ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
ಬೀದರ
ವರದಿ ದಿನಾಂಕ :
24-12-2025
ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಶಾಶ್ವತ ಯೌಗಿಕ ಹಾಗೂ ನೈಸರ್ಗಿಕ ಕೃಷಿ ಕುರಿತು ಕಾರ್ಯಗಾರ
ರಾಷ್ಟ್ರೀಯ ರೈತ ದಿನಾಚರಣೆಯ ಅಂಗವಾಗಿ ಬ್ರಹ್ಮಕುಮಾರೀಸ್ ರಾಮಪುರ ಕಾಲೋನಿ, ಬೀದರ್ ವತಿಯಿಂದ ಕೃಷಿ ಇಲಾಖೆ ಹಾಗೂ ಕೃಷಿಕ್ ಸಮಾಜ ಬೀದರ್ ಅವರ ಸಹಯೋಗದಲ್ಲಿ ಜಿಲ್ಲೆಯ ಉನ್ನತ ರೈತರಿಗೆ “ಶಾಶ್ವತ ಯೌಗಿಕ ಕೃಷಿ ಹಾಗೂ ನೈಸರ್ಗಿಕ ಕೃಷಿ” ವಿಷಯದ ಕುರಿತು ವಿಶೇಷ ಸತ್ರವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಪೂರ್ವಭಾವಿಯಾಗಿ ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ನಗರದ ಪ್ರಮುಖ ಮಾರ್ಗಗಳಲ್ಲಿ ರೈತ ಜನಜಾಗೃತಿ ಮೋಟಾರ್ ಸೈಕಲ್ ರ‍್ಯಾಲಿ ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು.ನಗರದ ಸಪ್ನಾ ಕನ್ವೆನ್ಶನ್ ಹಾಲ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೀದರ್ ಜಿಲ್ಲೆಯ ಏಳು ಮಂದಿ ಉನ್ನತ ರೈತರಿಗೆ ಬ್ರಹ್ಮಕುಮಾರೀಸ್ ಹಾಗೂ ಕೃಷಿ ಇಲಾಖೆಯ ವತಿಯಿಂದ ಗೌರವ ಸನ್ಮಾನ ನೀಡಲಾಯಿತು.
ರಾಜಸ್ಥಾನದ ಮೌಂಟ್ ಆಬುದ ಕೃಷಿ ಮತ್ತು ಗ್ರಾಮಾಭಿವೃದ್ಧಿ ವಿಭಾಗದ ಮುಖ್ಯಾಲಯದ ಸಂಯೋಜಕರಾದ ರಾಜಯೋಗಿ ಬಿ.ಕೆ. ಸುಮನ್ತ್ ಭಾಯಿ ಅವರು ಸಸಿಗಳಿಗೆ ಜಲಾರ್ಪಣೆ ಹಾಗೂ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಿಜವಾದ ರೈತನು ಭೂಮಾತೆಯ ಪೋಷಣೆ ಮಾಡಬೇಕು, ಶೋಷಣೆ ಅಲ್ಲ. ಹೆಚ್ಚು ಉತ್ಪಾದನೆಯ ಆಸೆಯಿಂದ ನಾವು ಪಾರಂಪರಿಕ ಋಷಿ ಕೃಷಿಯನ್ನು ಮರೆತಿದ್ದೇವೆ. ಅಗತ್ಯವಿಲ್ಲದ ರಾಸಾಯನಿಕ ಔಷಧಿಗಳನ್ನು ಭೂಮಿಗೆ ಬಳಸಿರುವುದರಿಂದ ಇಂದು ಮೃದುವಾಗಿದ್ದ ಭೂಮಿ ಕಲ್ಲಿನಂತೆ ಬಂಜರಾಗುತ್ತಿದೆ. ಇಂದಿನ ಅವಶ್ಯಕತೆ ಶಾಶ್ವತ ಯೌಗಿಕ ಹಾಗೂ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವುದಾಗಿದೆ ಎಂದು ತಿಳಿಸಿದರು.ರಾಜಯೋಗಿನಿ ಸುಮಂಗಲಾ ದೀದಿ ಅವರು ಮಾತನಾಡಿ ಕೃಷಿ ಒಂದು ಪವಿತ್ರ ವೃತ್ತಿ. ರೈತರು ಆಹಾರ ಉತ್ಪಾದಿಸದಿದ್ದರೆ ವಿಶ್ವವೇ ಹಸಿದಾಗುತ್ತದೆ. ಆದ್ದರಿಂದ ರೈತರು ಭಾರತದ ಹೆಮ್ಮೆ ಎಂದು ಹೇಳಿದರು
ರಾಜಯೋಗಿನಿ ಸುಮಂಗಲಾ ದೀದಿ (ನಿರ್ದೇಶಕಿ, ರಾಜಋಷಿವನ, ಬೀದರ್), ರಾಜಯೋಗಿ ಸುನಂದಾ ದೀದಿ, ಶ್ರೀಮತಿ ಶಿಲ್ಪಾ ಶರ್ಮಾ ಐಎಎಸ್ (ಜಿಲ್ಲಾಧಿಕಾರಿ, ಬೀದರ್), ಆಶಿಷ್ ರೆಡ್ಡಿ ಐಎಫ್‌ಎಸ್ (ಡಿಎಫ್‌ಓ), ಸಿಸ್ಟರ್ ದೇವಿಕಾ ಆರ್ (ಜೆಡಿಎ), ಬಿ.ಜಿ. ಶೆಟ್ಕಾರ್, ಭ್ರಾತಾ ಸಿದ್ರಾಮಯ್ಯ ಸ್ವಾಮಿ, ಮಾಧವರಾವ್ ಮಿಸಾಳೆ, ಗಂಗಾರಾಮ ಸೌದಾಗರ್, ಶಿವರಾಜ್ ಪಾಟೀಲ್, ಶ್ರೀಮತಿ ಆರತಿ ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.ವಂದೇ ಮಾತರಂ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರು ನೃತ್ಯ ನಾಟಕದ ಮೂಲಕ “ಧರತಿ ಉಳಿಸೋಣ” ಎಂಬ ದಿವ್ಯ ಸಂದೇಶ ನೀಡಿದರು
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಹಾಗೂ ಕೃಷಿಕ್ ಸಮಾಜದ ಪ್ರತಿನಿಧಿಗಳು ರೈತರಿಗೆ ಮಾರ್ಗದರ್ಶನ ನೀಡಿದರು. ಸುಮಾರು 500ಕ್ಕೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೊನೆಯಲ್ಲಿ ಎಲ್ಲರಿಗೂ ಬ್ರಹ್ಮ ಭೋಜನದ ವ್ಯವಸ್ಥೆ ಮಾಡಲಾಗಿತ್ತು..
