ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
25-12-2025
ಶಾಂತಿದೂತ ಏಸುಕ್ರಿಸ್ತನ ಜನುಮದಿನ
ಶಾಂತಿದೂತ ಏಸುವಿನ ಜನ್ಮದಿನದ ಪ್ರಯುಕ್ತ ವಿಶ್ವದಾದ್ಯಂತ ಸಂಭ್ರಮದಿಂದ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಗುತ್ತಿದೆ. ಬೆಂಗಳೂರಿನ ವಿವಿಧ ಚರ್ಚ್ಗಳಲ್ಲಿ ಏಸು ಜನ್ಮದಿನದ ಮುನ್ನಾ ದಿನ ಬುಧವಾರದಿಂದಲೇ ಚರ್ಚ್ಗಳಲ್ಲಿ ಸಡಗರ ಸಂಭ್ರಮ ಮನೆಮಾಡಿತ್ತು.
ಬೆಂಗಳೂರಿನಲ್ಲಿರುವ ವಿವೇಕನಗರದ ಚರ್ಚ್ನಲ್ಲಿ ಆರ್ಚ್ ಬಿಷಪ್ ಡಾ.ಪೀಟರ್ ಶಾಂತಿ ಸೌಹಾರ್ದತೆಯ ಕುರಿತು ಬೋಧನೆ ಮಾಡಿದರು.
ಸೇಂಟ್ ಬೆಸಿಲಿಕ ಚರ್ಚಗಳಲ್ಲಿ ಬಾಲಯೇಸುವಿನ ಸ್ವರೂಪ ಹಾಗೂ ಕ್ರಿಸ್ಮಸ್ ಟ್ರೀ ಇಟ್ಟು ಪ್ರಾರ್ಥನೆ ಸಲ್ಲಿಸಿದರು. ನಂತರ ಬೈಬಲ್ ಅಧ್ಯಾಯಗಳನ್ನು ಬೋಧಿಸಿ ಏಸುವಿನ ಸಂದೇಶ ನೀಡಿದರು.
ಬುಧವಾರ ರಾತ್ರಿ ವಿವಿಧ ಚರ್ಚಗಳಲ್ಲಿ ಅಲಂಕೃತಗೊಂಡ ಬಣ್ಣಬಣ್ಣದ ನಕ್ಷತ್ರಗಳು. ಆಕಾಶಬುಟ್ಟಿ ಕ್ರಿಸ್ಮಸ್ ಟ್ರೀಗಳು ಹಾಗೂ ಸಾಂಸೃತಿಕ ಕಾರ್ಯಕ್ರಮಗಳ ಸಂಭ್ರಮವು ಹೊಸ ಮೆರಗನ್ನ ನೀಡಿದವು.
