
ಲೈವ್ ಟಿವಿ ನ್ಯೂಸ್

ದಿನಾಂಕ : 18-09-2025
ಭೂ ಗಣಿ ವಿಜ್ಞಾನ ಮತ್ತು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಜನ್ಮದಿನ
ವರದಿಗಾರರು : ದರ್ಶನ್ ಎಂ ಎನ್
ವರದಿ ಸ್ಥಳ :ದಾವಣಗೆರೆ
ಒಟ್ಟು ಓದುಗರ ಸಂಖ್ಯೆ : 11+
ನಮ್ಮೆಲ್ಲರ ನೆಚ್ಚಿನ ನಾಯಕರಾದ. ಭೂ ಗಣಿ ವಿಜ್ಞಾನ ಮತ್ತು ತೋಟಗಾರಿಕೆ ಸಚಿವರಾದ ಶ್ರೀಯುತ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಅದ್ದೂರಿ ಆಚರಣೆ ಮಾಡಲು ಸಿದ್ಧತೆ ನಡೆಸುತ್ತಿರುವುದು ಸಂತಸದ ಸಂಗತಿ. ಈ ಬಾರಿ ನಾವೆಲ್ಲರೂ ಸೇರಿ ಜನ್ಮದಿನವನ್ನು ಅರ್ಥಪೂರ್ಣವಾಗಿ ಹಾಗೂ ಮಾದರಿಯಾಗಿ ಆಚರಿಸೋಣ. ಅಕ್ಷರ ದಾಸೋಹದ ಮೂಲಕ ಸರ್ಕಾರಿ ಶಾಲೆಯ ಮಕ್ಕಳಿಗೆ ಹಾಗೂ ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕಗಳು ಮತ್ತು ಅಗತ್ಯ ಪರಿಕರಗಳನ್ನು ನೀಡೋಣ, ಅನ್ನ ದಾಸೋಹದ ಮೂಲಕ ಬಡವರಿಗೆ ಮತ್ತು ಮಕ್ಕಳಿಗೆ ಅನ್ನಸಂತರ್ಪಣೆ ಮಾಡೋಣ.
ಈ ಮೂಲಕ ಎಲ್ಲರ ಆಶೀರ್ವಾದ ನಮ್ಮ ಮಲ್ಲಣ್ಣ ಅವರಿಗೆ ದೊರೆಯಲಿ. ಎಲ್ಲರೂ ಸೇರಿ ಬಾಪೂಜಿ ಬ್ಯಾಂಕ್ ಸಮುದಾಯಭವನದಲ್ಲಿ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ. ಈ ಬಾರಿ ಕೇಕ್ ಕತ್ತರಿಸುವುದು ಅಥವಾ ಹೂಹಾರ,ಹೂಗುಚ್ಚದ ಬದಲಾಗಿ ಅದೇ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸುವ ಮೂಲಕ ನಿಜವಾದ ಮಾದರಿಯ ಆಚರಣೆ ಮಾಡೋಣ ಎಂದು ದಾವಣಗೆರೆ ಜಿಲ್ಲೆಯ ಲೋಕಸಭಾ ಸದಸ್ಯರಾದ ಡಾಕ್ಟರ್ ಪ್ರಭ ಮಲ್ಲಿಕಾರ್ಜುನ್ ರವರು ತಿಳಿಸಿದರು.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















