ವರದಿಗಾರರು :
ನಾ.ಅಶ್ವಥ್ ಕುಮಾರ್, ||
ಸ್ಥಳ :
ಚಾಮರಾಜನರ
ವರದಿ ದಿನಾಂಕ :
22-12-2025
ಮುಕ್ತಿ ಕಾಲೋನಿಯ ಬಾಳೆ ತೋಟದಲ್ಲಿ ನಿತ್ರಾಣವಾಗಿದ್ದ ಹುಲಿ ಸೆರೆ
ಬಾಳೆ ತೋಟದಲ್ಲಿ ನಿತ್ರಾಣಗೊಂಡಿದ್ದ ಹುಲಿಯನ್ನು ಅರೆವಳಿಕೆ ಚುಚ್ಚುಮದ್ದು ಸಿಡಿಸಿ ಸೆರೆಹಿಡಿದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬರಗಿ ಸಮೀಪದ ಮುಕ್ತಿ ಕಾಲೋನಿ ಬಳಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟಿçÃಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊAಡಿರುವ ಗುಂಡ್ಲುಪೇಟೆ ತಾಲ್ಲೂಕಿನ ಹೊಂಗಳ್ಳಿ ಗಸ್ತಿನ ಮುಕ್ತಿ ಕಾಲೋನಿಯ ಬಾಳೆತೋಟದಲ್ಲಿ ಆರೋಗ್ಯ ಸಮಸ್ಯೆಯೊಂದ ನಿತ್ರಾಣಗೊಂಡು ಹುಲಿ ಕಾಣಿಸಿಕೊಂಡಿದ್ದು, ಇದರಿಂದ ರೈತರು ಮತ್ತು ಸಾರ್ವಜನಿಕರು ಆತಂಕಗೊAಡು, ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳ ತಂಡವು, ನಿತ್ರಾಣಗೊಂಡಿರುವ ಹುಲಿಯನ್ನು ಎಚ್ಚರಿಕೆಯಿಂದಲೇ ಅರೆವಳಿಕೆ ಚುಚ್ಚುಮದ್ದು ಸಿಡಿಸಿ, ನಂತರ ಬಲೆ ಹಾಕಿ ಸೆರೆಹಿಡಿಯಲಾಯಿತು. ಸೆರೆ ಹಿಡಿದಿರುವ ಹುಲಿ ಸುಮಾರು 6 ವರ್ಷದ ಗುಂಡು ಹುಲಿಯಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಎನ್. ಪ್ರಭಾಕರನ್ ನೇತೃತ್ವದಲ್ಲಿ, ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸುರೇಶ್, ವಲಯ ಅರಣ್ಯಾಧಿಕಾರಿ ಪುನೀತ್, ಪಶುವೈದ್ಯಾಧಿಕಾರಿಗಳಾಧ ಡಾ. ವಾಸಿಂ ಮಿರ್ಜಾ, ಮದ್ದೂರು ಹಾಗೂ ಓಂಕಾರ ವಲಯದ ಅರಣ್ಯ ಸಿಬ್ಬಂದಿಗಳು ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಸಹಕಾರದಿಂದ ಹುಲಿಯನ್ನು ಸೆರೆ ಹಿಡಿಯುವ ಕಾರ್ಯಚರಣೆ ಯಶಸ್ವಿಯಾಗಿದೆ. ಸೆರೆಯಾಗಿರುವ ಹುಲಿ ಸುರಕ್ಷಿತವಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
