ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
26-12-2025
ವಿವ ಟೆಕ್ ಕಚೇರಿಯಲ್ಲಿ ಕ್ರಿಸ್ಮಸ್ ಸಡಗರ
ಮೇಳವಿಸಿತ್ತು ಸಡಗರ ಸಂಭ್ರಮ, ಉದ್ಯೋಗಿಗಳ ಮೊಗದಲ್ಲಿ ಸಂತಸದ ಮಂದಹಾಸ. ಕೆಲಸದ ಟೆನ್ಷನ್ ಇಲ್ಲ ಗಲಿಬಿಲಿ ಗಿಜಿ ಗಿಜಿ ಎಲ್ಲವನ್ನ ಮರೆತು ಒಂದೇ ಕುಟುಂಬದ ಸದಸ್ಯರಾಗಿ ಬೆರೆತು ಹೋದರು.
ಡಿಸೆಂಬರ್ 25 ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬೆಂಗಳೂರಿನ ಯಲಹಂಕದಲ್ಲಿರುವ ವಿವ ಟೆಕ್ ಸಾಪ್ಟ್ವೇರ್ ಪ್ರೈ ಲಿಮಿಟೆಡ್ ಪ್ರಧಾನ ಕಛೇರಿಯಲ್ಲಿ ಸಂಭ್ರಮ ಮನೆಮಾಡಿತ್ತು.
ವಿವ ಟೆಕ್ ಸಾಪ್ಟ್ವೇರ್ ಪ್ರೈ ಲಿಮಿಟೆಡ್ ಮ್ಯಾನೆಜ್ಮೆಂಟ್, ಉದ್ಯೋಗಿಗಳಿಗಾಗಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಉದ್ಯೋಗಿಗಳು ಕಚೇರಿಯ ಸಭಾಂಗಣದಲ್ಲಿ ಕ್ರಿಸ್ಮಸ್ ಟ್ರೀ ,ಬಣ್ಣ ಬಣ್ಣದ ಬಲೂನು ಹಾಗೂ ಚಿತ್ತಾರಗಳಿಂದ ಅಲಂಕೃತಗೊಳಿಸಿದರು.
ಬಿಳಿ ಬಣ್ಣದ ಬಟ್ಟೆ ಧರಿಸಿ ಕಾರ್ಯಕ್ರಮದಲ್ಲಿ ಹರ್ಷೋಲ್ಲಾಸದಿಂದ ಪುಳಕಿತರಾದರು. ಇದೇ ಸಂದರ್ಭದಲ್ಲಿ ವಿವ ಟೆಕ್ ಸಾಪ್ಟ್ಬೇರ್ ಪ್ರೈ ಲಿಮಿಟೆಡ್ ಸಂಸ್ಥೆಯ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಆದ ಜಗದೀಶ ಬಿ.ಎಂ. ಮಾತನಾಡಿ, ವಿವ ಟೆಕ್ ನಡೆದು ಬಂದ ಹಾದಿಯ ಕುರಿತು ಹೇಳಿದರು.
ವಿವ ಟೆಕ್ ಇದೀಗ ಮೂರು ವಸಂತಗಳನ್ನು ಪೂರೈಸಲಿದ್ದು, ಮುಂದಿನ ದಿನಗಳಲ್ಲಿ ದುಡಿಯುವ ಕೈಗಳಿಗೆ ಉದ್ಯೋಗ ಸೃಷ್ಠಿಸುವ ಗುರಿಯನ್ನ ವಿವ ಟೆಕ್ ಹೊಂದಿದೆ ಎಂದು ಅವರು ಅಭಿಮತ ವ್ಯಕ್ತಪಡಿಸಿದರು.
