖ್ಯೆ : 10268+

ಮುದೇನೂರು ಗ್ರಾಮದ ನವೀನ್ ಕುಮಾರ ಕಡಾರಿ ಭಗತ್ ಸಿಂಗ್ ಜನ್ಮಸ್ಥಳ ಬಂಗಾಕ್ಕೆ 2300 ಕಿ.ಮೀ ಸೈಕಲ್ ಪಯಣ

ಒಟ್ಟು ಓದುಗರ ಸಂಖ್ಯೆ : 10596+

2025 ವರ್ಷಕ್ಕೆ ಗುಡ್ ಬೈ ಹೇಳಲು ದಿನಗಣನೆ ಸಂಭ್ರಮ ಮತ್ತು ಸುರಕ್ಷತಾ ಕ್ರಮ

ಒಟ್ಟು ಓದುಗರ ಸಂಖ್ಯೆ : 10758+

ಬುದ್ಧಿಶಕ್ತಿ, ವಿವೇಕ ಮತ್ತು ಜ್ಞಾನದಿಂದಲೇ ಹಕ್ಕು–ಸೌಲಭ್ಯಗಳ ಸಾಧನೆ: ಜಿ.ಬಿ. ವಿನಯ್ ಕುಮಾರ್

ಒಟ್ಟು ಓದುಗರ ಸಂಖ್ಯೆ : 10822+

ನಲ್ಲೂರು ಜ್ಯುಯಲರ್ಸ್ ಕುಟುಂಬದಿಂದ ಕೊಡುಗೆ.

ಒಟ್ಟು ಓದುಗರ ಸಂಖ್ಯೆ : 10845+

ಹುಣಸೂರು ನಗರದಲ್ಲಿ ಬಾಲ್ಯ ವಿವಾಹ ತಡೆದ ಅಧಿಕಾರಿಗಳು

ಒಟ್ಟು ಓದುಗರ ಸಂಖ್ಯೆ : 10906+

ಬಿಜೆಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತ್ತು ದೇವನಹಳ್ಳಿ ಮಂಡಲ ಪದಾಧಿಕಾರಿಗಳ ಆಯ್ಕೆ

ಒಟ್ಟು ಓದುಗರ ಸಂಖ್ಯೆ : 10891+

ರಾಷ್ಟ್ರೀಯ ರೈತರ ದಿನ

ಒಟ್ಟು ಓದುಗರ ಸಂಖ್ಯೆ : 10881+

ತಹಸೀಲ್ದಾರರು ಹಾಗೂ ತಾಲ್ಲೂಕು ದಂಡಾಧಿಕಾರಿಗಳಿಗೆ ಶಾಸಕರ ಗ್ರಾಮ ಸಂಚಾರದಿಂದ ವಿನಾಯ್ತಿ ನೀಡುವಂತೆ ಮನವಿ

ಒಟ್ಟು ಓದುಗರ ಸಂಖ್ಯೆ : 12885+

ಇಸ್ರೋ ಜಾಗತಿಕ ಬ್ರಾಡ್‌ಬ್ಯಾಂಡ್ ಉಪಗ್ರಹ ಉಡಾವಣೆ

ಒಟ್ಟು ಓದುಗರ ಸಂಖ್ಯೆ : 13338+

ಹೆಣ್ಣುಮಕ್ಕಳು ಸ್ವಾವಲಂಬಿಯಾಗಲು ಪ್ರಯತ್ನಿಸಬೇಕು ಡಾ. ವಿಶಾಲಾಕ್ಷಿ ವಿ. ಕರಡ್ಡಿ

ಒಟ್ಟು ಓದುಗರ ಸಂಖ್ಯೆ : 13373+

ಕೈ ಮುಗಿತಿನಿ ಕಿತ್ತಾಡ್ಬೇಡ್ರಪ್ಪೋ....ನಾಯಕದ್ವಯರ ಕುರ್ಚಿ ಕದನ ಹೈರಾಣಾದ ಕಾಂಗ್ರೆಸ್ ಹೈ ಕಮಾಂಡ್

ಒಟ್ಟು ಓದುಗರ ಸಂಖ್ಯೆ : 13364+

ರಾಷ್ಟ್ರೀಯ ಗಣಿತ ದಿನ

ಒಟ್ಟು ಓದುಗರ ಸಂಖ್ಯೆ : 13617+

ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್: ಕೋಲಾರದ ಜಗದೀಶ್ ಕೆ.ಸಿ.ಗೆ ಚಿನ್ನ–ಕಂಚು

ಒಟ್ಟು ಓದುಗರ ಸಂಖ್ಯೆ : 13718+

ಮುಕ್ತಿ ಕಾಲೋನಿಯ ಬಾಳೆ ತೋಟದಲ್ಲಿ ನಿತ್ರಾಣವಾಗಿದ್ದ ಹುಲಿ ಸೆರೆ

ಒಟ್ಟು ಓದುಗರ ಸಂಖ್ಯೆ : 13735+

ಚಿಕ್ಕೋಡಿ ನ್ಯಾಯಾಲಯ ಆವರಣದಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ಉದ್ಘಾಟನೆ

ಒಟ್ಟು ಓದುಗರ ಸಂಖ್ಯೆ : 13724+

ಬಿಸಿ ನೀರಿಗೆ ಬಿದ್ದು ಎರಡು ವರ್ಷದ ಹೆಣ್ಣು ಮಗು ಸಾವು

ಒಟ್ಟು ಓದುಗರ ಸಂಖ್ಯೆ : 13752+

ಗಡಿಜಿಲ್ಲೆಯಲ್ಲಿ‌ ಹುಲಿಗಳ‌ ಓಡಾಟ

ಒಟ್ಟು ಓದುಗರ ಸಂಖ್ಯೆ : 18625+

ಜೈ ಹನುಮಾನ್

ಒಟ್ಟು ಓದುಗರ ಸಂಖ್ಯೆ : 18900+

ಕಲೆ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಗ್ರಾಮೀಣ ಭಾಗದಲ್ಲಿ ನಡೆಯುತ್ತಿದೆ.ಪರಮೇಶ್ವ ಪಾಟೀಲ್ ತಡಪಳ್ಳ

ಒಟ್ಟು ಓದುಗರ ಸಂಖ್ಯೆ : 18969+

ಕೊರಟಗೆರೆಯಲ್ಲಿ ತಿಹಾಸದಲ್ಲೇ ಇದೇ ಮೊದಲ ಬಾರಿಗೆ ಶ್ರೀನಿವಾಸ ಕಲ್ಯಾಣೋತ್ಸವ

ಒಟ್ಟು ಓದುಗರ ಸಂಖ್ಯೆ : 19068+