ವರದಿಗಾರರು :
ಬಸವರಾಜ ಪೂಜಾರಿ ಬೀದರ ||
ಸ್ಥಳ :
ಬೀದರ
ವರದಿ ದಿನಾಂಕ :
28-11-2025
ಮನ್ನಾ ಏ ಖೇಳಿ ಗ್ರಾಮ ಪಂಚಾಯತ್ ಪಟ್ಟಣ ಪಂಚಾಯತ್ ಆಗಲು ಅನುಮೋದನೆ – ಗ್ರಾಮಸ್ಥರು ಹರ್ಷದಲ್ಲಿ ಮುಳುಗಿದರು
ಬೀದರ: ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರದ ಮನ್ನಾ ಏ ಖೇಳಿ ಗ್ರಾಮ ಪಂಚಾಯತ್ ಇಂದು ಸಚಿವೆ ಸಂಪುಟದ ಅನುಮೋದನೆ ಪಡೆದು ಪಟ್ಟಣ ಪಂಚಾಯತ್ ಆಗಿದ್ದು, ಈ ಸುದ್ದಿಯನ್ನು ತಿಳಿದ ತಕ್ಷಣ ಗ್ರಾಮಸ್ಥರು ಸಂತೋಷದಲ್ಲಿ ಮುಳುಗಿದರು. ಹಳೆಯ ಹಾಗೂ ಪ್ರಸ್ತುತ ಅಧ್ಯಕ್ಷರು, ಗ್ರಾಮದ ಪ್ರಮುಖ ಮುಖಂಡರು ಪಟಾಕಿ ಸಿಡಿಸಿ ಹರ್ಷವನ್ನು ವ್ಯಕ್ತಪಡಿಸಿದ್ದರು. ಗ್ರಾಮದ ಮಾಜಿ ಅಧ್ಯಕ್ಷ ರಾದ ಸಂತೋಷ ಹಳಿಖೇಡ್ ಈ ಸಂದರ್ಭದಲ್ಲಿ ಮಾತನಾಡಿ, “ಗ್ರಾಮ ಪಂಚಾಯತ್ ಅನ್ನು ಪಟ್ಟಣ ಪಂಚಾಯತ್ ಆಗಿಸಲು ಶ್ರಮವಹಿಸಿದ ಎಲ್ಲಾ ಅಧಿಕಾರಿಗಳು, ಗ್ರಾಮದ ಮುಖಂಡರು ಮತ್ತು ನಮ್ಮ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರಿಗೆ ನಾನು ಹಾಗೂ ಗ್ರಾಮದ ನಾಗರಿಕರು ಹೃದಯಪೂರ್ವಕ ಧನ್ಯವಾದ ಸಲ್ಲಿಸುತ್ತೇವೆ. ಮುಂದಿನ ಅಭಿವೃದ್ಧಿಗೆ ಶಾಸಕರು ಕೈಗೂಡಿಸುವಂತೆ ಮನವಿ ಮಾಡುತ್ತೇನೆ” ಎಂದು ಹೇಳಿದರು.
ಗ್ರಾಮ ಪಂಚಾಯತ್ ಗೆ ಪಟ್ಟಣ ಪಂಚಾಯತ್ ಸ್ಥಾನಮಾನ ದೊರಕಿದ ಮೂಲಕ ಗ್ರಾಮದ ಬಹುದಿನಗಳ ಕನಸು ನಿಜವಾಗಿದ್ದು, ಗ್ರಾಮೀಣ ಅಭಿವೃದ್ಧಿಗೆ ದೊಡ್ಡ ಹಂಗಾಮಿ ಸಾಧನೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
