ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
23-12-2025
ರಾಷ್ಟ್ರೀಯ ರೈತರ ದಿನ
ದೇಶದಾದ್ಯಂತ ಇಂದು ಡಿಸೆಂಬರ್ 23 ರಾಷ್ಟ್ರೀಯ ರೈತರ ದಿನವನ್ನಾಗಿ ಆಚರಿಸಲಾಗುತ್ತಿದೆ.
ಭಾರತದ ಐದನೇ ಪ್ರಧಾನ ಮಂತ್ರಿಯಾಗಿದ್ದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಸ್ಮರಣಾರ್ಥ ಭಾರತ ಸರ್ಕಾರ ಪ್ರತಿವರ್ಷ ಡಿಸೆಂಬರ್ 23 ರಂದು ರಾಷ್ಟ್ರೀಯ ರೈತರ ದಿನವೆಂದು ಘೋಷಿಸಿತು.
ಚೌಧರಿ ಚರಣ್ ಸಿಂಗ್ 1902 ಡಿಸೆಂಬರ್ 23 ರಂದು ಜನಿಸಿದರು.
ಚೌಧರಿ ಚರಣ್ ಸಿಂಗ್ ಪ್ರಧಾನಿ ಮಾತ್ರವಲ್ಲದೇ ರೈತ ನಾಯಕರೂ ಆಗಿದ್ದರು. ಅವರು 1979 ರಿಂದ 1980 ರ ಅವಧಿಯಲ್ಲಿ ಭಾರತದ ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸಿದ್ದರು.
ರೈತ ಪರ ಹೋರಾಟ ರೈತರ ಹಿತಕ್ಕಾಗಿ ಚೌಧರಿ ಚರಣ್ ಸಿಂಗ್ ತಮ್ಮ ಜೀವನವನ್ನೆ ಮುಡುಪಾಗಿಟ್ಟಿದ್ದರು. ಇದರಿಂದ ಅವರನ್ನ ರೈತ ಚಾಂಪಿಯನ್ ಎಂದು ಕರೆಯಲಾಗುತ್ತಿತ್ತು.
