ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
22-12-2025
ರಾಷ್ಟ್ರೀಯ ಗಣಿತ ದಿನ
ಶ್ರೇಷ್ಠ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನದ ನೆನಪಿಗಾಗಿ ಡಿಸೆಂಬರ್ 22 ರಂದು ರಾಷ್ಡ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತಿದೆ.
ಶ್ರೀನಿವಾಸ್ ರಾಮಾನುಜನ್ ಡಿಸೆಂಬರ್ 22 1887ರಂದು ಬಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು ಅವರ ಪೂರ್ಣ ಹೆಸರು ಶ್ರೀನಿವಾಸ್ ರಾಮಾನುಜನ್ ಅಯ್ಯಂಗಾರ್.
ಶ್ರೀನಿವಾಸ ರಾಮಾನುಜನ್ ಅವರು ಬಾಲ್ಯದಿಂದಲೇ ಗಣಿತ ವಿಷಯದ ಕುರಿತು ಅತೀವ ಆಸಕ್ತಿ ಹೊಂದಿದ್ದರು. ಗಣಿತ ಅವರ ಜೀವನದ ಅವಿಭಾಜ್ಯವೆಂಬಂತೆ ಅದರಲ್ಲಿ ತಲ್ಲಿನರಾಗಿದ್ದರು. ಗಣಿತ ಬಿಟ್ಟು ಬೇರೆ ವಿಷಯಗಳ ಬಗ್ಗೆ ಆಸಕ್ತಿ ಇರಲಿಲ್ಲ
ಎಪ್ ಎ ಪ್ರಥಮ ದರ್ಜೆ ವ್ಯಾಸಂಗದ ಸಮಯದಲ್ಲಿ ರಾಮಾನುಜನ್ ಅನುತ್ತೀರ್ಣರಾದರು. ಇದು ಅವರನ್ನು ಮಾನಸಿಕವಾಗಿ ಕುಗ್ಗಿಸಿಬಿಟ್ಟಿತು. ಅದಲ್ಲದೇ ಬಡತನದ ಬೇಗೆ ಅವರನ್ನ ಕಾಡುತ್ತಿತ್ತು. ಅವರಿಗೆ ಸಿಗುತ್ತಿದ್ದ ವಿದ್ಯಾರ್ಥಿವೇತನವೂ ಸ್ಥಗಿತವಾದವು. ಇದರಿಂದ ರಾಮಾನುಜನ್ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬೇಕಾಯಿತು.
ತದ ನಂತರ ಅವರು ಮದ್ರಾಸ್ ಪೋರ್ಟನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ರಾಮಾನುಜನ್ ಅವರ ಗಣಿತದ ಆಸಕ್ತಿ ,ಪ್ರತಿಭೆಯಿಂದ ನಿರಂತರವಾಗಿ ಗಣಿತದಲ್ಲಿ ತಮ್ಮನ್ನ ತೊಡಗಿಸಿಕೊಂಡರು. ಇಂಗ್ಲೆಂಡಿನ ರಾಯಲ್ ಸೊಸೈಟಿ , ರಾಮಾನುಜನ್ ಅವರ ಗಣಿತಶಾಸ್ತ್ರದಲ್ಲಿದ್ದ ಚತುರತೆ ಪ್ರತಿಭೆಯನ್ನ ಗುರುತಿಸಿ ಜೊತೆಗಾರರನ್ನಾಗಿ ಆಯ್ಕೆ ಮಾಡಿದ್ದರು. ಇದರಿಂದ ಅವರ ಆಸಕ್ತಿ ವಿಷಯವಾಗಿದ್ದ ಗಣಿತದ ಅಧ್ಯಯನಕ್ಜೆ ಹೊಸ ಆಯಾಮ ಸಿಕ್ಕಂತಾಯಿತು. ಮುಂದೆ ಶ್ರೀನಿವಾಸ್ ರಾಮಾನುಜನ್ ಗಣಿತಶಾಸ್ತ್ರಜ್ಞರೆನಿಸಿಕೊಂಡರು.
1921 ಎಪ್ರಿಲ್ 26 ರಂದು ಶ್ರೀನಿವಾಸ್ ರಾಮಾನುಜನ್ 34 ನೇ ವಯಸ್ಸಿನಲ್ಲಿ ಇಹಲೋಕ ತ್ಯೇಜಿಸಿದರು.
ಕೇವಲ 34 ವರ್ಷಗಳಲ್ಲಿ ಗಣಿತಲೋಕದಲ್ಲಿ ಅಪ್ರತಿಮ ಸಾಧನೆಗೈದರು. ಭಾರತದ ಇತಿಹಾಸದಲ್ಲಿ ಮಹಾನ್ ಗಣಿತಶಾಸ್ತ್ರಜ್ಞರೆನೆಸಿಕೊಂಡರು. ಭಾರತ ಸರ್ಕಾರ 2012 ರಲ್ಲಿ ಶ್ರೀನಿವಾಸ್ ರಾಮಾನುಜನ್ ಅವರ ಸ್ಮರಣಾರ್ಥ ಡಿಸೆಂಬರ್ 22 ರಂದು ರಾಷ್ಟ್ರೀಯ ಗಣಿತ ದಿನವನ್ನಾಗಿ ಘೋಷಿಸಿತು.
ಕಷ್ಟಕಾರ್ಪಣ್ಯಗಳನ್ನ ಮೆಟ್ಟಿ ತಮ್ಮ ಪ್ರತಿಭಾ ಕೌಶಲ್ಯದಿಂದ ಅಪ್ರತಿಮ ಸಾಧನೆ ಮಾಡಿದ ಶ್ರೀನಿವಾಸ್ ರಾಮಾನುಜನ್ ಸಾಧಕರ ಪಾಲಿಗೆ ಚೈತನ್ಯ ಚಿಲುಮೆಯ ಆದರ್ಶ ವ್ಯಕ್ತಿಯಾಗಿದ್ದಾರೆ.
