ವರದಿಗಾರರು :
ಜಗದೀಶ್ ಕೆ ಸಿ ||
ಸ್ಥಳ :
ಕೋಲಾರ
ವರದಿ ದಿನಾಂಕ :
22-12-2025
ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್: ಕೋಲಾರದ ಜಗದೀಶ್ ಕೆ.ಸಿ.ಗೆ ಚಿನ್ನ–ಕಂಚು
ಮಾಸ್ಟರ್s ಅಥ್ಲೆಟಿಕ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ರವರು ಕೋಲಾರ ಜಿಲ್ಲೆಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಮಾಸ್ಟರ್s ಅಥ್ಲೆಟಿಕ್ಸ್ 44 ಚಾಂಪಿಯನ್ ಷಿಪ್ 2025 ರಲ್ಲಿ ಕೋಲಾರದ ಕಾಮಧೇನಹಳ್ಳಿ ಜಗದೀಶ್ ಕೆ ಸಿ ಎಂಬುವವರು ಒಂದು ಚಿನ್ನ ಮತ್ತು ಒಂದು ಕಂಚು ಪದಕ ಗೆದ್ದು ಮುಂದಿನ ತಿಂಗಳು ಕೇರಳದಲ್ಲಿ ನಡೆಯುವ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮುಖ್ಯವಾಗಿ ಇವರು ಸಹ ನಮ್ಮ ವಿವಾ ನ್ಯೂಸ್ ಜಿಲ್ಲಾ ವರದಿಗಾರರಾಗಿರುವುದು ವಿಶೇಷ..... ಈ ಸಮಯದಲ್ಲಿ ತಮ್ಮ ಕ್ರೀಡಾ ಗುರುಗಳಾದ ಅಂತರಾಷ್ಟ್ರ ಮಟ್ಟದ ಕ್ರೀಡಾಪಟು ಮೂರಂಡಹಳ್ಳಿ ಮಾರಪ್ಪ ನವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ....
