ವರದಿಗಾರರು :
ಎಚ್ ಎಮ್ ಹವಾಲ್ದಾರ ||
ಸ್ಥಳ :
ಯಾದಗಿರಿ
ವರದಿ ದಿನಾಂಕ :
01-12-2025
ಸುರಪುರ ಶಾಸಕರ ವಿರುದ್ದ ಅವಹೇಳನಕಾರಿ ಪೋಸ್ಟ್ ಹಾಕಿರುವ ಆರೋಪಿಯ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ನೂತನ ಶಾಸಕರಾಗಿ ಆಯ್ಕೆ ಆಗಿರುವಂತ ರಾಜ ವೇಣುಗೋಪಾಲ್ ನಾಯಕ್ ಅವರು ನವೆಂಬರ್ 26ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವೃತಕ್ಕೆ ಮಾಲಾರ್ಪಣೆ ಮಾಡುವ ಸಮಯದಲ್ಲಿ ಕೆಲವು ದಲಿತ ಸಂಘಟನೆಯ ಮುಖಂಡರು ಧಿಕ್ಕಾರ ಕೂಗಿ ಅಡ್ಡೆಪಡಿಸಿದ್ದಲ್ಲದೆ ಮಾನ್ಯ ತಹಶೀಲ್ದಾರ ಅವರ ವಿರುದ್ಧ ಘೋಷಣೆ ಕೂಗುತ್ತಾ ಮಾಲಾರ್ಪಣೆ ಮಾಡಲು ಬಿಡದೆ ಹವಮಾನ ಮಾಡಿದ್ದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಮಾನ್ಯ ರಾಜ ವೇಣುಗೋಪಾಲ್ ನಾಯಕ ಅವರಿಗೆ ಅಶ್ಲೀಲ ಪದ ಬಳಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿವರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಕೂಡಲೇ ಅವರನ್ನು ಬಂಧಿಸಬೇಕು ಎಂದು ಸುರಪುರ ಪೊಲೀಸ್ ಠಾಣೆಯದರು ಶಾಸಕರ ಬೆಂಬಲಿಗರು ಮತ್ತು ಅಭಿಮಾನಿಗಳು ಪ್ರತಿಭಟನೆ ನಡೆಸಿದರು
ಮಾನ್ಯ ದಿವಂಗತ ರಾಜ ವೆಂಕಟಪ್ಪ ನಾಯಕ ಅವರು ತಮ್ಮ ರಾಜಕೀಯ ಜೀವನದಲ್ಲಿ ದಲಿತ ಸಂಘಟನೆ ಯಾಗಲಿ ಯಾವುದೇ ಸಮಾಜದ ಸಂಘಟನೆಗಳಾಗಲಿ, ಸಮಾಜಕ್ಕಾಗಲಿ ಕೊಟ್ಟ ಮಾತಿನಂತೆ ನಡೆದುಕೊಂಡವರು ಮತ್ತು ಎಲ್ಲರಿಗೂ ಸಮನಾಗಿ ಕಾಣುವಂತ ನಾಯಕರು ಅವರ ರಾಜಕೀಯ ಜೀವನದಲ್ಲಿ ಎಲ್ಲಾ ಸಮಾಜದಲ್ಲಿ ಕೂಡ ಯಾವುದೇ ಕುಂದುಕೊರತುಗಳಿದ್ದರೂ ಕೂಡ ತಾಲೂಕಿನಲ್ಲಿ ಬಗೆಹರಿಸಿದ್ದಾರೆ ಇದೇ ದಲಿತ ಸಂಘಟನೆಯವರ ಮಾತಿಗೆ ಬೆಲೆ ಕೊಟ್ಟು ಸುರಪುರ ಹೃದಯ ಭಾಗವಾಗಿರುವ ಬಸ್ ನಿಲ್ದಾಣದ ಎದುರಲ್ಲಿ ಅವರಿಷ್ಟದಂತೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವೃತ್ತವನ್ನು ಕೂಡ ಮಾಡಿಕೊಟ್ಟಿದ್ದಾರೆ ಹಾಗೂ ಈ ಸಮಾಜಕ್ಕೆ ಯಾವುದೇ ಕುಂದು ಕೊರತೆಗಳು ಇಲ್ಲದಂತೆ ನೋಡಿಕೊಂಡು ಬಂದಿದ್ದಾರೆ
ಆದರೆ ಕಾಲೇಜ್ ಆವರಣದಲ್ಲಿ ಭೂಮಿಗಾಗಿ ಒಂದು ತಿಂಗಳವರೆಗೂ ಧರಣಿ ಕುಂತಿರುವುದು ನಿಜ ಆದರೆ ಇದಕ್ಕೆ ಅಧಿಕಾರಿಗಳು ಮತ್ತು ಸರಕಾರ ಕ್ರಮ ಕೈಗೊಳ್ಳಬೇಕು ಒಂದು ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಅದರಲ್ಲಿ ಮಕ್ಕಳು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಪೀಠಿಕೆಯನ್ನು ಓದುತ್ತಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯ ಘೋಷಗಳನ್ನು ಕೂಗುತ್ತಾ ಸಂತೋಷದಿಂದ ಕಾರ್ಯಕ್ರಮ ನಡೆಯುವ ಸಂದರ್ಭ ದಲ್ಲಿ ಈ ರೀತಿ ಧಿಕ್ಕಾರದ ಘೋಷಣೆಯ ಕೂಗುವುದು ಎಷ್ಟರಮಟ್ಟಿಗೆ ಸರಿ ಎಂದು ಶಾಸಕರು ಕೇಳಿದ ಕಾರಣಕ್ಕಾಗಿ ಶಾಸಕರ ವಿರುದ್ಧವೇ ಸಾಮಾಜಿಕ ಜಾಲತಾಣದಲ್ಲಿ ಆಸ್ಲೀಲ ಪದಗಳನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ ಹರೇ ಬಿಡುವುದು ಇದು ಒಂದು ನಾಚಿಕೆಗೇಡಿನ ಸಂಗತಿ ಎಂದು ರಮೇಶ್ ದೊರೆ ಆಲ್ದಾಳ್ ಆಕ್ರೋಶ ವ್ಯಕ್ತಪಡಿಸಿದರು
ಇಡೀ ದೇಶಕ್ಕೆ ಸಂವಿಧಾನ ಕೊಟ್ಟಿರುವಂತಹ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಂದು ದಲಿತ ಸಮುದಾಯಕ್ಕೆ ಸೀಮಿತವಾದವರಲ್ಲ ಎಲ್ಲರಿಗೂ ಕೂಡ ಅವರ ಬಗ್ಗೆ ಸ್ವಾಭಿಮಾನ ಗೌರವ ಅವರು ಬರೆದಿರುವಂತಹ ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಇವತ್ತು ಜೀವನ ಮಾಡುತ್ತಿದ್ದೇವೆ ಆದರೆ ಬಾಬಾ ಸಾಹೇಬ್ ನಮ್ಮವರು ಎಂದು ಹೇಳಿದರೆ ಸಮಾಜ ಒಪ್ಪುವುದಿಲ್ಲ ಆದ್ದರಿಂದ ನೀವು ಯಾವ ರೀತಿ ಗೌರವಿಸುತ್ತೀರೋ ಅದೇ ರೀತಿ ಕೂಡ ನಾವು ಬಾಬಾ ಸಾಹೇಬರ ಮೂರ್ತಿಗೆ ಮಾಲಾರ್ಪಣೆ ಮಾಡಲು ಬಂದಿದ್ದೆವು. ಆದರೆ ನೀವು ತಾಲೂಕ್ ಆಡಳಿತದ ವಿರುದ್ಧವೂ ಕೂಡ ಧಿಕ್ಕಾರ ಕೂಗುವುದಲ್ಲದೆ ಶಾಸಕರ ಮಾತಿಗೂ ಕೂಡ ಆಗೌರವ ತೋರಿಸುತ್ತಿದ್ದೀರಿ ಈಗಾದರೆ ಸಮಾಜದಲ್ಲಿ ಯಾವ ಸಂದೇಶ ಮೂಡಿಸಲು ನೀವು ಹೊರಟಿದ್ದೀರಿ ಎಂದು ವೆಂಕಟೇಶ್ ಬೇಟೆಗಾರ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ವೆಂಕಟೇಶ್ ಬೇಟೆಗಾರ. ರಮೇಶ್ ದೊರೆ ಅಲ್ದಾಳ್. ಭೀಮನಗೌಡ ಲಕ್ಷ್ಮಿಪುರ. ಮಾರ್ಥಂಡಪ್ಪ ದೇವರ ಗೋನಾಲ್. ಹನುಮಂತ್ ರಾಯ ಮಕಾಶಿ. ಭೀಮು ನಾಯಕ್ ಮಲ್ಲಿಬಾವಿ . ಗೌಡಪ್ಪ ಬಿಚಲಗತ್ತಿ. ನಾಗರಾಜ್ ಫ್ಯಾಪ್ಲಿ ವೆಂಕಟೇಶ್ ಫ್ಯಾಪ್ಲಿ.ಭಾಗನಾಧ.ವೀರುಪಾಕ್ಷಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು
