
ಲೈವ್ ಟಿವಿ ನ್ಯೂಸ್

ದಿನಾಂಕ : 20-08-2025
ಸೆಲ್‌ನಲ್ಲೇ ವಾಕಿಂಗ್, ತೆಳುವಾದ ಬೆಡ್ ಮೇಲೆ ಸ್ಲೀಪಿಂಗ್ – ರಾಜಾತಿಥ್ಯ ಇಲ್ದೇ `ಡಿ’ ಗ್ಯಾಂಗ್ ಫುಲ್ ಸೈಲೆಂಟ್
ವರದಿಗಾರರು : MEENAKSHI RATOD
ವರದಿ ಸ್ಥಳ :BENGALORE
ಒಟ್ಟು ಓದುಗರ ಸಂಖ್ಯೆ : 44+
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಮತ್ತೆ ಜೈಲುಪಾಲಾಗಿರುವ ನಟ ದರ್ಶನ್ ಮತ್ತು ಗ್ಯಾಂಗ್ ಇದೀಗ ಫುಲ್ ಸೈಲೆಂಟ್ ಆಗಿದೆ.
ಹೌದು, ಸುಪ್ರೀಂ ಆದೇಶದ ಬೆನ್ನಲ್ಲೇ ಕಟ್ಟೆಚ್ಚರ ವಹಿಸಲಾಗಿದ್ದು, ದರ್ಶನ್ ಹಾಗೂ ಗ್ಯಾಂಗ್‌ಗೆ ಯಾವುದೇ ವಿಶೇಷ ಸವಲತ್ತುಗಳು ಸಿಗುತ್ತಿಲ್ಲ. ಕಳೆದ ಬಾರಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದ ವೇಳೆ ನಟ ದರ್ಶನ್ ನಟೋರಿಯಸ್ ವಿಚಾರಣಾಧೀನ ಕೈದಿಗಳ ಜೊತೆಗೆ ಬಿಂದಾಸ್ ಆಗಿ ಕಾಲ ಕಳೆದಿದ್ದರು. ಅದರ ಫೋಟೋ ಕೂಡ ವೈರಲ್ ಆಗಿತ್ತು. ಅದಾದ ಬಳಿಕ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ, ಉಳಿದವರನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಿ ಕಠಿಣ ಕ್ರಮ ಕೈಗೊಂಡಿದ್ದರು.
ಈ ಬಾರಿ ಆ ರೀತಿಯ ಯಾವುದೇ ರೀತಿಯ ಸವಲತ್ತುಗಳು ಸಿಗದಂತೆ ಎಚ್ಚರಿಕೆ ವಹಿಸಿದ್ದಾರೆ. ದರ್ಶನ್ ಇರುವ ಸೆಲ್ ಮುಂದೆ ಕಾರಿಡಾರ್ ಇದ್ದು, ಅಲ್ಲಿ ವಾಕಿಂಗ್ ಮಾಡೋಕೆ ಅವಕಾಶವಿದೆ. ಆದರೂ ಕೂಡ ದರ್ಶನ್ ಮಾತ್ರ ಸೆಲ್‌ನಲ್ಲೇ ವಾಕ್ ಮಾಡುತ್ತಿದ್ದಾರೆ. ಸಿಬ್ಬಂದಿ ನೀಡಿರುವ ತೆಳುವಾದ ಬೆಡ್ ಮೇಲೆಯೇ ನಿದ್ದೆ ಮಾಡುತ್ತಿದ್ದಾರೆ. ಸಹಚರರೊಂದಿಗೆ ಮಾತನಾಡದೇ ದಿನಪತ್ರಿಕೆ, ಓದುತ್ತಾ ಕಾಲಕಳೆಯುತ್ತಿದ್ದಾರೆ ಎಂದು ಜೈಲು ಮೂಲಗಳಿಂದ ತಿಳಿದು ಬಂದಿದೆ.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















