ವರದಿಗಾರರು :
ಗಜೇಂದ್ರ ದೇವನಹಳ್ಳಿ ||
ಸ್ಥಳ :
ದೇವನಹಳ್ಳಿ
ವರದಿ ದಿನಾಂಕ :
24-12-2025
ಕಾಂಗ್ರೆಸ್ ಸರ್ಕಾರದ ದ್ವೇಷಭಾಷಣ ಅಪರಾಧಗಳ ಮಸೂದೆ ಕೂಡಲೇ ವಾಪಸ್ ಪಡೆಯುಂತೆ ಬಿಜೆಪಿ ಪ್ರತಿಭಟನೆ
ಸಂವಿಧಾನ ಶಿಲ್ಪಿ ಡಾ.ಬಿಆರ್.ಅಂಬೇ ಡ್ಕರ್ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಸರ್ಕಾರ ಕಿತ್ತುಕೊಳ್ಳುತ್ತಿದ್ದು. ಸರ್ಕಾರದ ಈ ನಡೆ ಖಂಡಿಸಿ ಬಿಜೆಪಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ನೇತೃತ್ವದಲ್ಲಿ ತಾಲ್ಲೂಕು ದಂಡಾದಿಕಾರಿ ಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ದೇವನಹಳ್ಳಿ ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ದ್ವೇಷಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆ ವಾಪಸ್ ಹಾಗೂ ಪಕ್ಷದ ಕಚೇರಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೊತ್ಸವ ಅಂಗವಾಗಿ ಗಣ್ಯರ ಭಾವಚಿತ್ರಕ್ಕೆ ಪುಷ್ಪ ಮಾಲೆ ಅರ್ಪಿಸಿದ ನಂತರ ಮಾತನಾಡಿದರು.
ನಾಗರೀಕರ ಮೂಲ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಸರ್ಕಾರದ ನೀತಿಗಳ ವಿರುದ್ಧ ಟೀಕೆ, ಸಾಮಾಜಿಕ ಚರ್ಚೆ, ವ್ಯಂಗ್ಯ ಮಾಡುವುದು ಅಥವಾ ಸತ್ಯವನ್ನು ಹೇಳುವುದನ್ನೂ ಕೂಡ ದ್ವೇಷ ಎಂದು ಪರಿಗಣಿಸುವ ಅಪಾಯವಿದೆ. ಜನರು ಭಯದಿಂದ ಮಾತನಾಡದೆ ಇರುವುದು ಸರ್ಕಾರದ ಉದ್ದೇಶವೇ ಎಂಬ ಪ್ರಶ್ನೆ ಮೂಡುತ್ತಿದ್ದು ಇಂತಹ ಬೆಳವಣಿಗೆಗಳನ್ನು ಸಂಪೂರ್ಣವಾಗಿ ಕಿತ್ತೊಗೆಯಲೇಬೇಕು . ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಬಲಿಷ್ಠತೆಯನ್ನು ಸಹಿಸಲಾಗದ ಕಾಂಗ್ರೆಸ್ ಹಾಗೂ ವಿರೋಧಪಕ್ಷಗಳಿಗೆ ತಳಮಳ ಹೆಚ್ಚಾಗಿದೆ.
ಇತ್ತಿಚೇಗೆ ದೊಡ್ಡಬಳ್ಳಾಪುರ ತಾಲೂಕಿನ ಶೆಟ್ಟಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಯಾರೊಬ್ಬರ ಬೆಂಬಲವಿಲ್ಲದೆ ಅಧಿಕಾರಕ್ಕೆ ಬಂದಿದೆ. ಜನ ಅಭಿವೃದ್ಧಿಯನ್ನು ಬಯಸುತ್ತಿದ್ದಾರೆ . ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅನುಧಾನ ನೀಡದ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರಂಟಿಯ ಜೊತೆಗೆ ಗುಂಡಿ ಭಾಗ್ಯವನ್ನು ಕೂಡ ಕೊಡುಗೆಯಾಗಿ ನೀಡಿದ್ದಾರೆ. ಅಭಿವೃದ್ಧಿ ಕಡೆಗೆಣಿಸಿದ ಮುಖ್ಯ ಕಾರಣದಿಂದಲೇ ಕಾಂಗ್ರೆಸ್ ಅನ್ನು ಕೇವಲ ಮೂರು ಸ್ಥಾನ ಗೆಲ್ಲಿಸಿಕೊಳ್ಳುವ ಮೂಲಕ ಅವಮಾನ ಕೀಡಾಗಿದೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಂಬರೀಶ್ ಗೌಡ, ಉಪಾಧ್ಯಕ್ಷರ ಜಗದೀಶ ಮುಖಂಡರಾದ ಬಿಕೆ. ನಾರಾ ಯಣಸ್ವಾಮಿ, ನಾಗೇಶ್ ಬಾಬು, ಅನೀಲ್, ಯಲಿ ಯೂರು ಆನಂದ್, ಅರುವ ನಹಳ್ಳಿ ವೆಂಕಟೇಶ್, ಬೂದಿಗೆರೆ ನವೀನ್, ರವಿ ಕುಮಾರ್, ಎಸ್ಎಂ.ದಾಸ್, ಕದಿರಪ್ಪ, ಭಾಗ್ಯಮ್ಮ ಇತರರು ಹಾಜರಿದ್ದರು.
