
ಲೈವ್ ಟಿವಿ ನ್ಯೂಸ್

ದಿನಾಂಕ : 17-09-2025
ಕೆಎಎಸ್ ಅಧಿಕಾರಿಯಿಂದ ರಾಜ್ಯ ಮಹಿಳಾ ಆಯೋಗಕ್ಕೆ ದೂರು..
ವರದಿಗಾರರು : ಡಾ. ಜ್ಯೋತಿ
ವರದಿ ಸ್ಥಳ :ತುಮಕೂರು
ಒಟ್ಟು ಓದುಗರ ಸಂಖ್ಯೆ : 17+
ಮಹಿಳಾ ಆಯೋಗಕ್ಕೆ ಪತ್ರ ಬರೆದಿರಯವ ಎಚ್ ಪುಷ್ಪಲತಾ ಈ ಹಿಂದೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ಕೆಎಎಸ್ ಅಧಿಕಾರಿ ಎಚ್.ಪುಷ್ಪಲತಾ..
.ಪ್ರಸ್ತುತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ, ಕೆಲಸಕ್ಕೆ ಅಡಚಣೆ ಉಂಟು ಮಾಡುತ್ತಿದ್ದಾರೆ’ ಎಂದು ದೂರು.. ಮಾನಸಿಕ ಹಿಂಸೆ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ.. ಕೆಎಎಸ್ ಅಧಿಕಾರಿ ಎಚ್.ಪುಷ್ಪಲತಾ ರಿಂದ ಮಹಿಳಾ ಆಯೋಗಕ್ಕೆ ದೂರು.. ಐಸಿಡಿಎಸ್ ಜಂಟಿ ನಿರ್ದೇಶಕ ಬಿ.ಎಚ್.ನಿಶ್ಚಲ್ ಹಾಗೂ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಮಹೇಶ್ ಬಾಬು ವಿರುದ್ದ ದೂರು.. ಪತ್ರದಲ್ಲಿ ಏನಿದೆ..?
ನಾನು ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದಾಗ ಹಿಂದಿನ ವರ್ಷಗಳಲ್ಲಿ ಬ್ಯಾಂಕ್ಗಳಲ್ಲಿ ಜಮೆಯಾಗಿದ್ದ ಮೊತ್ತ, ಬಡ್ಡಿ, ನಿಶ್ಚಿತ ಠೇವಣಿಯ ಹಣವನ್ನು ಆರ್ಥಿಕ ಇಲಾಖೆ ನಿರ್ದೇಶನದಂತೆ ಸರ್ಕಾರಕ್ಕೆ ನಿಯಮಾನುಸಾರ ಮರುಪಾವತಿ ಮಾಡಿದ್ದೇನೆ.. ಕಚೇರಿ ಸ್ಥಳಾಂತರದ ಬಗ್ಗೆ ಪತ್ರ ವ್ಯವಹಾರ ನಡೆಸಿ ಅನುಮತಿ ಪಡೆದಿದ್ದೇನೆ.. ಆದರೂ ನಿಶ್ಚಲ್ ಮತ್ತು ಮಹೇಶ್ ಬಾಬು ಅವರು ಏಕ ಕಡತದ ಮೂಲಕ ನನ್ನನ್ನು ಅಮಾನತು ಮಾಡಲು ಶಿಫಾರಸು ಮಾಡಿದ್ದಾರೆ..
ನನ್ನನ್ನು ಅಮಾನತು ಮಾಡಲು ಶಿಫಾರಸು ಮಾಡುವ ಮುನ್ನ ಸರ್ಕಾರ ಅಥವಾ ಮೇಲಧಿಕಾರಿಗಳಿಂದಾಗಲೀ ಯಾವುದೇ ಅನುಮತಿ ಪಡೆದಿಲ್ಲ.. ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ಮನಸೋ ಇಚ್ಛೆ ಕ್ರಮ ಕೈಗೊಂಡು ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದಾರೆ..
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















