ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
ಬೀದರ
ವರದಿ ದಿನಾಂಕ :
22-12-2025
ಹೆಣ್ಣುಮಕ್ಕಳು ಸ್ವಾವಲಂಬಿಯಾಗಲು ಪ್ರಯತ್ನಿಸಬೇಕು ಡಾ. ವಿಶಾಲಾಕ್ಷಿ ವಿ. ಕರಡ್ಡಿ
ನಗರದ ಅಮಲಾಪುರ ರಸ್ತೆಯಲ್ಲಿ ಇರುವ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಸ್ವಸಹಾಯ ಸಂಘದ ದಶಮಾನೋತ್ಸವ ಹಾಗೂ ಜಿಲ್ಲಾ ರೆಡ್ಡಿ ಮಹಿಳಾ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದ ಡಾ. ವಿಶಾಲಾಕ್ಷಿ ವಿ.ಕರಡ್ಡಿ ಮಾತನಾಡಿ ಹೆಣ್ಣುಮಕ್ಕಳು ಸ್ವಾವಲಂಬಿಯಾಗಲು ಪ್ರಯತ್ನಿಸಬೇಕು ಕಿವಿಮಾತು ಹೇಳಿದರು.
ಹೆಣ್ಣುಮಕ್ಕಳು ಸಂಘಟಿತರಾಗಬೇಕು. ಪರಸ್ಪರರ ಬೆಳವಣಿಗೆಗೆ ಸಹಕರಿಸಬೇಕು ಎಂದು ತಿಳಿಸಿದರು.ಉದ್ಘಾಟನೆ ನೆರವೇರಿಸಿದ ನಿವೃತ್ತ ಪ್ರಾಚಾರ್ಯ ಶಿವಶರಣಪ್ಪ ಹುಗ್ಗಿ ಪಾಟೀಲ ಅವರು ಹೇಮರೆಡ್ಡಿ ಮಲ್ಲಮ್ಮ ಅವರ ಜೀವನ ಮತ್ತು ಸಾಧನೆ ಮೇಲೆ ಬೆಳಕು ಚೆಲ್ಲಿದರು
.ಡಾ. ಜ್ಯೋತಿ ರೆಡ್ಡಿ, ಡಾ. ಮಲ್ಲಪ್ಪ ಬೋತಗಿ, ಜಿಲ್ಲಾ ರೆಡ್ಡಿ ಸಮಾಜದ ಅಧ್ಯಕ್ಷ ಶಂಕರ ರೆಡ್ಡಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ರೆಡ್ಡಿ ಬ್ಯಾಂಕ್ ಅಧ್ಯಕ್ಷ ಸಂಗ್ರಾಮ ರೆಡ್ಡಿ ಹುಣಸಗೇರಿ, ಡಾ. ಆನಂದ ರೆಡ್ಡಿ ಮಾತನಾಡಿದರು
ನಗರಸಭೆ ಸದಸ್ಯ ರಾಜು ಚಿಂತಾಮಣಿ, ರೆಡ್ಡಿ ಸಮಾಜದ ಭೀಮ ರೆಡ್ಡಿ ಸಿಂಧನಕೇರಾ, ಪ್ರಶಾಂತ ಜವಳೆ, ರಾಜ ರೆಡ್ಡಿ, ಅಪ್ಪಾ ರೆಡ್ಡಿ, ರಾಮ ರೆಡ್ಡಿ, ಶರಣಪ್ಪ ತಿರ್ಲಾಪುರ ಹಾಗೂ ರೆಡ್ಡಿ ಸಮಾಜದ ಸಾಧಕರ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಸಂಘದ ಅಧ್ಯಕ್ಷೆ ಸಂಗೀತಾ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಶಿಲ್ಪಾ ರೆಡ್ಡಿ ಬೋಗಲೆ ಸ್ವಾಗತಿಸಿದರು. ಉಮಾ ರೆಡ್ಡಿ, ಅನುರಾಧಾ ರೆಡ್ಡಿ ನಿರೂಪಿಸಿದರು. ಸಂಘದ ಉಪಾಧ್ಯಕ್ಷೆ ಬಬಿತಾ ರೆಡ್ಡಿ ಉಪಸ್ಥಿತರಿದ್ದರು.
