ವರದಿಗಾರರು :
ಎಚ್ ಎಮ್ ಹವಾಲ್ದಾರ ||
ಸ್ಥಳ :
ಯಾದಗಿರಿ
ವರದಿ ದಿನಾಂಕ :
19-11-2025
ಹೊರಗುತ್ತಿಗೆ ಚಾಲಕರ ನಿರ್ಲಕ್ಷ್ಯದಿಂದ ಅಪಘಾತಗಳು ಹೆಚ್ಚಳ
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ (K.K.S.R.T.C) ಯಾದಗಿರಿ ವಿಭಾಗ–ಸುರಪುರ ಘಟಕದಲ್ಲಿ ಯಾವುದೇ ತರಬೇತಿ ಇಲ್ಲದೇ ಹೊರಗುತ್ತಿಗೆ ಆಧಾರದ ಮೇಲೆ ಬಸ್ ಚಾಲಕರನ್ನು ನೇಮಕ ಮಾಡುತ್ತಿರುವುದು ಜನರಲ್ಲಿ ಗಾಬರಿ ಮತ್ತು ಆತಂಕದ ವಾತಾವರಣವನ್ನು ಉಂಟುಮಾಡಿದೆ.
ಸಂಸ್ಥೆಯು 18.11.2025 ರಂದು ಹೊರಗುತ್ತಿಗೆ ಚಾಲಕರನ್ನು ನೇಮಕ ಮಾಡಿ ಬಸ್ ಓಡಿಸಲು ಆದೇಶ ನೀಡಿರುವುದಾಗಿ ಸಂಘಟನೆಗಳು ಆರೋಪಿಸಿವೆ. ನೇಮಕಗೊಂಡ ಚಾಲಕರಿಗೆ ಸರಿಯಾದ ಚಾಲನಾ ತರಬೇತಿ, ಸುರಕ್ಷತಾ ನಿಯಮಗಳ ಅರಿವು, ಸಾರ್ವಜನಿಕ ಸಾರಿಗೆ ಚಾಲನಾ ಅನುಭವ ಇಲ್ಲದ ಕಾರಣದಿಂದಾಗಿ ಅನೇಕ ಸಮಸ್ಯೆಗಳು ಎದುರಾಗುತ್ತಿವೆ.
ಸಮಾಜದ ಒತ್ತಡಕ್ಕೆ ಕಾರಣವಾಗಿರುವ ಉದಾಹರಣೆಯಾಗಿ, 15.11.2018 ರಂದು ಸುರಪುರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಹೊರಗುತ್ತಿಗೆ ಚಾಲಕನ ನಿರ್ಲಕ್ಷ್ಯದಿಂದ ಬಸ್ಸು 2 ವರ್ಷದ ಮಗುವಿನ ಮೇಲೆ ಹರಿದು ಮಗು ಸ್ಥಳದಲ್ಲೇ ಮೃತಪಟ್ಟ ಘಟನೆ ಮತ್ತೆ ನೆನಪಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಸಂಘಟನೆಗಳು ಆಗ್ರಹಿಸುತ್ತಿವೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
