
ಲೈವ್ ಟಿವಿ ನ್ಯೂಸ್

ದಿನಾಂಕ : 08-09-2025
ಶ್ರೀ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ
ವರದಿಗಾರರು : ಬಸವರಾಜ ಪೂಜಾರಿ
ವರದಿ ಸ್ಥಳ :ಬೀದರ
ಒಟ್ಟು ಓದುಗರ ಸಂಖ್ಯೆ : 13+
ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಸದ್ಗುರು ಶ್ರೀ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ಶಂಭುಲಿಂಗೇಶ್ವರರ 90ನೇ ಪುಣ್ಯ ಸ್ಮರಣೆ ಕಾರ್ಯಕ್ರಮದ ನಿಮಿತ್ತವಾಗಿ ರೇಕುಳಗಿ: ಸದ್ಗುರು ಶ್ರೀ ಶಂಭುಲಿಂಗೇಶ್ವರ ಹಾಗೂ ಮಾತೆ ಬಸಮ್ಮ ತಾಯಿ ದರ್ಶನ ಪಡೆದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಬೀದರ್ (ಸೆ.07): ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು, ಸದ್ಗುರು ಶ್ರೀ ಶಂಭುಲಿಂಗೇಶ್ವರರ 90ನೇ ಪುಣ್ಯ ಸ್ಮರಣೆ ಕಾರ್ಯಕ್ರಮದ ನಿಮಿತ್ತವಾಗಿ ಭಾನುವಾರ ಸಂಜೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ರೇಕುಳಗಿ ಗ್ರಾಮದ ಮಹಾಯೋಗಿ ಸದ್ಗುರು ಶ್ರೀ ಶಂಭುಲಿಂಗೇಶ್ವರ ಹಾಗೂ ಮಹಾಭಕ್ತೆ ಶಿರೋಮಣಿ ಶ್ರೀ ಬಸಮ್ಮ ತಾಯಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸಜ್ಜದ್ ಸಾಹೇಬ್, ಮಲ್ಲಪ್ಪ ಮನ್ನಾಎಖೇಳ್ಳಿ, ಸಂಗಪ್ಪ ಪಾಟೀಲ್, ಪುಟ್ಟರಾಜ್ ರೇಕುಳಗಿ, ಫೀಜೋರ್ ಸಾಹೇಬ್, ಕ್ರಿಸ್ಟೋಫರ್, ಬಕ್ಕಪ್ಪ, ಅಶೋಕ್ ಜಮಾದಾರ್ ಸೇರಿದಂತೆ ನೇಕರಿದ್ದರು.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















