ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
ಬೀದರ
ವರದಿ ದಿನಾಂಕ :
23-12-2025
ಡಿಸೆಂಬರ್ 29 ರಂದು ಬೊಮ್ಮಗೊಂಡೇಶ್ವರ ದೇವಸ್ಥಾನ ಭೂಮಿ ಪೂಜೆ
ಚಿದ್ರಿಯಲ್ಲಿ ನಡೆಯಲಿರುವ ಮಹಾತ್ಮ ಬೊಮ್ಮಗೊಂಡೇಶ್ವರ ನೂತನ ದೇವಸ್ಥಾನ ಕಟ್ಟಡ ನಿರ್ಮಾಣ ಭೂಮಿ ಪೂಜೆ ಕಾರ್ಯಕ್ರಮದ ಭಿತ್ತಿಪತ್ರವನ್ನು ನಗರದ ಬೊಮ್ಮಗೊಂಡೇಶ್ವರ ವೃತ್ತದಲ್ಲಿ ಸೋಮವಾರ ಬಿಡುಗಡೆ ಮಾಡಲಾಯಿತು
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ ಭಿತ್ತಿ ಪತ್ರ ಬಿಡುಗಡೆ ಮಾಡಿದರು.ನಗರದ ಚಿದ್ರಿ ಮಹಾತ್ಮ ಬೊಮ್ಮಗೊಂಡೇಶ್ವರ ಜನ್ಮ ಸ್ಥಳವಾಗಿದೆ. ಹೀಗಾಗಿ ಚಿದ್ರಿಯ ಪವಿತ್ರ ಸ್ಥಳದಲ್ಲಿ ಮಹಾತ್ಮ ಬೊಮ್ಮಗೊಂಡೇಶ್ವರ ಜನ್ಮಭೂಮಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಅವರ ದೇವಸ್ಥಾನ ನಿರ್ಮಿಸಲಾಗುತ್ತಿದೆ. ಡಿ. 29ಕ್ಕೆ ದೇವಸ್ಥಾನ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರೂ ಆದ ಟ್ರಸ್ಟ್ ಅಧ್ಯಕ್ಷ ಪಂಡಿತರಾವ್ ಚಿದ್ರಿ ತಿಳಿಸಿದರು
ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ಪೌರಾಡಳಿತ ಸಚಿವ ರಹೀಂಖಾನ್, ಜನಪ್ರತಿನಿಧಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ .
ಗೊಂಡ (ಕುರುಬ) ಸಮಾಜದವರು ಹಾಗೂ ಸಾರ್ವಜನಿರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ನಿವೃತ್ತ ಕೃಷಿ ಅಧಿಕಾರಿ ಎಂ.ಎಸ್. ಕಟಗಿ, ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಜೋಳದಾಪಕೆ ಮಾತನಾಡಿದರು.ಪ್ರಮುಖರಾದ ಭಯ್ಯಾ ಸಾಹೇಬ ಇಂದಾಪುರ, ವಿದ್ಯಾಸಾಗರ, ಶ್ರೀಕಾಂತ, ಶ್ರಾವಣ ಫುಲೇಕರ್, ಪಂಡಿತ ಎಂ.ಎಸ್, ರಮೇಶ ಮಾಶೆಟ್ಟಿ, ದತ್ತು ಮೇತ್ರೆ, ಸಂಗಪ್ಪ ಚಿದ್ರಿ, ಹಣಮಂತ ಮಲ್ಕಾಪುರೆ, ಸಚಿನ್ ಮಲ್ಕಾಪುರೆ, ಹಣ್ಮು ಪಾಜಿ, ಲೋಕೇಶ ಮರ್ಜಾಪುರ, ತುಕಾರಾಮ ಚಿದ್ರಿ, ರಾಜು ಜೇಯಮ್, ವಿಶ್ವನಾಥ ಮೇತ್ರೆ, ವಿಜಯ ವಡ್ಡಿ, ರಮೇಶ್ ಮರ್ಜಾಪುರ, ವೆಂಕಟ ಚಿದ್ರಿ, ಶಿವಕುಮಾರ ವಗ್ಗೆ, ಬಸು ವಗ್ಗೆ, ಅನಿಲ್ ವಗ್ಗೆ, ನಾಗೇಶ ವಗ್ಗೆ, ರಾಜಶೇಖರ ವಗ್ಗೆ, ಆನಂದ ಕಮಠಾಣ, ಪವನ್ ಶ್ರೀಮಂಡಲ್ ಮತ್ತಿತರರು ಇದ್ದರು