ವಿವ ಅದರರ್ಥ ವಿ ಅಂದರೆ ನಾವು ವ ಎಂದರೆ ಅದ್ಭುತ. ನಾವು ಅದ್ಭುತ ಎಂದರೆ ನಾವೆಲ್ಲರೂ ಚೆನ್ನಾಗಿದ್ದೇವೆ ,ಇರುತ್ತೇವೆ ಮುಂದೆಯೂ ಇರೋಣ ಎಂಬರ್ಥ ಕಲ್ಪಿಸುತ್ತದೆ.ಎಂದರು
ನಿಮ್ಮ ವೃತ್ತಿ ಮತ್ತು ವೈಯಕ್ತಿಕ ಬದುಕನ್ನು ಸಮತೋಲನದಿಂದ ನಿಭಾಯಿಸಬೇಕು. ಜೀವನದಲ್ಲಿ ಅಡೆ ತಡೆಗಳು ಏರಿಳಿತಗಳು ಸರ್ವೆ ಸಾಮಾನ್ಯ ಅದರಿಂದ ಎದೆಗುಂದದೇ ಆತ್ಮವಿಶ್ವಾಸದಿಂದ ದೃಡ ಸಂಕಲ್ಪದಿಂದ ಗುರಿಯತ್ತ ಸಾಗಬೇಕು ಎಂದು ಉದ್ಯೋಗಿಗಳಿಗೆ ಕಿವಿ ಮಾತು ಹೇಳಿದರು. ವಿವ ಟೆಕ್ ಕಂಪನಿಯಲ್ಲಿ ಬೇಧಭಾವವಿಲ್ಲ ಇಲ್ಲಿ ಎಲ್ಲರೂ ಒಂದೇ. ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ನಾವಂದುಕೊಂಡ ಗುರಿ ತಲುಪಲು ಸಾಧ್ಯ ಎಂದು ಉದ್ಯೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬಿದರು.
ವಿವ ಟೆಕ್ ಮ್ಯಾನೆಜ್ಮೆಂಟ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಿಕ್ ಆಂಡ್ ಪ್ಲೇ ಆಟದಲ್ಲಿ ಅಡ್ಮಿನ ಧನಂಜಯ ವಿ. ವಿಜೇತರಾಗಿ ಬಹುಮಾನ ಪಡೆದರು.
ಮೈಂಡ್ ಹ್ಯಾಕ್ ಸ್ಪರ್ಧೆಯಲ್ಲಿ ಮಾರ್ಕೆಟಿಂಗ್ ಕನ್ಸಲ್ಟಂಟ್ ಶಶಿಕಾಂತ್ ವಿಜೇತರಾದರು. ದಿ ಸ್ಟ್ರಾಟಜಿ ಸಿರೀಸ್ ವಿಭಾಗದ ಸ್ಪರ್ಧೆಯಲ್ಲಿ ಅವತಾರ್ ,ಡಿಸ್ನಿ, ಮಾರ್ವೆಲ್ ಮತ್ತು ಸ್ಡ್ರೇಂಜರ್ ಎಂಬ ನಾಲ್ಕು ತಂಡಗಳು ಭಾಗವಹಿಸಿದ್ದವು ಅದರ ರೋಚಕ ಆಟದಲ್ಲಿ ಮಾರ್ವೆಲ್ ತಂಡ ಗೆಲುವು ಸಾಧಿಸಿ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿತು.
ಮಾರ್ಕೆಟಿಂಗ್ ಹೆಡ್ ಭವಾನಿ ಹಾಗೂ ಕನ್ಸಲ್ಟಂಟ್ ಹೆಡ್ ಸಿಂಚನಾ ಕಾರ್ಯಕ್ರಮ ನಿರೂಪಿಸಿದರು.
ಕೊನೆಯಲ್ಲಿ ಟೆಕ್ ಹೆಡ್ ಶರತ ಮತ್ತು ಪ್ರಜ್ವಲ್ ವಂದಿಸಿದರು
ಎಂಟರ್ಟೇನ್ಮೆಂಟ್ ಬ್ಯೂರೋ ವಿವ ನ್ಯೂಸ್ ಬೆಂಗಳೂರು.
