ಲೈವ್ ಟಿವಿ ನ್ಯೂಸ್

ದಿನಾಂಕ : 17-09-2025

ಬಾಡಿಗೆ ಅಂಚೆ ಕಚೇರಿ ಉದ್ಘಾಟಿಸಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಕೋಳೂರ

ವರದಿಗಾರರು : ಫಯಾಜ್ ತೇಲಿ,
ವರದಿ ಸ್ಥಳ :ಬಾಗಲಕೋಟೆ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 14+

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಅಧಿಕಾರವನ್ನು ಸ್ವಂತ ಮನೆಯಲ್ಲಿ ಸರ್ಕಾರದ ಬಾಡಗೆ ಪಡೆಯದೇ 50.ವರ್ಷಗಳಿಂದ ಶಿವಣ್ಬ ಶಾಂತಪ್ಪ ಯಾಳಿಗಿ ಇವರು ಇಲ್ಲಿವರೆಗೂ ಕಾರ್ಯ ನಿರ್ವಹಿಸುತ್ತಾ ಬಂದರು ಇವರ ವಯೊಮಿತಿ ಹಿನ್ನಲೆ ನಿವೃತ್ತಿ ಹೊಂದಿದ ನಂತರ ನೂತನ ಪೋಸ್ಟ್ ಮಾಸ್ಟರ್ ಅಧಿಕಾರ ಸ್ವೀಕರಿಸಿದ ಅಬ್ದುಲ್ ರಹಮಾನ್.ಇಟಿಗಿ ಇವರಿಗೆ ಅಂಚೆ ಕಚೇರಿಯ ಸಮಸ್ಯೆಯಿಂದಾಗಿ ದಿನನಿತ್ಯ ಕಾರ್ಯ ನಿರ್ವಹಿಸಲು ತಾತ್ಕಾಲಿಕ ಖಾಸಗಿ ಬಾಡಿಗೆ ಪೋಸ್ಟ್ ಅಂಚೆ ಕಚೇರಿಯನ್ನು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ಇವರು ಉದ್ಘಾಟಿಸಿದರು.

ಈ ವೇಳೆಯಲ್ಲಿ ಪೋಸ್ಟ್ ಅಂಚೆ ಕಚೇರಿಯ ಹೊಸ ಕಟ್ಟಡದ ಕಾರ್ಯಾಲಯ ಅವಶ್ಯವಾಗಿ ಸರ್ಕಾರ ಮಾಡಿಕೊಡಬೇಕು ಯಾವಾಗಲೂ ಬಾಡಿಗೆ ಕಟ್ಟಡ ಶಾಶ್ವತವಲ್ಲ ಸರ್ಕಾರಿ ಪೋಸ್ಟ್ ಅಂಚೆ ಕಚೇರಿ ಕಟ್ಟಡವಾದರೆ ಶಾಶ್ವತವಾಗಿ ಪೋಸ್ಟ್ ಅಂಚೆ ಕಚೇರಿ ನಡೆಸಲು ಅಧಿಕಾರಿಗಳಿಗೆ ಅನುಕೂಲವಾಗುತ್ತದೆ ಇದರ ಜೊತೆಯಲ್ಲಿ ಡಿಜಿಟಲ್ ಕಟ್ಟಡ ನಿರ್ಮಾಣವಾಗಬೇಕು ಅಂಚೆ ಕಚೇರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಿ ಕೊಡುವಂತಾಗಬೇಕು ಎಂದುನಿವೃತ್ತಿ ಮುಖ್ಯೋಪಾಧ್ಯಾಯರಾದ ಶಿವಣ್ಣ ಈಶಪ್ಪ ಯಾಳಗಿ ಇವರು ಮಾತನಾಡಿ ಮನವಿ ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ. ಬಸವರಾಜ ಪೂಣ್ಯದ. ವಸಂತ್ ಗಾಣಿಗೇರ. ಇನ್ನಿತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand