ವರದಿಗಾರರು :
ರಾಮಕೃಷ್ಣೇಗೌಡ ||
ಸ್ಥಳ :
ಹುಣಸೂರು
ವರದಿ ದಿನಾಂಕ :
22-12-2025
ಬಿಸಿ ನೀರಿಗೆ ಬಿದ್ದು ಎರಡು ವರ್ಷದ ಹೆಣ್ಣು ಮಗು ಸಾವು
ಹುಣಸೂರು ತಾಲೂಕಿನ ವಿಜಯ ಗಿರಿ ಹಾಡಿಯ ನಿವಾಸಿಗಳಾದ ರಮ್ಯ ಮತ್ತು ಬಸಪ್ಪ ದಂಪತಿಗಳ ಎರಡು ವರ್ಷದ ಹೆಣ್ಣು ಮಗು ನಿಧನ.
ಮಗುವನ್ನು ತಾಯಿ ಸ್ಥಾನ ಮಾಡಿಸಲೆಂದು ಸ್ನಾನದ ಮನೆಗೆ ಕರೆದುಕೊಂಡು ಹೋಗಿದ್ದು, ನೀರು ತುಂಬಾ ಸುಡುತ್ತಿದ್ದರಿಂದ ತಣ್ಣೀರು ತರಲೆಂದು ಮನೆ ಒಳಗೆ ಹೋಗಿ ಬರುವಷ್ಟರಲ್ಲಿ ಮಗು ಸುಡುವ ನೀರಿನ ಪಾತ್ರ ಒಳಗೆ ಬಿದ್ದು ಮೈಯೆಲ್ಲಾ ಸುಟ್ಟು ಗಂಭೀರ ಸ್ಥಿತಿಯಲ್ಲಿದ್ದ, ಮಗುವನ್ನು ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕರಿಯಾಗದೆ, ಮಗು ಮೃತಪಟ್ಟಿದೆ
