
ಲೈವ್ ಟಿವಿ ನ್ಯೂಸ್

ದಿನಾಂಕ : 10-07-2025
ತಾಳಿಕೋಟೆ: ಕಲಕೇರಿಯಲ್ಲಿ ಗ್ರಾಮೀಣ ಸಂತೆ ಮಾರುಕಟ್ಟೆಗೆ ಶಂಕುಸ್ಥಾಪನೆ - ಶಾಸಕ ಬೀಮನಗೌಡ(ರಾಜು ಗೌಡ) ಬ.ಪಾಟೀಲ ಭರವ
ವರದಿಗಾರರು : ಸಂಗನಗೌಡ ಎಚ್ ಗಬಸಾವಳಗಿ
ವರದಿ ಸ್ಥಳ :ಕಲಕೇರಿ
ಒಟ್ಟು ಓದುಗರ ಸಂಖ್ಯೆ : 115+
ಕಲಕೇರಿ: ಗ್ರಾಮದ ಅಭಿವೃದ್ಧಿಯೇ ನನ್ನ ಮುಖ್ಯ ಗುರಿ. ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಲಕೇರಿ ಗ್ರಾಮದ ಗ್ರಾಮೀಣ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಚಾಲನೆ ನೀಡಿದ್ದೇನೆ. ಇದು ಇತರ ಗ್ರಾಮಗಳಿಗೆ ಮಾದರಿಯಾಗಬೇಕು ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ಬೀಮನಗೌಡ (ರಾಜುಗೌಡ) ಬ.ಪಾಟೀಲ ಹೇಳಿದರು. ತಾಲ್ಲೂಕಿನ ಕಲಕೇರಿ ಗ್ರಾಮದ ಮುಖ್ಯ ಬಜಾರದಲ್ಲಿ 40 ಲಕ್ಷ ರೂಪಾಯಿ ವೆಚ್ಚದಲ್ಲಿ ಗ್ರಾಮೀಣ ಸಂತೆ ಮಾರುಕಟ್ಟೆ ಹಾಗೂ ವಾಣಿಜ್ಯ ಮಳಿಗೆಗಳ ನೂತನ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮದ ಅಭಿವೃದ್ಧಿಗೆ ತಮ್ಮ ಶಕ್ತಿಮೀರಿ ಸಹಕಾರ ನೀಡುವ ಭರವಸೆ ನೀಡಿದರು. ಡಿಸೆಂಬರ್ ವೇಳೆಗೆ ಗ್ರಾಮ ಪಂಚಾಯಿತಿ ಅವಧಿ ಮುಕ್ತಾಯವಾಗಲಿದ್ದು, ಆ ವೇಳೆಗೆ ಈ ಕಾಮಗಾರಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳುವುದಾಗಿ ಹೇಳಿದರು. ಈ ಹಿಂದೆ ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದವರಿಗೆ ಹೊಸ ಮಾರುಕಟ್ಟೆಯಲ್ಲಿ ಮೊದಲ ಆದ್ಯತೆ ನೀಡಬೇಕು. ಯಾರಿಗೂ ಅನ್ಯಾಯವಾಗದಂತೆ, ಸಾಮಾಜಿಕ ನ್ಯಾಯ ದೊರೆಯುವಂತೆ ಎಲ್ಲರೂ ಹೆಮ್ಮೆಪಡುವಂತೆ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಪ್ರಭುಗೌಡ ಲಿಂಗದಳ್ಳಿ (ಚಬನೂರ), ಕಲಕೇರಿ ಗುರುಮರುಳಾ ರಾಧ್ಯ ಸಂಸ್ಥಾನ ಹಿರೇಮಠದ ಸಿದ್ದರಾಮ ಶಿವಾಚಾರ್ಯರು, ಕಲಕೇರಿ ಪಂಚರಂಗ ಸಂಸ್ಥಾನ ಗದ್ದುಗೆ ಮಠದ ಮಡಿವಾಳೇಶ್ವರ ಶಿವಾಚಾರ್ಯರು, ಮೌಲಾನಾ ನಾಸೀರ ಉಮ್ಮಿ ಇನಾಮದಾರ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜ ಅಡ್ಡದ ಸಿರಸಗಿ, ತಾಲ್ಲೂಕು ಪಂಚಾಯಿತಿ ಇ.ಓ ನಿಂಗಪ್ಪ ಮಸಳಿ, ಗ್ರಾ.ಪಂ. ಪಿಡಿಓ ಬಿ.ಎಂ.ಸಾಗರ, ಹಾಗೂ ಗ್ರಾಮದ ಪ್ರಮುಖರಾದ ರಾಮರಾವ ದೇಶಮುಖ, ದಾವಲಸಾಬ ನಾಯೊಡಿ, ಜಹಾಂಗೀರಭಾಷಾ ಸಿರಸಗಿ, ಖಾದರಬಾಶಾ ಇನಾಮದಾರ, ವೀರೇಶ ನಾಡಗೌಡ, ಕಿರಣಕುಮಾರ ದೇಸಾಯಿ, ರಮೇಶ ಹೊಸಮನಿ, ಲಕ್ಕಪ್ಪ ಬಡಿಗೇರ, ಹಣಮಂತ ವಡ್ಡರ, ಪುಂಡಲೀಕ ಚವಾಣ, ಮಾಬುಪಟೇಲ ಮೋಪಗಾರ, ದೇವೀಂದ್ರ ಕಡಕೋಳ, ದೇವೀಂದ್ರ ಜಂಬಗಿ, ಮೇಗು ರಾಠೋಡ, ಮಲಕಾಜಪ್ಪ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















