ಲೈವ್ ಟಿವಿ ನ್ಯೂಸ್

ದಿನಾಂಕ : 18-09-2025

ಶಿಕ್ಷಕ ವೃತ್ತಿ ಒಂದು ಹುದ್ದೆ ಅಲ್ಲ, ಅದು ಒಂದು ಜವಬ್ದಾರಿ ಸಚಿವ ಈಶ್ವರ ಖಂಡ್ರೆ

ವರದಿಗಾರರು : ಬಸವರಾಜ ಪೂಜಾರಿ
ವರದಿ ಸ್ಥಳ :ಬೀದರ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 22+

ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಮತ್ತು ಬೀದರ ಜಿಲ್ಲಾ ಅನುದಾನಿತ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಂಘ ಬೀದರ ಇವರ ಆಶ್ರಯದಲ್ಲಿ 64ನೇ ಶಿಕ್ಷಕರ ದಿನಾಚಾರಣೆ ಮತ್ತು ಜಿಲ್ಲಾ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಪೂಜ್ಯ ಶ್ರೀ ಮಹಾಲಿಂಗ ಪೂಜ್ಯರ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಉದ್ಘಾಟಿಸಿದರು. ಶಿಕ್ಷಕ ವೃತ್ತಿ ಅದು ಒಂದು ಹುದ್ದೆ ಅಲ್ಲ, ಅದು ಒಂದು ಜವಬ್ದಾರಿ, ನನಗೆ ತಂದೆ ತಾಯಿ ಜನ್ಮ ಕೊಟ್ಟಿದ್ದಾರೆ. ಆದರೆ ನಮ್ಮ ಜೀವನವನ್ನು ರೂಪಿಸಿಕೊಟ್ಟವರು ಶಿಕ್ಷಕರು ಎಂದು ಈ ಸಂಧರ್ಭದಲ್ಲಿ ಹೆಮ್ಮೆಯಿಂದ ಹೇಳುತ್ತೇನೆ. ರಾಧಾ ಕೃಷ್ಣರವರು ಶ್ರೇಷ್ಠ ಶಿಕ್ಷಕರು, ಶಿಕ್ಷಣ ತಜ್ಞರು, ಅನೇಕ ವಿಶ್ವವಿದ್ಯಾಲಯಗಳ ರೂವಾರಿಗಳು ಶಿಕ್ಷಣ ಪ್ರೇಮಿಗಳು ಪ್ರತಿಯೊಂದು ಶಿಕ್ಷಕರಿಗೆ ಮಾದರಿ ರಾಧಾಕೃಷ್ಣರವರು. ದೇಶದ ಪ್ರತಿಯೊಬ್ಬ ಪ್ರಜೆಯ ಯಶಸ್ಸಿನಲ್ಲಿ ಶಿಕ್ಷಕರ ಮಹತ್ವ ದೊಡ್ಡದಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಯಶಸ್ಸಿನ ಹಿಂದೆ ಶಿಕ್ಷಕರ ಅಡಿಪಾಯವಿರುತ್ತದೆ. ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ತಂದೆ ತಾಯಿ ಬಗ್ಗೆ ಕಾಳಜಿ ಇವೆಲ್ಲವನ್ನೂ ಕಲಿಸುವ ಜವಬ್ದಾರಿ ಶಿಕ್ಷಕರ ಮೇಲಿರುತ್ತದೆ ಅದನ್ನು ಶಿಕ್ಷಕರು ಅತೀ ಸೂಕ್ಷ್ಮವಾಗಿ ನಿಭಾಯಿಸಿಕೊಂಡು ಹೋಗಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು. ಜೆಡಿಎಸ್ ಹಿರಿಯ ಮುಖಂಡರಾದ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ ಶಿಕ್ಷಕರು ಬರೀ ಶಿಕ್ಷಕರಲ್ಲ ಅವರು ನಮ್ಮ ಬದುಕಿನ ವಾಸ್ತುಶಿಲ್ಪಿಗಳು, ಶಿಕ್ಷಕರಿಗೆ ನಾವು ಸದಾ ರೂಣಿಯಾಗಿರಬೇಕು ಎಂದರು. ಅಧಿಕಾರದಲ್ಲಿಲ್ಲದಿದ್ದರೂ ಶಿಕ್ಷಕರ ರೂಣ ತಿರಿಸುವ ಉದ್ದೇಶದಿಂದ ಬೆಂಗಳೂರಿನ ಪ್ರೀಡಂ ಪಾರ್ಕ್‍ನಲ್ಲಿ ನಡೆಯುತ್ತಿದ್ದ ಶಿಕ್ಷಕರ ಹೋರಾಟಕ್ಕೆ ಸಹಕರಿಸಿ ಮುಖ್ಯಮಂತ್ರಿಗಳೊಂದಿಗೆ ಭೇಟಿ 140 ಕೋಟಿ ಅನುದಾನ ಕೊಡಿಸಿ ಶಿಕ್ಷಕರಿಗೆ ಪರ್ಮೆಂಟ್ ಮಾಡುವಂತೆ ಮಾಡಿದ್ದೇನೆ ಎಂದರು. ಮಾಜಿ ಬಿಡಿಎ ಅಧ್ಯಕ್ಷರಾದ ಬಾಬು ವಾಲಿ ಮಾತನಾಡಿದರು. ಇದೇ ಸಂಧರ್ಭದಲ್ಲಿ ವಿಜಯಶ್ರೀ ಆಸ್ಪತ್ರೆಯ ಡಾ. ಸಚಿನ ಪಾಟೀಲ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರಿಂದ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಇದೇ ಸಂಧರ್ಭದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ 25 ಮುಖ್ಯಗುರುಗಳಿಗೆ, 30 ಸಹ ಶಿಕ್ಷಕರಿಗೆ, ಪ್ರಾಥಮಿಕ ಶಿಕ್ಷಣದ 30 ಮುಖ್ಯಗುರುಗಳಿಗೆ ಮತ್ತು 70 ಪ್ರಾಥಮಿಕ ಸಹ ಶಿಕ್ಷಕರಿಗೆ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ ಮಾಡಲಾಯಿತು. ವಿಜಯಶ್ರೀ ಆಸ್ಪತ್ರೆಯ ಡಾ. ಸಚಿನ ಪಾಟೀಲ ನೆನಪಿನ ಕಾಣಿಕೆ ನೀಡಿದರು. ಜಿಲ್ಲಾ ಅನುದಾನಿತ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾಧ್ಯಕ್ಷರಾದ ವಿಜಯಕುಮಾರ ಪಾಟೀಲ ಯರನಳ್ಳಿ ಅವರು ಅಧ್ಯಕ್ಷಿಯ ಭಾಷಣ ನಡೆಸಿಕೊಟ್ಟರು. ಸ್ವಾಗತವನ್ನು ಶ್ರೀನಿವಾಸ್ ಬರೂರಕರ್, ಸಂಗೀತ ಕಾರ್ಯಕ್ರಮವನ್ನು ಶಿವಕುಮಾರ ಪಾಂಚಾಳ, ನಿರೂಪಣೆಯನ್ನು ನವಲಿಂಗ ಪಾಟೀಲ ನಡೆಸಿಕೊಟ್ಟರು. ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಮಹಮದ್ ಗೌಸ್, ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷರಾದ ಅಮೃತರಾವ ಚಿಮಕೋಡೆ, ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಸೋಮಶೇಖರ ಬಿರಾದರ, ಉದ್ಯಮಿ ಜಯರಾಜ ಖಂಡ್ರೆ, ಪ್ರಮುಖರಾದ ಸಂಗಶೆಟ್ಟಿ ಹಲಬರ್ಗಾ, ಚಂದ್ರಕಾಂತ ಹೆಬ್ಬಾಳೆ, ರಮೇಶ ಬಿರಾದರ ಚಿಟ್ಟಾ, ಸಂತೋಷ ಪಾಟೀಲ, ಶಿವಯೋಗಿ ಎಸ್ ಬಾಳಿ, ಡಾ. ಸಚಿನ ಪಾಟೀಲ, ಚಂದ್ರಕಾಂತ ಪಾಟೀಲ ಚಿಮಕೋಡ, ವಿಜಯಕುಮಾರ ಎಸ್, ಧನರಾಜ ಹಂಗರಗಿ, ಶಾಂತಾಬಾಯಿ ಎಸ್ ಬಿರಾದರ, ಸುಧೀರ ರಾಗಾ, ತಾನಾಜಿ ಕಾರಬಾರಿ, ಸಿದ್ರಾಮ ನಿಜಾಂಪುರೆ, ರಾಮದಾಸ್ ಜಾಧವ್, ಮುಕ್ತರಮಿಯ ಪವನ ಜೋಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand