ವರದಿಗಾರರು :
ಚೇತನ್ ರಾಜ್ ಟಿ ಎಸ್ ||
ಸ್ಥಳ :
ಹುಣಸೂರ್
ವರದಿ ದಿನಾಂಕ :
25-12-2025
ಹಿಟ್ ಅಂಡ್ ರನ್ ಅಪಘಾತದಲ್ಲಿ ಮರಣ ಹೊಂದಿದ ರಾಜನಾಯಕನ ಕುಟುಂಬಕ್ಕೆ ಸರ್ಕಾರದ ವತಿಯಿಂದ 2 ಲಕ್ಷ ಪರಿಹಾರ
ಹಿಟ್ ಅಂಡ್ ರನ್ ಅಪಘಾತದಲ್ಲಿ ಮರಣ ಹೊಂದಿದ ರಾಜನಾಯಕನ ಕುಟುಂಬಕ್ಕೆ ಸರ್ಕಾರದ ವತಿಯಿಂದ 2 ಲಕ್ಷ ಪರಿಹಾರ ವನ್ನು ಪೊಲೀಸ್ ಇನ್ಸ್ಪೆಕ್ಟರ್ ಮುನಿಯಪ್ಪ ಕಂದಾಯ ಇಲಾಖೆ ಗ್ರಾಮ ಆಡಳಿತ ಅಧಿಕಾರಿ ಶ್ರೀವತ್ಸ್ ವಿತರಣೆ.ಮಾಡಿದರು
ಹಿಟ್ ಅಂಡ್ ರನ್ ಅಪಘಾತದಲ್ಲಿ ಮರಣ ಹೊಂದಿದ ಹುಣಸೂರು ತಾಲ್ಲೂಕು ಕಟ್ಟೆಮಳಲವಾಡಿ ಗ್ರಾಮದ ನಾಯಕ ಸಮಾಜದ ರಾಜನಾಯಕನ ಕುಟುಂಬಕ್ಕೆ ದಿನಾಂಕ : 24-12-2025 ರ ಬುಧವಾರ ಸರ್ಕಾರದ ವತಿಯಿಂದ 2 ಲಕ್ಷ ಪರಿಹಾರವನ್ನು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಇನ್ಸ್ಪೆಕ್ಟರ್ ರವರಾದ ಮುನಿಯಪ್ಪ ರವರು ರಾಜನಾಯಕನ ಹೆಂಡತಿ ಮಂಜುಳಾ ರವರಿಗೆ ವಿತರಣೆ ಮಾಡಿದರು.
ನಂತರ ಮಾತನಾಡಿ ಕಟ್ಟೆಮಳಲವಾಡಿ ಗ್ರಾಮದ ರಾಜನಾಯಕ ಒಂದು ವರ್ಷದ ಹಿಂದೆ ಕೂಲಿ ಕೆಲಸ ಮಾಡಿಕೊಂಡು ಗ್ರಾಮದ ಟೊಬ್ಯಾಕೋ ಬೋರ್ಡ್ ಹತ್ತಿರ ನಡೆದುಕೊಂಡು ಬರುತ್ತಿರುವಾಗ ಯಾವುದೋ ಅಪರಿಚಿತ ಕಾರು ವಾಹನ ವೇಗವಾಗಿ ಬಂದು ರಾಜನಾಯಕನಿಗೆ ಹಿಟ್ ಅಂಡ್ ರನ್ ಅಪಘಾತ ಮಾಡಿ ಪರಾರಿಯಾಗಿತ್ತು.
ಈ ಅಪಘಾತದಿಂದ ರಾಜನಾಯಕನು ಸ್ಥಳದಲ್ಲೇ ಮರಣ ಹೊಂದಿದನು. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿ ಅಪಘಾತ ಮಾಡಿದ ಕಾರು ವಾಹನವನ್ನು ಕಳೆದ 1 ವರ್ಷದಿಂದಲೂ ಪತ್ತೆ ಕಾರ್ಯ ನಡೆದಿತ್ತು. ಆದರೆ ಅಪಘಾತ ಮಾಡಿದ ಕಾರು ವಾಹನ ಪತ್ತೆಯಾಗದೆ ಇರುವುದರಿಂದ ನ್ಯಾಯಾಲಯಕ್ಕೆ ಪೊಲೀಸ್ ಇಲಾಖೆ ವತಿಯಿಂದ ʼಸಿʼ ರಿಪೋರ್ಟ್ ಸಲ್ಲಿಸಲಾಗಿತ್ತು.
ಇತ್ತ ಅಪಘಾತದಲ್ಲಿ ದುಡಿಯುವ ಗಂಡನನ್ನು ಕಳೆದುಕೊಂಡ ರಾಜನಾಯಕನ ಹೆಂಡತಿ ಮಂಜುಳ ಯಾವುದೇ ಪರಿಹಾರವೂ ಸಿಗದೆ ಜೀವನ ಸಾಗಿಸುವುದು ಕಷ್ಟಕರವಾಗಿದೆ ಎಂದು ದಸಂಸ ದ ಮುಖಂಡರಾದ ನಿಂಗರಾಜ್ ಮಲ್ಲಾಡಿ ರವರು ಪೊಲೀಸ್ ಇಲಾಖೆಯು ನಡೆಸುವ ದಲಿತರ ಕುಂದು ಕೊರತೆ ಸಭೆಯಲ್ಲಿ ಮಾನ್ಯ ಶಾಸಕರಾದ ಜಿ.ಡಿ ಹರೀಶ್ ಗೌಡರವರ ಸಮ್ಮುಖದಲ್ಲಿ ಈ ನೊಂದ ಕುಟುಂಬಕ್ಕೆ ಸರ್ಕಾರದ ವತಿಯಿಂದ ಪರಿಹಾರ ಕಲ್ಪಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಶಾಸಕರ ಸೂಚನೆಯ ಮೇರೆಗೆ ಪೊಲೀಸ್ ಇಲಾಖೆಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸರ್ಕಾರದ ವತಿಯಿಂದ 2 ಲಕ್ಷ ರೂಪಾಯಿಗಳ ಪರಿಹಾರವನ್ನು ಮಂಜೂರು ಮಾಡಿಸಿ ರಾಜನಾಯಕನ ಪತ್ನಿ ಮಂಜುಳಾ ರವರಿಗೆ ವಿತರಿಸಲಾಗಿದೆ. ಈ ಹಣವನ್ನು ಇವರ ಜೀವನ ನಿರ್ವಹಣೆಗೆ ಉಪಯೋಗಿಸಿಕೊಳ್ಳುವಂತೆ ತಿಳಿಸಲಾಯಿತು
