ವರದಿಗಾರರು :
ಗಜೇಂದ್ರ ||
ಸ್ಥಳ :
ದೇವನಹಳ್ಳಿ
ವರದಿ ದಿನಾಂಕ :
26-12-2025
ವಿವಿಧ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಕೆ.ಹೆಚ್ ಮುನಿಯಪ್ಪ
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 10 ಕೋಟಿ ವೆಚ್ಚದಲ್ಲಿ ವಿವಿಧ ರಸ್ತೆ ಹಾಗೂ ಅಭಿವೃದ್ದಿ ಕಾಮಗಾರಿಗಳಿಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಚಾಲನೆ ನೀಡಿದರು.
ನಮ್ಮದು ರೈತ ಪರ ಸರ್ಕಾರ, ಯಾವುದೇ ಸಂದರ್ಭ ಇದ್ದರೂ ನಾವು ರೈತರಿಗೆ ಮೊದಲ ಆದ್ಯತೆ ನೀಡುತ್ತೇವೆ. ಬಹಳ ದಿನಗಳಿಂದ ಈ ಭಾಗದ ರೈತರು ತಮ್ಮ ಸಮಸ್ಯೆಗಳನ್ನು ಹೇಳುತ್ತಿದ್ದರು. ಹಾಗೇ ಜಮೀನುಗಳಿಗೆ ಹೋಗಿ ಕೃಷಿ ಮಾಡಲು ಸೂಕ್ತ ರಸ್ತೆಯನ್ನು ಮಾಡಿಕೊಡಿ ಎಂದು ಅಹವಾಲುಗಳನ್ನು ನೀಡಿದ್ದರು. ಅದಕ್ಕೆ ಸೂಕ್ತ ಸಮಯ ಈ ದಿನವಾಗಿದೆ. ಏಕೆಂದರೆ ಇಂದು ಘಾಟಿ ಸುಬ್ರಮಣ್ಯ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ, ಈ ಶುಭದಿನದಂದು ರಸ್ತೆ ಹಾಗೂ ವಿವಿಧ ಕಾಮಗಾರಿಗೆ ಚಾಲನೆ ನೀಡಿರುವುದು ಖುಷಿಯ ವಿಚಾರ ಎಂದರು .
ಈ ಸಂದಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಬಿ ರಾಜಣ್ಣ, ದೇವನಹಳ್ಳಿ ತಾಲ್ಲೂಕು ಗ್ಯಾರಂಟಿ ಅಧ್ಯಕ್ಷರು ಸಿ ಜಗನ್ನಾಥ್, ಬಯಪಾ ಅಧ್ಯಕ್ಷರು ವಿ ಶಾಂತ್ ಕುಮಾರ್, ವಿಶ್ವನಾಥಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು ವೆಂಕಟಮ್ಮ, ತಹಶೀಲ್ದಾರ್ ಅನಿಲ್ ಎಂ, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
