ವರದಿಗಾರರು :
ಗಜೇಂದ್ರ ದೇವನಹಳ್ಳಿ ||
ಸ್ಥಳ :
ದೇವನಹಳ್ಳಿ
ವರದಿ ದಿನಾಂಕ :
23-12-2025
ಬಿಜೆಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತ್ತು ದೇವನಹಳ್ಳಿ ಮಂಡಲ ಪದಾಧಿಕಾರಿಗಳ ಆಯ್ಕೆ
ಭಾರತೀಯ ಜನತಾ ಪಾರ್ಟಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ರಾಮಕೃಷ್ಣಪ್ಪ ರವರ ಸೂಚನೆ ಮೇರೆಗೆ ಬಿಜೆಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಮಂಡಲ ಪದಾಧಿಕಾರಿಗಳ ಆಯ್ಕೆಯ ಕುರಿತು ತಾಲೂಕು ಮಂಡಲ ಅಧ್ಯಕ್ಷ ಎನ್.ಎಲ್.ಅಂಬರೀಶ್ ಗೌಡ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪಾಧ್ಯಕ್ಷರುಗಳಾಗಿ ರಾಮ್ ಭಗವಾನ್,ಜಗದೀಶ್, ತಮ್ಮಯ್ಯ, ನವೀನ್ ಕುಮಾರ್ ,ವಾಸುದೇವ್ ವಿಜಯ್ ಕುಮಾರ್, ಸಿದ್ಧಲಿಂಗ ಮೂರ್ತಿ ಪ್ರಧಾನ ಕಾರ್ಯದರ್ಶಿಗಳಾಗಿ ಅನಿಲ್ ಕುಮಾರ್, ಸುಬ್ರಮಣಿ,ಕಾರ್ಯಾಲಯ ಕಾರ್ಯದರ್ಶಿಯಾಗಿ ದೇಸು ನಾಗರಾಜ್,ಆನಂದ್ ಗೌಡ.ಎಚ್,ಗಿರೀಶ್ ಆರಾಧ್ಯ, ದಾಸ.ಎಸ್.ಎಮ್, ನಾಗರಾಜ್,ಸೋಮಶೇಖರ್, ಭಾಗ್ಯಮ್ಮ, ಖಜಾಂಚಿಯಾಗಿ ಗೋವಿಂದಪ್ಪ ನೇಮಕಗೊಂಡಿದ್ದಾರೆ.
ದೇವನಹಳ್ಳಿ ಮಂಡಲದ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರುಗಳಾಗಿ ತೂಬಗೆರೆ ಮಹಾ ಶಕ್ತಿ ಕೇಂದ್ರಕ್ಕೆ ಕೃಷ್ಣಪ್ಪ( ಕಿಟ್ಟಿ), ದೇವನಹಳ್ಳಿ ನಗರಕ್ಕೆ ಅನಿಲ್ ಯಾದವ್ ,ಕುಂದಾಣ ಮಹಾ ಶಕ್ತಿ ಕೇಂದ್ರಕ್ಕೆ ಬಸವರಾಜ್, ಚನ್ನರಾಯಪಟ್ಟಣ ಮಹಾಶಕ್ತಿ ಕೇಂದ್ರಕ್ಕೆ ನವೀನ್ ಬೂದಿಗೆರೆ, ನಿಜವಾದ ಮಹಾಶಕ್ತಿ ಕೇಂದ್ರಕ್ಕೆ ಪಿ.ಎಂ .ಚಂದ್ರು, ಔಷಧಿ ಮಹಾಶಕ್ತಿ ಕೇಂದ್ರಕ್ಕೆ ರವಿಕುಮಾರ್ ಎಸ್. ಕೆ ರವರು ನೇಮಕಗೊಂಡಿದ್ದಾರೆ ಎಂದು ತಿಳಿಸಿದರು.
