ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
20-12-2025
ಜೈ ಹನುಮಾನ್
ಕಾಂತಾರಾ ಚಾಪ್ಟರ್ ಒಂದರನಂತರ ಸಿನಿಪ್ರಿಯರಲ್ಲಿ ಕಾಡ್ತಿರೋ ಕುತೂಹಲ ಏನೆಂದರೆ, ರಿಷಬ್ ಶೆಟ್ಟಿ ಮುಂದೆ ಯಾವ ಸಿನೆಮಾ ಕೊಡ್ತಾರೆ ಅಂತ.
ಅದಕ್ಕೆ ಉತ್ತರ ಸಿಕ್ಕಾಗಿದೆ. ಅಂದ ಹಾಗೆ ರಿಷಬ್ ಚಿತ್ರ ಅಂದ್ರೆ ಅದರಲ್ಲೇನೋ ವಿಶೇಷ ಇರ್ತವೆ. ಅದ್ರಲ್ಲೂ ಡಿವೈನ್ ಸ್ಟಾರ್ ಅಂತಾನೇ ಖ್ಯಾತಿಗಳಿಸಿದ ಸ್ಟಾರ್ ನಟನ ಮುಂದಿನ ಚಿತ್ರ ಯಾವದು ಗೊತ್ತಾ??
ಜೈ ಹನುಮಾನ್
ಇದು ಮೈಥಾಲಾಜಿ ಕಥಾಹಂದರದ ಚಿತ್ರವಾಗಲಿದೆ. ಈ ಚಿತ್ರದಲ್ಲಿ ರಿಷಭ್ ಶೆಟ್ಟಿ ಹನುಮಂತನ ಪಾತ್ರಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಜೈ ಹನುಮಾನ್ ಶೀರ್ಷಿಕೆಯ ಸಿನೆಮಾ ಭಕ್ತಿ ತ್ಯಾಗ ಶಕ್ತಿ ಮತ್ತು ಧೈರ್ಯವನ್ನ ಪ್ರತಿಬಿಂಬಿಸುತ್ತೆ.
ರಿಷಭ್ ಅಭಿನಯದ ಜೈ ಹನುಮಾನ್ ಚಿತ್ರ ಕೇವಲ ಮನರಂಜನೆ ಮಾತ್ರವಲ್ಲದೇ ಭಾರತೀಯ ಪುರಾಣ ,ಸಂಸೃತಿ ಮತ್ತು ಭಕ್ತಿಯ ಭಾವವನ್ನು ಮೂಡಿಸುವ ವೈಶಿಷ್ಠ ಹೊಂದಿದೆ ಎನ್ನಲಾಗುತ್ತಿದೆ
ದೊಡ್ಡ ಕ್ಯಾನ್ವಾಸ್ ಮೂಲಕ ಜೈ ಹನುಮಾನ್ ಸಿನೆಮಾವನ್ನು ಪ್ರಶಾಂತ್ ವರ್ಮಾ ನಿರ್ದೇಶಿಸುತ್ತಿದ್ದು ಪ್ಯಾನ ಇಂಡಿಯಾ ಸಿನೆಮಾ ಆಗಿರಲಿದೆ .
